
GT6 ಸರಣಿಯ ಸ್ಮಾರ್ಟ್ ವಾಚ್
GT6 ಸರಣಿಯ ಸ್ಮಾರ್ಟ್ ವಾಚ್
ಹುವಾವೆ ಸಂಸ್ಥೆ ತನ್ನ ಇತ್ತೀಚಿನ ಪ್ರೀಮಿಯಂ ಸ್ಮಾರ್ಟ್‌ವಾಚ್ ಸರಣಿಯಯಾಗಿರುವ ಹುವಾವೆ GT6 ಮತ್ತು ಹುವಾವೇ GT6 Proಗಳನ್ನು ಭಾರತೀಯ ಮಾರುಕಟ್ಟೆಗೆ ಇಂದಿನಿಂದ (ಸೆಪ್ಟೆಂಬರ್ 24) ಬಿಡುಗಡೆ ಮಾಡಿದೆ. ಇದನ್ನು ಮುಂದಿನ ಪೀಳಿಗೆಯ ಕಾರ್ಯಕ್ಷಮತೆ, ಬಾಳಿಕೆ ಮತ್ತು ಫಿಟ್‌ನೆಸ್ ಟ್ರ್ಯಾಕಿಂಗ್‌ಗಾಗಿ ವಿನ್ಯಾಸಗೊಳಿಲಾಗಿದೆ.
ಕಾರ್ಯಕ್ಷಮತೆ ಹೇಗಿದೆ?
ಉತ್ತಮ ಗುಣಮಟ್ಟದ ಅತೀ ಹೆಚ್ಚು ಸಮಯ ಬಾಳಿಕೆ ಬರುವ ಬ್ಯಾಟರಿ ವ್ಯವಸ್ಥೆ ಹೊಂದಿದೆ.
ಹುವಾವೆ GT6 ಸರಣಿಯು ಹೊರಾಂಗಣ ಕ್ರೀಡೆಗಳ ಟ್ರ್ಯಾಕಿಂಗ್, ಹೃದಯ ಬಡಿತದ ನಿಖರತೆಯನ್ನು ತಿಳಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಮೊದಲಿಗಿಂತಲೂ ನಿಖರ ಟ್ರ್ಯಾಕಿಂಗ್‌ಗಾಗಿ ಗಮನಾರ್ಹ ಅಪ್‌ಡೇಟ್ ಮಾಡಲಾಗಿದೆ.
ಎರಡೂ ಮಾದರಿಗಳು ಕೂಡ ಸುಧಾರಿತ ಹೊರಾಂಗಣ ಕ್ರೀಡೆಯ ಟ್ರ್ಯಾಕಿಂಗ್ ಮತ್ತು ಹೆಚ್ಚು ನಿಖರವಾದ ಸೈಕ್ಲಿಂಗ್ ಪವರ್ ಟ್ರ್ಯಾಕಿಂಗ್ ಅನ್ನು ಒಳಗೊಂಡಿವೆ.
ಇದನ್ನು ಸೈಕಲಿಸ್ಟ್‌ಗಳು, ಓಟಗಾರರು ಮತ್ತು ಸಾಹಸ ಕ್ರೀಡಾಪಟುಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇವು 21 ದಿನಗಳವರೆಗಿನ ದೀರ್ಘ ಕಾಲಿಕ ಬ್ಯಾಟರಿ ಬಾಳಿಕೆ ದೀರ್ಘಕಾಲಿನ ವಿಶ್ವಾಸಾರ್ಹತೆಯನ್ನು ಹೊಂದಿವೆ.
ಹುವಾವೆ GT6 Pro ಇದು 3,000 ನಿಟ್‌ಗಳವರೆಗೆ ತಲುಪುವ ಅಲ್ಟ್ರಾ ಹೊಳೆಯುವ ಅಮೋಲ್ಡ್ ಡಿಸ್‌ಪ್ಲೇ ಹೊಂದಿದ್ದು, ನೇರ ಸೂರ್ಯನ ಬೆಳಕು ಮತ್ತು ಹೆಚ್ಚು ಬಿಸಿಲಿನಲ್ಲೂ ಉತ್ತಮವಾಗಿ ಗೋಚರಿಸುತ್ತದೆ.
ಕ್ರೀಡಾಪಟುಗಳಿಗಾಗಿಯೇ ವಿನ್ಯಾಸಗೊಳಿಸಲಾಗಿರುವ GT6 Pro ಹುವಾವೇಯ ಇತ್ತೀಚಿನ ಸೂರ್ಯನ ಬೆಳಕಿನ GPS ಸ್ಥಾನೀಕರಣ ವ್ಯವಸ್ಥೆಯನ್ನು ಒಳಗೊಂಡಿದೆ. ಇದು ಟ್ರಯಲ್ ರನ್ನಿಂಗ್, ಹೈಕಿಂಗ್, ಸೈಕ್ಲಿಂಗ್ ಮತ್ತು ಇತರ ಹೊರಾಂಗಣ ಚಟುವಟಿಕೆಗಳಿಗೆ ಅನುಕೂಲಕರವಾಗಿದೆ.
ಹುವಾವೆ GT6 ಮತ್ತು ಹುವಾವೇ GT6 ಪ್ರೊ ಫ್ಲಿಪ್‌ಕಾರ್ಟ್ ಮತ್ತು RTC ಇಂಡಿಯಾ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿದೆ.
ಹುವಾವೆ ವಾಚ್ GT6 (46mm) ಹಸಿರು, ಬೂದು ಮತ್ತು ಕಪ್ಪು ಬಣ್ಣದ ರೂಪಾಂತರಗಳು ₹21,999 ಬೆಲೆ ಹೊಂದಿದೆ.
ಹುವಾವೆ ವಾಚ್ GT6 (41mm) ಕಪ್ಪು, ಬಿಳಿ, ನೇರಳೆ ಮತ್ತು ಕಂದು ಬಣ್ಣದ ರೂಪಾಂತರಗಳು ₹21,999. ಇದರ ಚಿನ್ನದ ಬಣದ ರೂಪಾಂತರಕ್ಕೆ 41mm ರೂಪಾಂತರಕ್ಕೆ ₹24,999 ಬೆಲೆ ಹೊಂದಿದೆ.
ಹುವಾವೆ GT6 Pro ಇದರ 46mm ಕಪ್ಪು ಮತ್ತು ಕಂದು ಬಣ್ಣದ ರೂಪಾಂತರಗಳಿಗೆ ₹28,999 ಆಗಿದೆ. ಮತ್ತು ಟೈಟಾನಿಯಂ ಬಣ್ಣದ ರೂಪಾಂತರಕ್ಕೆ ₹39,999 ಕ್ಕೆ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.