ADVERTISEMENT

ಟೆಕ್‌ನೊ ಕ್ಯಾಮನ್ 19 ಪ್ರೊ | ಬಿಸಿಲಿಗೆ ಬಣ್ಣ ಬದಲಿಸುವ ಫೋನ್

ಟೆಕ್‌ನೊ ನೂತನ ಸ್ಮಾರ್ಟ್‌ಫೋನ್ ಬಿಸಿಲಿಗೆ ಬಣ್ಣ ಬದಲಿಸುವ ವಿಶೇಷತೆ ಹೊಂದಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2022, 13:15 IST
Last Updated 12 ಸೆಪ್ಟೆಂಬರ್ 2022, 13:15 IST
ಟೆಕ್‌ನೊ ಕ್ಯಾಮನ್ 19 ಪ್ರೊ
ಟೆಕ್‌ನೊ ಕ್ಯಾಮನ್ 19 ಪ್ರೊ    

ಬೆಂಗಳೂರು: ಟೆಕ್‌ನೊ ಕ್ಯಾಮನ್ ಸರಣಿಯಲ್ಲಿ ನೂತನ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ದೊರೆಯಲಿರುವ ಬಿಸಿಲಿಗೆ ಬಣ್ಣ ಬದಲಿಸುವ ಮೊದಲ ಸ್ಮಾರ್ಟ್‌ಫೋನ್ ಇದು ಎಂದು ಕಂಪನಿ ಹೇಳಿದೆ.

ಟೆಕ್‌ನೊ ಕ್ಯಾಮನ್ 19 ಪ್ರೊ ಮಾಂಡ್ರಿಯನ್ ಆವೃತ್ತಿ ಅಮೆಜಾನ್ ಮೂಲಕ ದೊರೆಯಲಿದೆ. ಈ ಸ್ಮಾರ್ಟ್‌ಫೋನ್ ಹಿಂಬದಿ ಪ್ಯಾನಲ್ ಬಹುವಿಧದ ಬಣ್ಣಗಳಾಗಿ ಬದಲಾಗುತ್ತದೆ. ಬಿಸಿಲಿಗೆ ಅನುಗುಣವಾಗಿ ಈ ಬಣ್ಣಗಳಲ್ಲಿ ಬದಲಾವಣೆ ಇರಲಿದೆ ಎಂದು ಕಂಪನಿ ಹೇಳಿದೆ.

ಟೆಕ್‌ನೊ ಕ್ಯಾಮನ್ 19 ಪ್ರೊ
13 GB RAM (ವಿಸ್ತರಿಸಬಹುದಾದ ವರ್ಚುವಲ್ RAM) ಮತ್ತು 128 GB ಸ್ಟೋರೇಜ್ ಇದ್ದು, ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 50 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಇದೆ.

ADVERTISEMENT

6.8 ಇಂಚಿನ ಫುಲ್‌ಎಚ್‌ಡಿ+ ಡಿಸ್‌ಪ್ಲೇ, 5000mAh ಬ್ಯಾಟರಿ ಜತೆಗೆ 33W ಫ್ಲ್ಯಾಶ್ ಚಾರ್ಜರ್ ಜತೆಗಿದೆ.

ಬೆಲೆ ವಿವರ ಮತ್ತು ಬಿಡುಗಡೆ ದಿನಾಂಕವನ್ನು ಕಂಪನಿ ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.