ADVERTISEMENT

ಸೂರ್ಯನ ಅಧ್ಯಯನಕ್ಕೆ ನಭಕ್ಕೆ ಚಿಮ್ಮಿತು ‘ಸೋಲಾರ್‌ ಪ್ರೋಬ್‌’

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2018, 9:08 IST
Last Updated 12 ಆಗಸ್ಟ್ 2018, 9:08 IST
ನಭಕ್ಕೆ ಚಿಮ್ಮಿದ ‘ಪಾರ್ಕರ್‌ ಸೋಲಾರ್‌ ಪ್ರೋಬ್‌’
ನಭಕ್ಕೆ ಚಿಮ್ಮಿದ ‘ಪಾರ್ಕರ್‌ ಸೋಲಾರ್‌ ಪ್ರೋಬ್‌’    

ತಂಪಾ, ಅಮೆರಿಕ:ಸೂರ್ಯನ ಹೊರಗಿನ ಮೇಲ್ಮೈ ಪ್ರದೇಶದ ಅಧ್ಯಯನಕ್ಕೆ ಅಮೆರಿಕ ಬಾಹ್ಯಾಕಾಶ ಸಂಸ್ಥೆಯ(ನಾಸಾ) ಮಹತ್ವಾಕಾಂಕ್ಷೆಯ ‘ಪಾರ್ಕರ್‌ ಸೋಲಾರ್‌ ಪ್ರೋಬ್‌'(ಪಿಎಸ್‌ಪಿ) ಬಾಹ್ಯಾಕಾಶ ರೋಬೊ ನೌಕೆಯು ಭಾನುವಾರ ನಭಕ್ಕೆ ಚಿಮ್ಮಿತು. ಈ ಮೂಲಕ ನಾಸ ಐತಿಹಾಸಿಕವಾಗಿ ಒಂದು ಮೈಲುಗಲ್ಲು ಸ್ಥಾಪಿಸಿತು.

ಈ ಸಂಬಂಧ ಶುಕ್ರವಾರದಿಂದ(ಆ.10) ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ನಾಸಾ, ಶನಿವಾರ ಒಂದು ಪ್ರಯತ್ನ ನಡೆಸಿ, ಉಡಾವಣೆಯನ್ನು ಭಾನುವಾರಕ್ಕೆ ಮುಂದೂಡಿತು. ಇಂದು ಬೆಳಿಗ್ಗೆ 3.31ಕ್ಕೆ(ಸ್ಥಳೀಯ ಕಾಲಮಾನ) (ಭಾರತೀಯ ಕಾಲಮಾನ ಮಧ್ಯಾಹ್ನ 1.1ಕ್ಕೆ)ಉಡಾವಣೆ ಪ್ರಕ್ರಿಯೆಗೆ ಚಾಲನೆ ನೀಡಿತು. ಎರಡನೇ ಈ ಪ್ರಯತ್ನದಲ್ಲಿ ಉಡಾವಣೆ ಕಾರ್ಯಯಶಸ್ವಿಯಾಗಿದೆ.

ಶನಿವಾರ ಬೆಳಿಗ್ಗೆ 3.33ಕ್ಕೆ(ಸ್ಥಳೀಯ ಕಾಲಮಾನ) (ಭಾರತೀಯ ಕಾಲಮಾನ ಮಧ್ಯಾಹ್ನ 1.3ಕ್ಕೆ) ಉಡಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಸಮಯ ಬದಲವಾಣೆ ಮಾಡಿ ಒಂದು ತಾಸು(ಸ್ಥಳೀಯ ಕಾಲಮಾನಬೆಳಿಗ್ಗೆ 4.28ಕ್ಕೆ, ಭಾರತೀಯ ಕಾಲಮಾನ 2.08ಕ್ಕೆ)ಮುಂದೂಡಲಾಯಿತು.ಆದರೆ, ಕೊನೆಯಲ್ಲಿ ಉಡಾವಣೆಯನ್ನು ಭಾನುವಾರ ಬೆಳಿಗ್ಗೆನಡೆಸುವುದಾಗಿ ಘೋಷಿಸಿತ್ತು.

ADVERTISEMENT

ಫ್ಲಾರಿಡಾದ ಕೇಪ್‌ ಕೆನವರಾಲ್‌ನಿಂದ ನೌಕೆಯನ್ನು ಹೊತ್ತು ಡೆಲ್ಟಾ –4 ಉಡಾವಣಾ ವಾಹನ ಆಗಸಕ್ಕೆ ಚಿಮ್ಮತು. ವಾಹಕ ಪ್ರತಿ ಗಂಟೆಗೆ 430,000 ಮೈಲಿ ವೇಗದಲ್ಲಿ ಚಲಿಸುತ್ತದೆ. ಉಡಾವಣೆಗೆ ಹವಾಮಾನ ಶೇ 70ರಷ್ಟು ಪೂರಕವಾಗಿದೆ ಎಂದು ನಾಸಾ ತಿಳಿಸಿತ್ತು.

ಸುಮಾರು 62 ಲಕ್ಷ ಕಿಲೋ ಮೀಟರ್‌ ದೂರದ ಸೂರ್ಯನ ಹೊರಭಾಗ (ಕರೋನ) ಪ್ರವೇಶಿಸಿ ಅಧ್ಯಯನ ನಡೆಸುವ ಪ್ರಯತ್ನಇದಾಗಿದೆ. 60 ವರ್ಷಗಳ ಹಿಂದೆ ಸೌರಮಾರುತದ ಇರುವಿಕೆಯನ್ನು ಸೂಚಿಸಿದ್ದ ಖಗೋಳ ವಿಜ್ಞಾನಿ ‘ಯುಗೀನ್‌ ಪಾರ್ಕರ್‌’ ಗೌರವಾರ್ಥ ಅವರ ಹೆಸರನ್ನೇ ನೌಕೆಗೆ ಇಡಲಾಗಿದೆ.

‘ಪಾರ್ಕರ್‌ ಸೋಲಾರ್‌ ಅಧ್ಯಯನವು, ಸೌರವ್ಯೂಹದಲ್ಲಿ ಭೂಮಿಗೆ ಯಾವಾಗ ಅಪಾಯ ಒದಗಬಹುದು ಎಂಬುದನ್ನು ಅಂದಾಜಿಸಲು ನೆರವಾಗಲಿದೆ’ ಎಂದು ಅಧ್ಯಯನ ತಂಡದಲ್ಲಿರುವ ವಿಜ್ಞಾನಿ ಹಾಗೂ ಮಿಚಿಗನ್‌ ವಿವಿಯ ಪ್ರೊಫೆಸರ್‌ ಜಸ್ಟೀನ್‌ ಕಾಸ್ಪೆರ್‌ ಹೇಳಿದ್ದಾರೆ.

‘ಪಾರ್ಕರ್‌ ಸೋಲಾರ್‌ ಪ್ರೋಬ್‌' ಉಡಾವಣೆಯುಯಶ್ವಿಯಾಗಿದ್ದು, ಪ್ರಯಾಣ ಮುಂದುವರಿಸಿದೆ ಎಂದು ನಾಸಾ ಟ್ವಿಟ್‌ ಮಾಡಿದೆ.

ಪ್ರೋಬ್‌ನ ಸೋಲಾರ್‌ ಪ್ಯಾನಲ್‌ಗಳು ತೆರೆದುಕೊಂಡಿದ್ದು, ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿ ನಾಸಾ ಮತ್ತೊಂದು ಟ್ವಿಟ್‌ ಮಾಡಿದೆ.

‘ಪಾರ್ಕರ್‌ ಸೋಲಾರ್‌ ಪ್ರೋಬ್‌'(ಪಿಎಸ್‌ಪಿ) ಹೊತ್ತ ಬಾಹ್ಯಾಕಾಶ ರೋಬೊ ನೌಕೆ ನಭಕ್ಕೆ ಚಿಮ್ಮುವ ಪ್ರಕ್ರಿಯೆ ಆರಂಭವಾದ ಕ್ಷಣ. ಚಿತ್ರ: ನಾಸಾ
‘ಪಾರ್ಕರ್‌ ಸೋಲಾರ್‌ ಪ್ರೋಬ್‌'(ಪಿಎಸ್‌ಪಿ) ಹೊತ್ತು ನಭೆಕ್ಕೆ ಚಿಮ್ಮಿದ ಬಾಹ್ಯಾಕಾಶ ರೋಬೊ ನೌಕೆ. ಚಿತ್ರ: ನಾಸಾ

ಭಸ್ಮಾಸುರ ಸೂರ್ಯನತ್ತ...

ತನ್ನ ಪ್ರಖರತೆಯಿಂದಲೇ ಎಲ್ಲವನ್ನೂ ಭಸ್ಮ ಮಾಡಬಲ್ಲ ಅಪಾರ ಶಕ್ತಿ ಹೊಂದಿರುವ ಸೂರ್ಯನ ಬಿಸಿಲು ತುಸು ಹೆಚ್ಚಾದರು ಸಾಕು ಭೂಮಿ ಮೇಲಿನ ಮಾನವ/ಜೀವಿಗಳು ವಿಲವಿಲ ಎನ್ನುತ್ತವೆ. ಭೂಮಿಯಿಂದ ಸರಾಸರಿ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿರುವ ಸೂರ್ಯ 6000 ಡಿಗ್ರಿ ಸೆಲ್ಸಿಯಸ್‌ ಮೇಲ್ಮೈ ಉಷ್ಣತೆಹೊಂದಿದೆ. ಸೂರ್ಯನ ಸಮೀಪ ಯಾವುದೇ ವಸ್ತು ಹೋದರು ಅದು ಸುಟ್ಟು ಭಸ್ಮವಾಗುತ್ತದೆ. ಅಂತಹ ಸೂರ್ಯನ ಅಧ್ಯಯನಕ್ಕೆ ನಾಸಾ ಮುಂದಾಗಿದೆ. ಆ ತಾಪವನ್ನು ಸಹಿಸಿಕೊಂಡು ಕೆಲಸ ನಿರ್ವಹಿಸಬಲ್ಲ ಪಿಎಸ್‌ಪಿಯನ್ನು ಸಿದ್ಧಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.