ಬೆಂಗಳೂರು: ನು ರಿಪಬ್ಲಿಕ್ ಕಂಪನಿಯು ಅತ್ಯುತ್ತಮ ಆಡಿಯೊ ಟೆಕ್ನಾಲಜಿ ಮತ್ತು ನೋಡಲು ಆಕರ್ಷಕವಾಗಿರುವ ‘ಗರ್ಲ್ ಪಿಡಬ್ಲ್ಯೂಆರ್ ವೈರ್‌ಲೆಸ್ ಇಯರ್‌ಬಡ್ಸ್ ಮತ್ತು ಪವರ್ ಬ್ಯಾಂಕ್ ಅನ್ನು ವಿಶೇಷವಾಗಿ ಮಹಿಳೆಯರಿಗಾಗಿ ಬಿಡುಗಡೆ ಮಾಡಿದೆ.
ನಾಯ್ಸ್ ಕ್ಯಾನ್ಸಲೇಶನ್, ಉತ್ತಮ ಆಡಿಯೊ, ನಯವಾದ ವಿನ್ಯಾಸ ಹೊಂದಿರುವ ಈ ಇಯರ್‌ಬಡ್ಸ್ ಅನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 48 ಗಂಟೆಗಳ ಕಾಲ ಬಳಸಬಹುದು.
ವಿಶೇಷವಾಗಿ ಮಹಿಳೆಯರಿಗಾಗಿ ಬಿಡುಗಡೆ ಮಾಡಿರುವ ಗರ್ಲ್ ಪಿಡಬ್ಲ್ಯೂಆರ್ ಆವೃತ್ತಿಯ ವೈರ್‌ಲೆಸ್ ಇಯರ್‌ಬಡ್ಸ್ ಮತ್ತು ಪವರ್ ಬ್ಯಾಂಕ್‌ಗಳು ಪಿಂಕ್ ಮತ್ತು ತಿಳಿ ಹಸಿರು ಬಣ್ಣದಿಂದ ಕೂಡಿದೆ.
ಗೇಮ್ಸ್, ವರ್ಕೌಟ್, ಗೇಮಿಂಗ್ ಮ್ಯಾರಥಾನ್ ಸೇರಿದಂತೆ ದೈನಂದಿನ ಕೆಲಸದ ವೇಳೆಯಲ್ಲಿ ಈ ಇಯರ್‌ಬಡ್ಸ್ ಸುಲಭವಾಗಿ ಬಳಕೆ ಮಾಡಬಹುದಾಗಿದೆ. ನು ರಿಪಬ್ಲಿಕ್ ವೆಬ್‌ಸೈಟ್‌ನಲ್ಲಿ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಈ ಇಯರ್‌ಬಡ್ಸ್ ₹799ರ ಬೆಲೆಯಲ್ಲಿ ದೊರೆಯುತ್ತಿದೆ.
X1 5000mAh ಸಾಮರ್ಥ್ಯದ ಗರ್ಲ್ ಪಿಡಬ್ಲ್ಯೂಆರ್ ವೈರ್‌ಲೆಸ್ ಆವೃತ್ತಿಯ ಪವರ್ ಬ್ಯಾಂಕ್ ₹1,799ರಂತೆ ದೊರೆಯುತ್ತದೆ.
ವಿಶೇಷವೆಂದರೆ ಪಿಡಬ್ಲ್ಯೂಆರ್ ವೈರ್‌ಲೆಸ್ ಆವೃತ್ತಿಯ ಇಯರ್‌ಬಡ್ಸ್ ಮತ್ತು ಪವರ್ ಬ್ಯಾಂಕ್‌ಗಳು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಆರ್ಡರ್ ಮಾಡಿದ 10 ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.