ADVERTISEMENT

‘ನೋಕಿಯಾ 2.4’ ಸ್ಮಾರ್ಟ್‌ಫೋನ್ ಬಿಡುಗಡೆ, ಏನೇನಿವೆ ಹೊಸದು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2020, 13:08 IST
Last Updated 5 ಡಿಸೆಂಬರ್ 2020, 13:08 IST
‘ನೋಕಿಯಾ 2.4’ ಸ್ಮಾರ್ಟ್‌ಫೋನ್: ಚಿತ್ರ ಕೃಪೆ – ನೋಕಿಯಾ
‘ನೋಕಿಯಾ 2.4’ ಸ್ಮಾರ್ಟ್‌ಫೋನ್: ಚಿತ್ರ ಕೃಪೆ – ನೋಕಿಯಾ   

ಬೆಂಗಳೂರು: ‘ನೋಕಿಯಾ 2’ ಸರಣಿಯ ‘ನೋಕಿಯಾ 2.4’ ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿರುವುದಾಗಿ ಎಚ್‌ಎಂಡಿ ಗ್ಲೋಬಲ್ ತಿಳಿಸಿದೆ.

ನೈಟ್ ಮೋಡ್ ಮತ್ತು ಪೋರ್‌ಟ್ರೈಟ್ ಮೋಡ್ ಫೀಚರ್ ಒಳಗೊಂಡಿರುವ ಎಐ ಪವರ್ಡ್ ಡುವಲ್ ಕ್ಯಾಮರಾ, ದೀರ್ಘ ಬಾಳಿಕೆಯ ಬ್ಯಾಟರಿ, ದೊಡ್ಡ ಸ್ಕ್ರೀನ್‌ ಸೇರಿದಂತೆ ಹಲವು ವಿಶೇಷಗಳನ್ನು ‘ನೋಕಿಯಾ 2.4’ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ 4500 ಎಂಎಎಚ್‌ ಬ್ಯಾಟರಿ ಒಳಗೊಂಡಿದ್ದು, ಎರಡು ದಿನಗಳ ವರೆಗೆ ಚಾರ್ಜ್ ಉಳಿಯಲಿದೆ ಎಂದು ಕಂಪನಿ ತಿಳಿಸಿದೆ.

ಫಿಂಗರ್ ಪ್ರಿಂಟ್ ಮತ್ತು ಫೇಸ್ ಅನ್‌ಲಾಕ್ ಆಯ್ಕೆಗಳನ್ನೂ ‘ನೋಕಿಯಾ 2.4’ ಒಳಗೊಂಡಿದೆ.

ADVERTISEMENT

ಆ್ಯಂಡ್ರಾಯ್ಡ್ 11, 12ಕ್ಕೆ ಅಪ್‌ಗ್ರೇಡ್ ಸಾಧ್ಯ

ಆ್ಯಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಂ ಒಳಗೊಂಡಿರುವ ‘ನೋಕಿಯಾ 2.4’ ಸ್ಮಾರ್ಟ್‌ಫೋನ್ ಮೂರು ವರ್ಷಗಳ ವರೆಗೆ ಪ್ರತಿ ತಿಂಗಳು ಉಚಿತ ಸೆಕ್ಯುರಿಟಿ ಅಪ್‌ಡೇಟ್ ಹಾಗೂ 2 ವರ್ಷಗಳಿಗೆ ಆಪರೇಟಿಂಗ್ ಸಿಸ್ಟಂ ಅಪ್‌ಡೇಟ್ ಒದಗಿಸಲಿದೆ. ಆ್ಯಂಡ್ರಾಯ್ಡ್ 11 ಹಾಗೂ ಆ್ಯಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂಗಳಿಗೆ ಅಪ್‌ಗ್ರೇಡ್ ಮಾಡಲು ಸಾಧ್ಯವಿದೆ.

ವಿಶೇಷಗಳು ಏನೆಲ್ಲ?

* ಡಿಸ್‌ಪ್ಲೇ: 6.5 ಇಂಚಿನ 720ಪಿ ಎಚ್‌ಡಿ ಸ್ಕ್ರೀನ್

* ಪ್ರೊಸೆಸರ್: ಆಕ್ಟಾ–ಕೋರ್ ಮೀಡಿಯಾಟೆಕ್ ಹೆಲಿಯೊ ಪಿ22 ಪ್ರೊಸೆಸರ್

* ರ್‍ಯಾಮ್: 2 ಜಿಬಿ ರ್‍ಯಾಮ್

* ಸ್ಟೋರೇಜ್ ಸಾಮರ್ಥ್ಯ: 64 ಜಿಬಿ ಮೆಮೊರಿ. ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ ವಿಸ್ತರಿಸಲು ಅವಕಾಶವಿದೆ.

* ಕ್ಯಾಮರಾ: 13 ಎಂಪಿ ಮೈನ್ ಸೆನ್ಸರ್ ಮತ್ತು 2 ಎಂಪಿ ಡೆಪ್ತ್ ಸೆನ್ಸರ್ ಡುವಲ್ ಬ್ಯಾಕ್ ಕ್ಯಾಮರಾ

* ಫ್ರಂಟ್ ಕ್ಯಾಮರಾ: 5ಎಂಪಿ ಸೆನ್ಸರ್ ಕ್ಯಾಮರಾ

* ಬ್ಯಾಟರಿ: 4500 ಎಂಎಎಚ್‌ ಬ್ಯಾಟರಿ

* ಆಪರೇಟಿಂಗ್ ಸಿಸ್ಟಂ: ಆ್ಯಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಂ ಒಳಗೊಂಡಿರುವ ‘ನೋಕಿಯಾ 2.4’ ಸ್ಮಾರ್ಟ್‌ಫೋನ್ ಅನ್ನು ಆ್ಯಂಡ್ರಾಯ್ಡ್ 11 ಹಾಗೂ ಆ್ಯಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂಗಳಿಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

ಬೆಲೆ ಎಷ್ಟು, ಎಲ್ಲಿ ಸಿಗುತ್ತೆ?

3 ಜಿಬಿ ರ್‍ಯಾಮ್, 64 ಜಿಬಿ ಮೆಮೊರಿಯ ‘ನೋಕಿಯಾ 2.4’ ಸ್ಮಾರ್ಟ್‌ಫೋನ್ ಬೆಲೆ ₹10,399. ಮೂರು ಬಣ್ಣಗಳಲ್ಲಿ ಲಭ್ಯವಿರುವ ಇದು, ನೋಕಿಯಾ ಆನ್‌ಲೈನ್‌ ಸ್ಟೋರ್ ಹಾಗೂ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಹಾಗೂ ರೀಟೇಲ್ ಮಳಿಗೆಗಳಲ್ಲಿ ಡಿಸೆಂಬರ್ 4ರಿಂದ ಖರೀದಿಗೆ ದೊರೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.