ADVERTISEMENT

'ಒನ್ ಫ್ಯೂಷನ್+' ಮೊಟೊರೊಲಾದ ಮೇಡ್‌ ಇನ್‌ ಇಂಡಿಯಾ ಫೋನ್‌: ಬೆಲೆ ₹16,999

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜೂನ್ 2020, 6:22 IST
Last Updated 26 ಜೂನ್ 2020, 6:22 IST
ಮೊಟೊರೊಲಾ ಒನ್ ಫ್ಯೂಷನ್+
ಮೊಟೊರೊಲಾ ಒನ್ ಫ್ಯೂಷನ್+   
""

ಬೆಂಗಳೂರು: ಮೊಟೊರೊಲಾದ ಹೊಸ ಸ್ಮಾರ್ಟ್‌ಫೋನ್‌ ಒನ್ ಫ್ಯೂಷನ್+ ಭಾರತದಲ್ಲಿಯೇ ತಯಾರಿಸಲಾಗುತ್ತಿದೆ. ಅತ್ಯುತ್ತಮ ಗುಣಲಕ್ಷಣಗಳೊಂದಿಗೆ ದೇಶದ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಹಾಗೂ ರೆಡ್‌ಮಿ ಫೋನ್‌ಗಳಿಗೆ ಪೈಪೋಟಿ ನೀಡಬಹುದಾಗಿದೆ. ಈ ಫೋನ್‌ ಬೆಲೆ ₹16,999 ನಿಗದಿ ಪಡಿಸಲಾಗಿದೆ.

ಇದೇ 24ರಂದು ಮಾರಾಟಕ್ಕೆ ಬಿಡುಗಡೆಯಾಗಿರುವ ಒನ್ ಫ್ಯೂಷನ್+ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಖರೀದಿಗೆ ಸಿಗುತ್ತಿದೆ. ಅಮೆರಿಕ ಮೂಲದ ಮೊಟೊರೊಲಾ ಮೊಬಿಲಿಟಿಯನ್ನು ಚೀನಾದ ಲಿನೊವೊ ಕಂಪನಿ ಸ್ವಾಧೀನ ಪಡಿಸಿಕೊಂಡಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದೆ.

ಕ್ವಾಲ್‌ಕಮ್‌ ಸ್ನ್ಯಾಪ್‌ಡ್ರ್ಯಾಗನ್‌ 730ಜಿ ಪ್ರೊಸೆಸರ್‌, ಗ್ರಾಫಿಕ್ಸ್‌ಗಾಗಿ ಆ್ಯಡ್ರೆನೊ 618 ಜಿಪಿಯು, ಮಲ್ಟಿಕೋರ್‌ ಎಐ ಎಂಜಿನ್ ಜೊತೆಗೆ 6ಜಿಬಿ ರ್‍ಯಾಮ್‌ ಇದೆ. 128ಜಿಬಿ ಸಂಗ್ರಹ ಸಾಮರ್ಥ್ಯವಿದ್ದು, ಮೈಕ್ರೊಎಸ್‌ಡಿ ಕಾರ್ಡ್‌ ಮೂಲಕ 1ಟಿಬಿ ವರೆಗೂ ಸಂಗ್ರಹ ವಿಸ್ತರಿಸಿಕೊಳ್ಳಬಹುದು.

ADVERTISEMENT

5,000ಎಂಎಎಚ್‌ ಬ್ಯಾಟರಿ ನೀಡಲಾಗಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 2 ದಿನಗಳವರೆಗೂ ಕಾರ್ಯಾಚರಿಸಬಹುದು. ಕಡಿಮೆ ಅವಧಿಯಲ್ಲಿ ಚಾರ್ಜ್‌ ಮಾಡಲು 18 ವ್ಯಾಟ್‌ ಟರ್ಬೊಪವರ್‌ ಚಾರ್ಜಿಂಗ್‌ ವ್ಯವಸ್ಥೆಯಿದೆ. 6.5 ಇಂಚು ಟೋಟಲ್ ವಿಷನ್ ಫುಲ್ ಎಚ್‌ಡಿ ಡಿಸ್‌ಪ್ಲೇ, ಸೆಲ್ಫಿಗಾಗಿ 16ಎಂಪಿ ಪಾಪ್‌–ಅಪ್‌ ಕ್ಯಾಮೆರಾ, ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳಿವೆ. 64ಎಂಪಿ, 8ಎಂಪಿ, 5ಎಂಪಿ ಹಾಗೂ 2ಎಂಪಿ ಕ್ಯಾಮೆರಾಗಳಿವೆ.

ಎರಡು ಮೈಕ್ರೊಫೋನ್‌, ಲೌಡ್‌ಸ್ಪೀಕರ್‌ ಹೊಂದಿದೆ. ಮೂನ್‌ಲೈಟ್‌ ವೈಟ್‌ ಮತ್ತು ಟ್ವಿಲೈಟ್‌ ಬ್ಲೂ ಎರಡು ಬಣ್ಣಗಳಲ್ಲಿ ಫೋನ್‌ ಸಿಗಲಿದೆ.

ಒನ್ ಫ್ಯೂಷನ್+ ಗುಣಲಕ್ಷಣಗಳು:

* ಡಿಸ್‌ಪ್ಲೇ: ಟೋಟಲ್‌ ವಿಷನ್‌ ಫುಲ್‌ ಎಚ್‌ಡಿ 6.5 ಇಂಚು
* ಕ್ಯಾಮೆರಾ: ಸೆಲ್ಪಿಗಾಗಿ ಪಾಪ್‌–ಅಪ್‌ 16ಎಂಪಿ; ಹಿಂಬದಿಯಲ್ಲಿ 64ಎಂಪಿ + 8ಎಂಪಿ + 5ಎಂಪಿ+ 2ಎಂಪಿ
* ಸಾಮರ್ಥ್ಯ: 6ಜಿಬಿ ರ್‍ಯಾಮ್‌; 128ಜಿಬಿ ಸಂಗ್ರಹ
* ಪ್ರೊಸೆಸರ್‌: ಕ್ವಾಲ್‌ಕಮ್‌ ಸ್ನ್ಯಾಪ್‌ಡ್ರ್ಯಾಗನ್‌ 730ಜಿ
* ಬ್ಯಾಟರಿ: 5,000ಎಂಎಎಚ್‌
* ಒಎಸ್‌: ಆ್ಯಂಡ್ರಾಯ್ಡ್‌ 10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.