ADVERTISEMENT

MarQ M3: ಮೊದಲ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಫ್ಲಿಪ್‌ಕಾರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2021, 10:46 IST
Last Updated 27 ಸೆಪ್ಟೆಂಬರ್ 2021, 10:46 IST
ಫ್ಲಿಪ್‌ಕಾರ್ಟ್ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ
ಫ್ಲಿಪ್‌ಕಾರ್ಟ್ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ   

ಬೆಂಗಳೂರು: ಫ್ಲಿಪ್‌ಕಾರ್ಟ್ ಒಡೆತನದ ಬ್ರ್ಯಾಂಡ್ ಮಾರ್ಕ್, ಭಾರತದ ಮಾರುಕಟ್ಟೆಗೆ ಮೊದಲ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಮಾರ್ಕ್ ಬ್ರ್ಯಾಂಡ್ ಮೂಲಕ ಫ್ಲಿಪ್‌ಕಾರ್ಟ್ ಈ ಮೊದಲು ಸ್ಮಾರ್ಟ್ ಟಿವಿ, ಸ್ಪೀಕರ್ ಮತ್ತು ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಬಿಡುಗಡೆ ಮಾಡಿತ್ತು.

ಈ ಬಾರಿ ಹೊಸದಾಗಿ ಮೊದಲ ಮಾರ್ಕ್ ಎಂ3ಸ್ಮಾರ್ಟ್ ಎನ್ನುವ ಆಕರ್ಷಕ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ADVERTISEMENT

ಬೆಲೆ ಮತ್ತು ಲಭ್ಯತೆ

ಹೊಸ ಮಾರ್ಕ್ ಎಂ3 ಸ್ಮಾರ್ಟ್, 2 GB + 32 GB ಮಾದರಿಗೆ ದೇಶದಲ್ಲಿ ₹7,999 ದರವಿದೆ. ಆದರೆ ಸೀಮಿತ ಅವಧಿಯ ಕೊಡುಗೆಯಾಗಿ ₹6,299ಗೆ ಲಭ್ಯವಾಗುತ್ತಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಅವಧಿಯಲ್ಲಿ ಹೊಸ ಫೋನ್ ಖರೀದಿಗೆ ದೊರೆಯಲಿದೆ.

6.088 ಇಂಚಿನ ಡಿಸ್‌ಪ್ಲೇ, 13 ಮೆಗಾಪಿಕ್ಸೆಲ್ ಸಹಿತ ಹಿಂಬದಿಯಲ್ಲಿ ಎರಡು ಕ್ಯಾಮರಾ, 5 ಮೆಗಾಪಿಕ್ಸೆಲ್ ಸೆಲ್ಫಿ, 5,000mAh ಬ್ಯಾಟರಿ ಇದರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.