ಟೆಕ್ಸಾಸ್: ಬಾಹ್ಯಾಕಾಶ ಇತಿಹಾಸದಲ್ಲಿ ಅತ್ಯಂತ ಬೃಹತ್ ಆದ ಹಾಗೂ ಅತ್ಯಂತ ಶಕ್ತಿಶಾಲಿ ಆದ ರಾಕೆಟ್ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ.
ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿಯಿಂದ ನಿರ್ಮಿಸಲ್ಪಟ್ಟಿರುವ ಸ್ಟಾರ್‌ಶಿಪ್ ಎಂಬ ಬೃಹತ್ ರಾಕೆಟ್ ಅನ್ನು (ಲಾಂಚ್ ವೆಹಿಕಲ್– The Starship Super Heavy) ಪರೀಕ್ಷಾರ್ಥವಾಗಿ ಸೋಮವಾರ ಟೆಕ್ಸಾಸ್‌ನ ಗಲ್ಫ್ ಕೋಸ್ಟ್‌ನಿಂದ ಸೋಮವಾರ ಉಡಾವಣೆಯಾಗಲಿದೆ.
ಇದು 390 ಮಿಟರ್ ಎತ್ತರವಿದ್ದು, 30 ಮೀಟರ್ ಸುತ್ತಳತೆ ಹೊಂದಿದೆ. ಇದು ಅಮೆರಿಕದ ಲಿಬರ್ಟಿ ಆಫ್ ಸ್ಟ್ಯಾಚುಗಿಂತ ಎತ್ತರವಾಗಿದೆ. ಈ ರಾಕೆಟ್ ವ್ಯವಸ್ಥೆಯು ಭೂಮಿಯಿಂದ ಸುಮಾರು 65 ಕಿ.ಮೀ. ಮೇಲೆ ಹೋಗಿ ಬಳಿಕ ಸ್ಟಾರ್‌ಶಿಪ್‌ನಿಂದ ಪ್ರತ್ಯೇಕಗೊಂಡು ಭೂಮಿಗೆ ಹಿಂತುರುಗಲಿದೆ.
ಈ ಮೂಲಕ ಭವಿಷ್ಯದಲ್ಲಿ ಚಂದ್ರ ಹಾಗೂ ಮಂಗಳನಲ್ಲಿ ಮಾನವರನ್ನು ಕಳಿಸಲು ಈ ರಾಕೆಟ್ ಬಳಸಲು ಸ್ಪೇಸ್ ಎಕ್ಸ್ ಬೃಹತ್ ಯೋಜನೆ ಹಾಕಿಕೊಂಡಿದೆ.
ಇದು ಸಿಬ್ಬಂದಿಯಿಲ್ಲದೇ ಹಾರಾಟ ನಡೆಸಲಿದ್ದು ಸಾಗರ ಪ್ರದೇಶದಲ್ಲಿ ಇದನ್ನು ಯಶಸ್ವಿಯಾಗಿ ಇಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅಲ್ಲದೇ ಈ ರಾಕೆಟ್ ಅನ್ನು ಸಂಪೂರ್ಣವಾಗಿ ಮರುಬಳಕೆ ಮಾಡಲು ಉದ್ದೇಶಿಸಾಲಗಿದ್ದು ಬಾಹ್ಯಾಕಾಶ ವಿಜ್ಞಾನಿಗಳು ಈ ಪ್ರಕ್ರಿಯೆ ಮೇಲೆ ತೀವ್ರ ಕಣ್ಣಿಟ್ಟಿದ್ದಾರೆ.
ಹಾಲಿವುಡ್‌ನ ಸಿನಿಮಾಗಳಲ್ಲಿ ನೋಡುತ್ತಿದ್ದ ರೋಮಾಂಚನಕಾರಿ ಸ್ಟಾರ್‌ಶಿಪ್ ಭವಿಷ್ಯದಲ್ಲಿ ನಿಜವಾಗಲಿವೆಯೇ ಎಂಬುದನ್ನು ಈ ಯೋಜನೆ ತಿಳಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.