ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾನಿಗಳ ಭೋಜನ ಕೂಟದಲ್ಲಿ ಶುಭಾಂಶು ಶುಕ್ಲ (ಎಡದಿಂದ ಮೊದಲನೆಯವರು) ಇದ್ದಾರೆ
Peggy Whitson ಎಕ್ಸ್ ಖಾತೆಯ ಚಿತ್ರ
ನವದೆಹಲಿ: ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್) ಜುಲೈ 15ರಂದು ಭೂಮಿಗೆ ಮರಳಲಿದ್ದು, ಕ್ಯಾಲಿಫೋರ್ನಿಯಾದ ಕಡಲ ತೀರದ ನೀರಿನಲ್ಲಿ ಇಳಿಯಲಿದ್ದಾರೆ.
‘ಆ್ಯಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಶುಕ್ಲಾ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿಬೊರ್ ಕಾಪು ಹಾಗೂ ಪೋಲಂಡ್‌ನ ಸ್ಲಾವೋಸ್ ಯು.ವಿನ್ಸೀವ್ಸ್‌ಕಿ ಅವರು ಜೂನ್ 26ರಂದು ಐಎಸ್‌ಎಸ್‌ಗೆ ತೆರಳಿದ್ದರು.
ನಾಲ್ವರು ಗಗನಯಾತ್ರಿಗಳು ಐಎಸ್‌ಎಸ್‌ನಿಂದ ಸೋಮವಾರ ಸಂಜೆ ಭಾರತೀಯ ಕಾಲಮಾನ ಪ್ರಕಾರ ಸಂಜೆ 4.35ಕ್ಕೆ ಡ್ರ್ಯಾಗನ್ ನೌಕೆಯಲ್ಲಿ ಹೊರಡಲಿದ್ದು, ನಿಗದಿತ ಕಕ್ಷೆಯಲ್ಲಿ ಹಲವು ಸುತ್ತು ಹಾಕಿದ ಬಳಿಕ ಜುಲೈ 15ರಂದು ಮಧ್ಯಾಹ್ನ 3 ಗಂಟೆಗೆ ಕ್ಯಾಲಿಫೋರ್ನಿಯಾದ ಕಡಲ ತೀರದಲ್ಲಿ ಬಂದಿಳಿಯಲಿದ್ದಾರೆ ಎಂದು ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತವು ತಿಳಿಸಿದೆ.
ಶುಕ್ಲಾ ಹಾಗೂ ಇತರ ಮೂವರು ಗಗನಯಾತ್ರಿಗಳು ಸ್ಪೇಸ್ ಸೂಟ್ ಧರಿಸಿ, ಮಧ್ಯಾಹ್ನ 2.25ಕ್ಕೆ ಬಾಹ್ಯಾಕಾಶ ನೌಕೆ ಏರುವ ಸಾಧ್ಯತೆ ಇದೆ. ಭೂಮಿಗೆ ಪಯಣ ಆರಂಭಿಸುವ ಮುನ್ನ ಅಗತ್ಯ ಪರೀಕ್ಷೆಗಳನ್ನು ನಡೆಸಲಿದ್ದಾರೆ.
18 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ಗಗನಯಾತ್ರಿಗಳು ಭೂಮಿಗೆ ಮರಳಿದ ಬಳಿಕ, ಏಳು ದಿನಗಳ ಪುನಶ್ಚೇತನಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ವೈದ್ಯರ ತಂಡ ನೆರವಾಗಲಿದೆ.
ಐಎಸ್‌ಎಸ್ ಗಂಟೆಗೆ 28 ಸಾವಿರ ಕಿ.ಮೀ. ವೇಗದಲ್ಲಿ ಭೂಮಿಯನ್ನು ಸುತ್ತುತ್ತಿದೆ. ಡ್ರ್ಯಾಗನ್ ಬಾಹ್ಯಾಕಾಶ ಕೋಶವನ್ನು ಐಎಸ್‌ಎಸ್‌ನಿಂದ ಅನ್‌ಡಾಕ್ (ಬೇರ್ಪಡಿಸುವುದು) ಪ್ರಕ್ರಿಯೆ ನಡೆಸಲಾಗುತ್ತದೆ. ಬಳಿಕ, ಭೂಮಿಯ ವಾತಾವರಣಕ್ಕೆ ಪ್ರವೇಶಿಸಲಿದೆ.
ಆಳ ಬಾಹ್ಯಾಕಾಶದಲ್ಲಿ ಒಂದು ದಿನಕ್ಕಾಗಿ ಸೂಕ್ಷ್ಮ ಪಾಚಿಯನ್ನು ಬಳಸಿ ಆಹಾರ ಉತ್ಪಾದನೆ, ಆಮ್ಲಜನಕ ಹಾಗೂ ಜೈವಿಕ ಇಂಧನ ಉತ್ಪಾದನೆಯ ಪ್ರಯೋಗವನ್ನು ಶುಕ್ಲಾ ಅವರು ಮುನ್ನಡೆಸಿದ್ದಾರೆ ಎಂದು ‘ಆ್ಯಕ್ಸಿಯಂ ಸ್ಪೇಸ್’ ಹೇಳಿದೆ.
ಕಕ್ಷೆಯಲ್ಲಿನ ಕ್ಲಿಷ್ಟಕರ ವಾತಾವರಣದಲ್ಲಿ ಗಗನಯಾತ್ರಿಗಳು ದೀರ್ಘಕಾಲದವರೆಗೆ ದೈಹಿಕ ಹಾಗೂ ಮಾನಸಿಕವಾಗಿ ಹೇಗಿರಲಿದ್ದಾರೆ ಎಂಬುದರ ಪ್ರಯೋಗವೂ ನಡೆಯಲಿದೆ.
‘ಡ್ರ್ಯಾಗನ್ ನೌಕೆಯು ಗಗನಯಾತ್ರಿಗಳೊಂದಿಗೆ 280 ಕೆ.ಜಿಯಷ್ಟು ವಸ್ತುಗಳನ್ನು ಹೊತ್ತು ತರಲಿದೆ. ನಾಸಾದ ಹಾರ್ಡ್‌ವೇರ್ ಹಾಗೂ 60 ಪ್ರಯೋಗಗಳಿಗೆ ಬಳಸಿದ್ದ ವಸ್ತುಗಳೂ ಸೇರಿವೆ. ಬಾಹ್ಯಾಕಾಶದ ಕೊನೆಯ ದಿನಗಳನ್ನು ಸಂತಸದಿಂದ ಕಳೆಯುತ್ತಿದ್ದೇವೆ. ಈ ಸಂಭ್ರಮಕ್ಕಾಗಿ ಕಾಕ್‌ಟೈಲ್ ಮತ್ತು ಉತ್ತಮ ಸ್ನೇಹಿತರ ಬಳಗವಿದೆ’ ಎಂದು ಆ್ಯಕ್ಸಿಯಂ–4 ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಶುಕ್ಲಾ ಅವರು ತೆಗೆದುಕೊಂಡು ಹೋದ ಕ್ಯಾರೆಟ್ ಹಲ್ವಾ ಹಾಗೂ ಮಾವಿನ ರಸ ಪಾರ್ಟಿಗೆ ಕಳೆ ತಂದಿತ್ತು ಎಂದಿದ್ದಾರೆ.
2027ರಲ್ಲಿ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸುವ ‘ಗಗನಯಾನ’ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವ ಉದ್ದೇಶ ಇಸ್ರೊ ಹೊಂದಿದೆ. ಅಲ್ಲಿನ ಅನುಭವ ಪಡೆಯುವ ಉದ್ದೇಶದಿಂದ ಶುಭಾಂಶು ಶುಕ್ಲಾ ಅವರನ್ನು ಐಎಸ್‌ಎಸ್‌ಗೆ ಕಳುಹಿಸಲು ₹550 ಕೋಟಿ ಪಾವತಿಸಲಾಗಿದೆ ಎಂದು ಇಸ್ರೊ ತಿಳಿಸಿದೆ.
2027ರಲ್ಲಿ ‘ಗಗನಯಾನ’ ಮೂಲಕ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸವ ಯೋಜನೆಗೆ ನೆರವಾಗುವ ಉದ್ದೇಶದಿಂದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಕಳುಹಿಸಲು ಸುಮಾರು ₹550 ಕೋಟಿಯನ್ನು ಇಸ್ರೊ ನೀಡಿದೆ.
‘ಗಗನಯಾತ್ರಿಗಳ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯದ ಕುರಿತು ಇಸ್ರೊದ ವೈಮಾನಿಕ ವೈದ್ಯಕೀಯ ತಂಡವು ತೀವ್ರ ನಿಗಾ ವಹಿಸಿದೆ. ಸದ್ಯ ಶುಭಾಂಶು ಅವರ ಆರೋಗ್ಯ ಉತ್ತಮವಾಗಿದೆ. ಅವರ ಅತ್ಯಂತ ಉತ್ಸಾಹದಿಂದಿದ್ದಾರೆ’ ಎಂದು ಇಸ್ರೊ ಹೇಳಿದೆ.
ಭೂಮಿಯಿಂದ 28 ಸಾವಿರ ಕಿಲೋ ಮೀಟರ್ ಎತ್ತರದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವಿದೆ. ಅಲ್ಲಿಂದ ಹೊರಟ ನೌಕೆಯು ಸ್ವಯಂ ಚಾಲಿತವಾಗಿದ್ದು, ನಿಧಾನವಾಗಿ ತನ್ನ ವೇಗವನ್ನು ತಗ್ಗಿಸಿ ಭೂಮಿಯ ವಾತಾವರಣವನ್ನು ಪ್ರವೇಶಿಸಲಿದೆ. ಅಲ್ಲಿಂದ ಅದು ಕ್ಯಾಲಿಫೋರ್ನಿಯಾದ ಕಡಲ ತೀರದಲ್ಲಿ ನೀರಿನಲ್ಲಿ ಇಳಿಯಲಿದೆ.
ಡ್ರ್ಯಾಗನ್ ನೌಕೆಯು ಗಗನಯಾನಿಗಳೊಂದಿಗೆ 280 ಕೆ.ಜಿ.ಯಷ್ಟು ವಸ್ತುಗಳನ್ನೂ ಹೊತ್ತು ತರುತ್ತಿದೆ. ಇದರಲ್ಲಿ ನಾಸಾದ ಕೆಲ ಹಾರ್ಡ್‌ವೇರ್‌ಗಳು ಮತ್ತು 60 ಪ್ರಯೋಗಗಳಿಗೆ ಬಳಸಿದ ವಸ್ತುಗಳು ಇವೆ. ತಮ್ಮ ಬಾಹ್ಯಾಕಾಶ ಯಾನದ ಕುರಿತು ಆಕ್ಸಿಯಮ್–4ರ ಕಮಾಂಡರ್ ಪೆಗ್ಗಿ ವಿಟ್ಸನ್ ಅವರು ಅನಿಸಿಕೆ ಹಂಚಿಕೊಂಡಿದ್ದು, ‘ಐಎಸ್‌ಎಸ್‌ನಲ್ಲಿನ ಕೊನೆಯ ಕೆಲ ದಿನಗಳನ್ನು ಸಂಭ್ರಮದಿಂದ ಕಳೆಯುತ್ತಿದ್ದೇವೆ. ಈ ಸಂಭ್ರಮಕ್ಕಾಗಿ ಪುನರ್‌ಜಲೀಕರಣಗೊಂಡ ಶ್ರಿಂಪ್ ಕಾಕ್‌ಟೈಲ್ ಮತ್ತು ಉತ್ತಮ ಸ್ನೇಹಿತರ ಬಳಗವಿದೆ’ ಎಂದು ಸಾಮಾಜಿಕ ಮಾದ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಶುಕ್ಲಾ ಅವರು ತೆಗೆದುಕೊಂಡು ಹೋದ ಕ್ಯಾರೆಟ್ ಹಲ್ವಾ ಮತ್ತು ಆಮ್‌ರಸ್ ಅನ್ನು ಪಾರ್ಟಿಗೆ ಕಳೆ ಹೆಚ್ಚಿಸಿದೆ.
ಆಳ ಬಾಹ್ಯಾಕಾಶ ಯೋಜನೆಯಲ್ಲಿ ಒಂದು ದಿನಕ್ಕಾಗಿ ಸೂಕ್ಷ್ಮ ಪಾಚಿಯನ್ನು ಬಳಸಿ ಆಹಾರ ಉತ್ಪಾದನೆ, ಆಮ್ಲಜನಕ ಮತ್ತು ಜೈವಿಕ ಇಂಧನ ಉತ್ಪಾದನೆಯ ಪ್ರಯೋಗವನ್ನು ಶುಭಾಂಶು ಮುನ್ನಡೆಸಿದ್ದಾರೆ. ಇದರೊಂದಿಗೆ ಇತರ ಪ್ರಯೋಗಗಳ ಮೂಲಕ ಕಕ್ಷೆಯಲ್ಲಿನ ಕ್ಲಿಷ್ಟಕರ ವಾತಾವರಣದಲ್ಲಿ ಗಗನಯಾನಿಗಳು ದೀರ್ಘಕಾಲದವರೆಗೆ ಜೈವಿಕವಾಗಿ, ಭಾವನಾತ್ಮಕವಾಗಿ ಹೇಗಿರಲಿದ್ದಾರೆ ಎಂಬುದರ ಪ್ರಯೋಗವೂ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.