ADVERTISEMENT

Poco M3: ತ್ರಿವಳಿ ಕ್ಯಾಮರಾ ಸಹಿತ ಹೊಸ ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2021, 11:35 IST
Last Updated 2 ಫೆಬ್ರುವರಿ 2021, 11:35 IST
ಪೋಕೋ ಸ್ಮಾರ್ಟ್‌ಫೋನ್
ಪೋಕೋ ಸ್ಮಾರ್ಟ್‌ಫೋನ್   

ಬೆಂಗಳೂರು: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿಶೇಷ ಛಾಪು ಮೂಡಿಸಿರುವ ಪೋಕೋ, ಹೊಸ ಫೋನ್ ಒಂದನ್ನು ಬಿಡುಗಡೆ ಮಾಡಿದೆ. ಪೋಕೋ ಸ್ಮಾರ್ಟ್‌ಫೋನ್ ಸರಣಿಯಲ್ಲಿ ನೂತನ ಫೋಕೋ M3 ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಇದು ಕಡಿಮೆ ಬಜೆಟ್ ದರ ಹೊಂದಿದೆ. ಈ ಮೊದಲು ಪೋಕೋ, M2 ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. ಈ ಬಾರಿ ನೂತನ M3 ಫೋನ್ ಪರಿಚಯಿಸಲಾಗಿದೆ.

ಹೊಸ ಪೋಕೋ ಫೋನ್

ADVERTISEMENT

ಪೋಕೋ M3 ಫೋನ್ ಡ್ಯುಯಲ್ ಟೋನ್ ಶೆಲ್ ಫಿನಿಶಿಂಗ್ ವಿನ್ಯಾಸ ಹೊಂದಿದೆ. 6.53 ಇಂಚಿನ ಫುಲ್ ಎಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಹೊಂದಿದೆ. ಬದಿಯಲ್ಲಿ ಪವರ್ ಬಟನ್ ಜತೆಗೆ ಫಿಂಗರ್‌ಪ್ರಿಂಟ್ ಸೆನ್ಸರ್ ಕೂಡ ಹೊಂದಿದೆ.

ಪೋಕೋ M3 ಫೋನ್ ಫೀಚರ್ಸ್

ನೂತನ ಫೋನ್‌ನಲ್ಲಿ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 662 ಒಕ್ಟಾ ಕೋರ್ ಪ್ರೊಸೆಸರ್, 6GB RAM ಮತ್ತು 64 GB ಹಾಗೂ 128 GB ಎಂಬ ಎರಡು ಸಂಗ್ರಹಣಾ ಸಾಮರ್ಥ್ಯದಲ್ಲಿ ದೊರೆಯಲಿದೆ. ಆಂಡ್ರಾಯ್ಡ್ 10 ಆಧಾರಿತ MIUI 12 ಕಾರ್ಯಾಚರಣ ವ್ಯವಸ್ಥೆ, 6000mAh ಬ್ಯಾಟರಿ, 18W ಚಾರ್ಜರ್ ಹೊಂದಿದೆ. ಅಲ್ಲದೆ, 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ ಜತೆಗೆ, 2MP+2MP ಹಿಂಬದಿ ಕ್ಯಾಮರಾ ಇದ್ದು, 8 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇರಲಿದೆ.

ಬೆಲೆ ಮತ್ತು ಲಭ್ಯತೆ

ಹೊಸ ಪೋಕೋ M3 ಫೋನ್ 6GB ಮತ್ತು 64 GB ಮಾದರಿಗೆ ₹10,999 ಮತ್ತು 6GB RAM ಹಾಗೂ 128 GB ಆವೃತ್ತಿಗೆ ₹11,999 ರೂ. ದರವಿದೆ. ಫ್ಲಿಪ್‌ಕಾರ್ಟ್ ಮೂಲಕ ಫೆಬ್ರುವರಿ 9ರಿಂದ ಲಭ್ಯವಾಗಲಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆಗೆ ₹1,000 ಡಿಸ್ಕೌಂಟ್ ಕೂಡ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.