ADVERTISEMENT

ನೀನಿಲ್ಲದೆ...ಗಗನಯಾನಕ್ಕೂ ಮುನ್ನ ಪತ್ನಿಗಾಗಿ ಶುಭಾಂಶು ಶುಕ್ಲಾ ಭಾವುಕ ಪೋಸ್ಟ್‌

ಏಜೆನ್ಸೀಸ್
Published 25 ಜೂನ್ 2025, 14:01 IST
Last Updated 25 ಜೂನ್ 2025, 14:01 IST
<div class="paragraphs"><p> ಶುಭಾಂಶು ಶುಕ್ಲಾ ಹಂಚಿಕೊಂಡ ಫೋಟೊ</p></div>

ಶುಭಾಂಶು ಶುಕ್ಲಾ ಹಂಚಿಕೊಂಡ ಫೋಟೊ

   

ಚಿತ್ರ ಕೃಪೆ: gagan.shux ಇನ್‌ಸ್ಟಾಗ್ರಾಂ

ನವದೆಹಲಿ: ಲಖನೌನ ಗಗನಯಾನಿ ಶುಭಾಂಶು ಶುಕ್ಲಾ ಅವರನ್ನು ಒಳಗೊಂಡ ನಾಲ್ವರ ತಂಡ 'ಆ್ಯಕ್ಸಿಯಂ–4' ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಇಂದು (ಜೂನ್‌ 25) ಮಧ್ಯಾಹ್ನ 12.01ಕ್ಕೆ (ಭಾರತೀಯ ಕಾಲಮಾನ) ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಪ್ರಯಾಣ ಬೆಳೆಸಿದೆ.

ADVERTISEMENT

ಗಗನಯಾತ್ರಿಗಳಿರುವ ಬಾಹ್ಯಾಕಾಶ ನೌಕೆಯನ್ನು ಹೊತ್ತ ಸ್ಪೇಸ್‌ಎಕ್ಸ್‌ನ 'ಫಾಲ್ಕನ್‌–9' ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿತು.

ಪ್ರಯಾಣಕ್ಕೂ ಮುನ್ನ ಶುಕ್ಲಾ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಪತ್ನಿ ಕಾಮ್ನಾ ಕುರಿತು ಬರೆದುಕೊಂಡಿರುವ ಶುಕ್ಲಾ, ‘ಉತ್ತಮ ಸಂಗಾತಿಯಾಗಿರುವೆ, ನೀನಿಲ್ಲದೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಇದು ಯಾವುದೂ ಮುಖ್ಯವೂ ಆಗುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಇದರ ಜತೆಗೆ ಪತ್ನಿಯೊಂದಿಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. 

ನಾವು ಜೂನ್‌ 25ರಂದು ಭೂಮಿಯನ್ನು ಬಿಡುತ್ತಿದ್ದೇವೆ. ಈ ಮಿಷನ್‌ನಲ್ಲಿ ಭಾಗವಾಗಿರುವ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ನನ್ನ ಕುಟುಂಬ ಮತ್ತು ನನ್ನೊಂದಿಗಿದ್ದ ಸ್ನೇಹಿತರಿಗೆ ಧನ್ಯವಾದ ಹೇಳುತ್ತೇನೆ. ಕೆಲವೊಮ್ಮೆ ನಿಮ್ಮ ಪ್ರೀತಿ ಪಾತ್ರರು ಕೆಲವು ತ್ಯಾಗಗಳನ್ನು ಮಾಡುತ್ತಾರೆ, ಆದರೆ ಅದು ನಿಮಗೆ ಸಂ‍ಪೂರ್ಣವಾಗಿ ಅರ್ಥವಾಗುವುದಿಲ್ಲ, ಅವರು ನಿಮ್ಮ ಮೇಲಿನ ಪ್ರೀತಿಯಿಂದ ತ್ಯಾಗವನ್ನು ಮಾಡಿರುತ್ತಾರೆ’ ಎಂದು ಶುಕ್ಲಾ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.