ADVERTISEMENT

Edge 30 Ultra | 200 ಮೆಗಾಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಪರಿಚಯಿಸಿದ ಮೊಟೊ

ಮೊಟೊರೊಲಾ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2022, 11:31 IST
Last Updated 11 ಸೆಪ್ಟೆಂಬರ್ 2022, 11:31 IST
   

ಬೆಂಗಳೂರು: 200 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಜಗತ್ತಿನ ಮೊದಲ ಸ್ಮಾರ್ಟ್‌ಫೋನ್‌ ಅನ್ನು ಮೊಟೊರೊಲಾ ಬಿಡುಗಡೆ ಮಾಡಿದೆ.

ಮೊಟೊರೊಲಾ ನೂತನ ಎಡ್ಜ್ 30 ಅಲ್ಟ್ರಾ ಪರಿಚಯಿಸಿದ್ದು, ಪ್ರೀಮಿಯಂ ಸ್ಮಾರ್ಟ್‌ಫೋನ್‌ ಆಗಿದೆ.

6.67 ಇಂಚಿನ ಫುಲ್‌ಎಚ್‌ಡಿ+ ಡಿಸ್‌ಪ್ಲೇ, HDR10+ ಬೆಂಬಲ ಹೊಂದಿದೆ. ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಡ್ಯುವೆಲ್ ಸಿಮ್ ಹೊಸ ಮೊಟೊ ಸ್ಮಾರ್ಟ್‌ಫೋನ್ ವಿಶೇಷತೆಯಾಗಿದೆ.

ADVERTISEMENT

ಸ್ನ್ಯಾಪ್‌ಡ್ರ್ಯಾಗನ್ 8+ ಜೆನ್. 1 ಒಕ್ಟಾ ಕೋರ್ ಪ್ರೊಸೆಸರ್ ಮತ್ತು ಅಡ್ರೆನೊ 730 ಗ್ರಾಫಿಕ್ಸ್ ಬೆಂಬಲ ಹೊಂದಿದೆ.

12GB RAM ಮತ್ತು 256 GB ಸ್ಟೋರೇಜ್, ಆ್ಯಂಡ್ರಾಯ್ಡ್ 12 ಓಎಸ್, 4610mAh ಬ್ಯಾಟರಿ ಮತ್ತು 125W ಫಾಸ್ಟ್ ಚಾರ್ಜಿಂಗ್, 50W ವೈರ್‌ಲೆಸ್ ಚಾರ್ಜಿಂಗ್ ಹಾಗೂ 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಹೊಸ ಸ್ಮಾರ್ಟ್‌ಫೋನ್ ವಿಶೇಷತೆಯಾಗಿದೆ ಎಂದು ಕಂಪನಿ ಹೇಳಿದೆ.

ಹಿಂಭಾಗದಲ್ಲಿ 200ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಮತ್ತು 12 ಮೆಗಾಪಿಕ್ಸೆಲ್ ಟೆಲಿಫೋಟೊ ಕ್ಯಾಮೆರಾ ಇದರಲ್ಲಿದೆ.

ನೂತನ ಸ್ಮಾರ್ಟ್‌ಫೋನ್ ಸೆ. 13ರಂದು ದೇಶದಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಬೆಲೆ ವಿವರವನ್ನು ಮೊಟೊರೊಲಾ ಬಿಡುಗಡೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.