ADVERTISEMENT

ದೇಶದ ಮಾರುಕಟ್ಟೆಗೆ ಹೊಸ ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2022, 2:44 IST
Last Updated 12 ಜನವರಿ 2022, 2:44 IST
ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಎಚ್‌ 205 ಮತ್ತು ನೋಕಿಯಾ ವೈರ್ಡ್ ಬಡ್ಸ್ ಡಬ್ಲ್ಯುಬಿ–101
ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಎಚ್‌ 205 ಮತ್ತು ನೋಕಿಯಾ ವೈರ್ಡ್ ಬಡ್ಸ್ ಡಬ್ಲ್ಯುಬಿ–101   

ಬೆಂಗಳೂರು: ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ ಬ್ರ್ಯಾಂಡ್, ದೇಶದಲ್ಲಿ ಎರಡು ನೂತನ ಮಾದರಿಯ ಇಯರ್‌ಫೋನ್ ಪರಿಚಯಿಸಿದೆ.

ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಎಚ್‌ 205 ಮತ್ತು ನೋಕಿಯಾ ವೈರ್ಡ್ ಬಡ್ಸ್ ಡಬ್ಲ್ಯುಬಿ–101 ಬಿಡುಗಡೆಯಾಗಿದ್ದು, ಆಕರ್ಷಕ ವಿನ್ಯಾಸ ಮತ್ತು ಉತ್ತಮ ಧ್ವನಿ ಹೊಂದಿದೆ ಎಂದು ಕಂಪನಿ ಹೇಳಿದೆ.

ಹೊಸ ನೋಕಿಯಾ ಬಡ್ಸ್, ನೋಕಿಯಾ ಡಾಟ್‌ಕಾಂ, ಪ್ರಮುಖ ರಿಟೇಲ್ ಮಳಿಗೆಗಳು ಮತ್ತು ಇ–ಕಾಮರ್ಸ್ ತಾಣಗಳಲ್ಲಿ ದೊರೆಯಲಿದೆ.

ADVERTISEMENT

ಮನರಂಜನೆ, ಕಚೇರಿ ಕೆಲಸ, ಆಟ ಹಾಗೂ ವಿವಿಧ ಸಂದರ್ಭದಲ್ಲಿ ನೋಕಿಯಾ ಬಡ್ಸ್ ಬಳಸಬಹುದು ಎಂದು ಸಂಸ್ಥೆ ತಿಳಿಸಿದೆ.

ಬೆಲೆ ಮತ್ತು ವಿವರ
ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಎಚ್‌ 205, 36 ಗಂಟೆಗಳ ಪ್ಲೇಟೈಮ್ ಒದಗಿಸಲಿದೆ. ದೇಶದಲ್ಲಿ ₹2,799 ದರವಿದೆ.

ನೋಕಿಯಾ ವೈರ್ಡ್ ಬಡ್ಸ್ ಡಬ್ಲ್ಯುಬಿ–101 ಸ್ಪಷ್ಟ ಧ್ವನಿ, ಕರೆ ನಿರ್ವಹಣೆ ಹೊಂದಿದ್ದು, ₹ 299ನಿಂದ ಆರಂಭಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.