ADVERTISEMENT

5G Phone: ಭಾರತದಲ್ಲಿ ದಿನಕ್ಕೆ ₹44ರಂತೆ 5G ಸ್ಮಾರ್ಟ್‌ಫೋನ್ ಲಭ್ಯ–ಸ್ಯಾಮ್‌ಸಂಗ್

ಭಾರತದಲ್ಲಿ ಕಡಿಮೆ ದರಕ್ಕೆ 5G ಸ್ಮಾರ್ಟ್‌ಫೋನ್ ಲಭ್ಯವಿದ್ದು, ಜನರಿಗೆ ಪ್ರಯೋಜನ ಎಂದ ಕಂಪನಿ

ಐಎಎನ್ಎಸ್
Published 25 ಜನವರಿ 2023, 11:46 IST
Last Updated 25 ಜನವರಿ 2023, 11:46 IST
   

ನವದೆಹಲಿ: ಭಾರತದಲ್ಲಿ 5G ನೆಟ್‌ವರ್ಕ್ ಸೇವೆಗಳು ಆರಂಭವಾಗಿದ್ದು, ಜನರು ದಿನಕ್ಕೆ ₹44ರಂತೆ ಹೊಸ 5G ಸ್ಮಾರ್ಟ್‌ಫೋನ್‌ನ ಪ್ರಯೋಜನ ಪಡೆಯಬಹುದು ಎಂದು ಟೆಕ್ ಮತ್ತು ಗ್ಯಾಜೆಟ್ ಕಂಪನಿ ಸ್ಯಾಮ್‌ಸಂಗ್ ಹೇಳಿದೆ.

5G ಸ್ಮಾರ್ಟ್‌ಫೋನ್‌ ದರವನ್ನು ಗಮನಿಸಿದರೆ, ದೇಶದಲ್ಲಿ ಈಗಿನ ಮಾರುಕಟ್ಟೆಯ ಪ್ರಕಾರ, ದಿನಕ್ಕೆ ₹44 ರಂತೆ 5G ಸ್ಮಾರ್ಟ್‌ಫೋನ್ ದೊರೆಯಲಿದೆ. ಅಂದರೆ, ತಿಂಗಳಿಗೆ ₹1,320 ದರವಿರಲಿದೆ. ಜತೆಗೆ, ವಿವಿಧ ಇಎಂಐ ಪ್ರಯೋಜನಗಳು ಇದ್ದು, ಅದರ ಮೂಲಕ ಹೊಸ 5G ಸ್ಮಾರ್ಟ್‌ಫೋನ್ ಖರೀದಿಸಬಹುದು.

ಸ್ಯಾಮ್‌ಸಂಗ್‌ನ ಭಾರತದ ಮೊಬೈಲ್ ಉದ್ಯಮ ವಿಭಾಗದ ಹಿರಿಯ ನಿರ್ದೇಶಕ ಆದಿತ್ಯ ಬಬ್ಬರ್ ಹೇಳುವ ಪ್ರಕಾರ, ಭಾರತದ ಮಾರುಕಟ್ಟೆಯಲ್ಲಿ 5G ನೆಟ್‌ವರ್ಕ್ ಒದಗಿಸಿರುವುದರಿಂದ, ಅದಕ್ಕೆ ಅನುಗುಣವಾಗಿ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಸ್ಯಾಮ್‌ಸಂಗ್, ಹೊಸದಾಗಿ 5G ಸ್ಮಾರ್ಟ್‌ಫೋನ್‌ಗಳನ್ನು ಗ್ಯಾಲಕ್ಸಿ ಎ ಸರಣಿಯಲ್ಲಿ ಪರಿಚಯಿಸುತ್ತಿದೆ. ಈ ಮೂಲಕ ಎಲ್ಲ ವರ್ಗದ ಜನರಿಗೂ 5G ಸ್ಮಾರ್ಟ್‌ಫೋನ್ ದೊರೆಯುವಂತೆ ಮಾಡಲಾಗುತ್ತಿದೆ ಎಂದಿದ್ದಾರೆ.

ADVERTISEMENT

ಇತ್ತೀಚೆಗೆ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G ಸ್ಮಾರ್ಟ್‌ಫೋನ್ ದರ ಗಮನಿಸಿದರೆ, ದಿನಕ್ಕೆ ₹44ರಂತೆ ಫೋನ್ ದರ ಇರಲಿದೆ. ಇದು ಇತರ ಮಾರುಕಟ್ಟೆಗೆ ಹೋಲಿಸಿದರೆ, ಅತಿ ಕಡಿಮೆ ದರವಾಗಿದೆ ಎಂದು ಆದಿತ್ಯ ತಿಳಿಸಿದ್ದಾರೆ.

ಸ್ಯಾಮ್‌ಸಂಗ್, ಭಾರತದಲ್ಲಿ ಗ್ಯಾಲಕ್ಸಿ ಎ ಸರಣಿಯಲ್ಲಿ A14 5G ಮತ್ತು A23 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, 1 ಕೋಟಿಗೂ ಅಧಿಕ ಡಿವೈಸ್ ಮಾರಾಟವಾಗಿದೆ. ಹೀಗಾಗಿ, ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಜನರ ಅಗತ್ಯಕ್ಕೆ ತಕ್ಕಂತೆ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪೂರೈಸುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.