ADVERTISEMENT

ನೋಕಿಯಾ ಸಿ ಸರಣಿಯ 3 ಬಜೆಟ್‌ ಫೋನ್‌ಗಳ ಅನಾವರಣ; ಆಂಡ್ರಾಯ್ಡ್ 11 ಗೋ ಆವೃತ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2022, 9:03 IST
Last Updated 28 ಫೆಬ್ರುವರಿ 2022, 9:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹೆಚ್ಎಂಡಿ ಗ್ಲೋಬಲ್ ತನ್ನ ನೋಕಿಯಾ 'ಸಿ ಸರಣಿ' ಬಜೆಟ್ ಶ್ರೇಣಿಯ ಮೂರು ಆಂಡ್ರಾಯ್ಡ್ ಫೋನ್‌ಗಳನ್ನು ಅನಾವರಣ ಮಾಡಿದೆ. ಈ ಫೋನ್‌ಗಳು ಆಂಡ್ರಾಯ್ಡ್ 11 ಗೋ ಕಾರ್ಯಾಚರಣೆ ವ್ಯವಸ್ಥೆಯನ್ನು ಒಳಗೊಂಡಿದೆ.

ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ (ಎಂಡಬ್ಲ್ಯುಸಿ) 2022, ಮೊಬೈಲ್‌ ಫೋನ್‌ಗಳ ಪ್ರದರ್ಶನ ಮೇಳದಲ್ಲಿ ನೋಕಿಯಾ ಹೊಸ ಫೋನ್‌ಗಳನ್ನು ಪರಿಚಯಿಸಿದೆ. ಇದರೊಂದಿಗೆ ಇಯರ್‌ಬಡ್ಸ್‌ ಹಾಗೂ ಹೆಡ್‌ಫೋನ್‌ಗಳನ್ನೂ ಅನಾವರಣ ಮಾಡಿದೆ.

ನೋಕಿಯಾ ಸಿ21, ಸಿ21 ಪ್ಲಸ್‌ ಹಾಗೂ ನೋಕಿಯಾ ಸಿ ಸೆಕೆಂಡ್‌ ಎಡಿಷನ್‌ ಫೋನ್‌ಗಳನ್ನು ಪ್ರದರ್ಶಿಸಲಾಗಿದೆ.

ADVERTISEMENT

ನೋಕಿಯಾ ಸಿ21 ಪ್ಲಸ್‌: 6.5 ಇಂಚು ಡಿಸ್‌ಪ್ಲೇ ಹೊಂದಿರುವ ನೋಕಿಯಾ ಸಿ21 ಪ್ಲಸ್‌ ಫೋನ್‌ನಲ್ಲಿ ಯೂನಿಸಾಕ್‌ ಸಿಎಸ್‌9863ಎ ಚಿಪ್‌ಸೆಟ್‌, ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳು (13ಎಂಪಿ + 2ಎಂಪಿ), ಸೆಲ್ಫಿಗಾಗಿ 5ಎಂಪಿ, ದೂಳು ಮತ್ತು ನೀರಿನ ಹನಿಗಳಿಂದ ರಕ್ಷಣಾ ವ್ಯವಸ್ಥೆ ಹಾಗೂ ಮೈಕ್ರೊ ಯುಎಸ್‌ಬಿ ಕನೆಕ್ಟರ್‌ ಅಳವಡಿಸಲಾಗಿದೆ.

2ಜಿಬಿ ಮತ್ತು 4ಜಿಬಿ ರ್‍ಯಾಮ್‌, 32ಜಿಬಿ ಮತ್ತು 64ಜಿಬಿ ಸಂಗ್ರಹ ಸಾಮರ್ಥ್ಯ; 4,000ಎಂಎಎಚ್‌ ಅಥವಾ 5,000ಎಂಎಎಚ್ ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ. ಹೆಡ್‌ಫೋನ್‌ ಜ್ಯಾಕ್‌ ಮತ್ತು ಎಫ್‌ಎಂ ರೇಡಿಯೊ ಸಹ ಇದೆ. ಬೆಲೆ 119 ಯೂರೋಸ್‌ (ಅಂದಾಜು ₹10,050) ಇದೆ.

ನೋಕಿಯಾ ಸಿ21: 6.5 ಎಚ್‌ಡಿ+ಎಲ್‌ಸಿಡಿ ಡಿಸ್‌ಪ್ಲೇ, ಹಿಂಬದಿಯಲ್ಲಿ 8ಎಂಪಿ ಕ್ಯಾಮೆರಾ, ಫಿಂಗರ್‌ಪ್ರಿಂಟ್‌ ಸೆನ್ಸರ್‌ ಮತ್ತು ಸೆಲ್ಫಿಗಾಗಿ 5ಎಂಪಿ ಕ್ಯಾಮೆರಾ, 3ಜಿಬಿ ರ್‍ಯಾಮ್‌ ಮತ್ತು 32ಜಿಬಿ ಸಂಗ್ರಹ ಸಾಮರ್ಥ್ಯ, 3,000ಎಂಎಎಚ್‌ ಬ್ಯಾಟರಿ ಇದ್ದು, 5ವ್ಯಾಟ್‌ ಚಾರ್ಜಿಂಗ್‌ ವ್ಯವಸ್ಥೆ ಇದೆ. ಬೆಲೆ 99 ಯೂರೋಸ್‌ (ಅಂದಾಜು ₹8,400) ನಿಗದಿಯಾಗಿದೆ.

ನೋಕಿಯಾ ಸಿ ಸೆಕೆಂಡ್‌ ಎಡಿಷನ್‌: 5.7 ಇಂಚು ಡಿಸ್‌ಪ್ಲೇ, 1ಜಿಬಿ/ 2ಜಿಬಿ ರ್‍ಯಾಮ್‌, 32ಜಿಬಿ ಸಂಗ್ರಹ ಸಾಮರ್ಥ್ಯ, 2,400ಎಂಎಎಚ್‌ ಬ್ಯಾಟರಿ ಇದೆ. ಬೆಲೆ 79 ಯೂರೋಸ್‌ (ಅಂದಾಜು ₹6,700) ನಿಗದಿಯಾಗಿದೆ.

ಈ ಎಲ್ಲ ಮಾದರಿಯ ಫೋನ್‌ಗಳು 4ಜಿ ಎಲ್‌ಟಿಇ ಸಾಧನಗಳಾಗಿದ್ದು, ಆ್ಯಂಡ್ರಾಯ್ಡ್‌ 11 ಗೋ ಆವೃತ್ತಿ ಹೊಂದಿದೆ. ಹೊಸ ಫೋನ್‌ಗಳು ಆಯ್ದ ಮಾರುಕಟ್ಟೆಗಳಲ್ಲಿ ಏಪ್ರಿಲ್‌ನಿಂದ ಖರೀದಿಗೆ ಸಿಗಲಿದೆ.

ನೋಕಿಯಾ 'ಇಯರ್‌ಬಡ್ಸ್‌2+' ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ 24 ಗಂಟೆಗಳ ವರೆಗೂ ಬಳಸಬಹುದು. ನಾಯ್ಸ್‌ ಕ್ಯಾನ್ಸೆಲೇಷನ್‌, ಬೆವರು ಮತ್ತು ನೀರಿನ ಹನಿಗಳಿಂದ ರಕ್ಷಣೆಗೆ ವ್ಯವಸ್ಥೆ ಇದೆ. ಬಿಳಿ ಮತ್ತು ಕಪ್ಪು ಎರಡು ಬಣ್ಣಗಳಲ್ಲಿ ಇಯರ್‌ಬಡ್ಸ್‌2+ ಸಿಗಲಿದೆ. ಇದರ ಬೆಲೆ 39 ಯೂರೋಸ್‌ (ಅಂದಾಜು ₹3,300) ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.