ADVERTISEMENT

ಚೀನಾದಿಂದ ಪಾಕಿಸ್ತಾನದ ರಿಮೋಟ್ ಸೆನ್ಸಿಂಗ್ ಉಪಗ್ರಹ ಉಡ್ಡಯನ

ಪಿಟಿಐ
Published 31 ಜುಲೈ 2025, 10:33 IST
Last Updated 31 ಜುಲೈ 2025, 10:33 IST
<div class="paragraphs"><p>ಪಾಕಿಸ್ತಾನದ ರಿಮೋಟ್ ಸೆನ್ಸಿಂಗ್ ಉಪಗ್ರಹ</p></div>

ಪಾಕಿಸ್ತಾನದ ರಿಮೋಟ್ ಸೆನ್ಸಿಂಗ್ ಉಪಗ್ರಹ

   

(ಚಿತ್ರ ಕೃಪೆ: X/@China24Official)

ಇಸ್ಲಾಮಾಬಾದ್/ಬೀಜಿಂಗ್: ಹವಾಮಾನ ಬದಲಾವಣೆಗಳಿಗೆ ಸಂಬಂಧಿಸಿದಂತ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಪಾಕಿಸ್ತಾನವು ಇಂದು (ಗುರುವಾರ) ಚೀನಾದ ಸಹಾಯದಿಂದ ದೂರಸಂವೇದಿ ಉಪಗ್ರಹದ ಉಡ್ಡಯನ ಮಾಡಿದೆ.

ADVERTISEMENT

ಚೀನಾದ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿರುವ ಕ್ಸಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಪಾಕಿಸ್ತಾನ ರಿಮೋಟ್ ಸೆನ್ಸಿಂಗ್ ಉಪಗ್ರಹವನ್ನು (PRSS-1) ಕುವಾಯ್ಝೌ-1A (KZ-1A) ರಾಕೆಟ್ ಮೂಲಕ ಉಡ್ಡಯನ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಸ್ಪೇಸ್ ಆ್ಯಂಡ್ ಅಪ್ಪರ್ ಅಟ್ಮಾಸ್ಫಿಯರ್ ರಿಸರ್ಚ್ ಕಮಿಷನ್ (SUPARCO) ತಾಂತ್ರಿಕ ನೆರವನ್ನು ಒದಗಿಸಿತು.

ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಪ್ರಕಾರ, ಉಪಗ್ರಹವು ನಿಗದಿತ ಕಕ್ಷೆಯನ್ನು ಸೇರಿತು. ಪ್ರಸಕ್ತ ಸಾಲಿನಲ್ಲಿ ಚೀನಾ ಉಡ್ಡಯನ ಮಾಡಿದ ಪಾಕಿಸ್ತಾನದ ಎರಡನೇ ಉಪಗ್ರಹ ಇದಾಗಿದೆ.

ಭೂ ಸಂಪನ್ಮೂಲ ಸಮೀಕ್ಷೆ ಮತ್ತು ನೈಸರ್ಗಿಕ ವಿಪತ್ತು ತಡೆಗಟ್ಟುವುದು ಉಪಗ್ರಹದ ಪ್ರಾಥಮಿಕ ಉದ್ದೇಶವಾಗಿದೆ. ಪ್ರವಾಹ, ಭೂಕುಸಿತ, ಹಿಮ ಕರಗುವುದು, ಅರಣ್ಯನಾಶ ಸೇರಿದಂತೆ ನೈಸರ್ಗಿಕ ಸವಾಲುಗಳನ್ನು ಎದುರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನಲಾಗಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಹಾಗೂ ಪಾಕಿಸ್ತಾನ ನಡುವಣ ಸಹಕಾರ ವೃದ್ಧಿಯಲ್ಲಿ ಈ ಯೋಜನೆಯು ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.