ADVERTISEMENT

ನೋಡಿ: ಕ್ಯಾಮೆರಾ ಮುಂದೆ ಒಳ ಉಡುಪು ತೆಗೆದ ನಟ ಅರ್ಜುನ್ ಸಹೋದರಿ ಅನ್ಶುಲಾ ಕಪೂರ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 12:36 IST
Last Updated 5 ಜುಲೈ 2022, 12:36 IST
ಅನ್ಸುಲಾ
ಅನ್ಸುಲಾ    

ಹೈದರಾಬಾದ್: ಬಾಲಿವುಡ್ ನಟ ಅರ್ಜುನ್ ಕಪೂರ್ ಸಹೋದರಿ ಅನ್ಶುಲಾ ಕಪೂರ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಂದನ್ನು ಹಂಚಿಕೊಳ್ಳುವ ಮೂಲಕ ಸಂಚಲನ ಉಂಟು ಮಾಡಿದ್ದಾರೆ.

ಅನ್ಶುಲಾ ಅವರು ಇನ್ನೂ ಸಿನಿಮಾ ರಂಗ ಪ್ರವೇಶ ಮಾಡಿಲ್ಲ. ಆದರೆ ಅವರಿಗೆ ಸಾಕಷ್ಟು ಜನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕಾಣಿಸಿಕೊಳ್ಳುವಅನ್ಸುಲಾ ಹೊಸ ಹೊಸ ಪೋಸ್ಟ್‌ಗಳನ್ನು ಹಾಕುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಇತ್ತೀಚೆಗೆ ಅನ್ಶುಲಾ ತನ್ನ ಒಳಉಡುಪನ್ನು ಕ್ಯಾಮರಾ ಮುಂದೆಯೇ ತೆಗೆದಿದ್ದಾರೆ. ಒಳ ಉಡುಪನ್ನು (ಬ್ರಾ) ತೆಗೆದು ಹಾಕಿದ ಮೇಲೆ ಅದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಬ್ರಾ ಧರಿಸಿ ಹೊರಗೆ ಓಡಾಡುವುದರಿಂದ ಮಹಿಳೆಯರಿಗೆ ನಿಜಕ್ಕೂ ಕಿರಿಕಿರಿಯಾಗುತ್ತದೆ.ಮನೆಗೆ ಬಂದುಬ್ರಾ ತೆಗೆದಾಗ ಸಿಗುವ ಸಮಾಧಾನ ಶ್ರೇಷ್ಠವಾದದ್ದು ಎನ್ನುವ ಅರ್ಥದಲ್ಲಿ ಅನ್ಶುಲಾ ವಿಡಿಯೊ ಹಾಕಿದ್ದಾರೆ. ನೊ ಬ್ರಾ ಕ್ಲಬ್ (#nobraclub) ಪರವಾಗಿ ಅವರು ವಿಡಿಯೊ ಹಾಕಿದ್ದಾರೆ.

ಈ ವಿಡಿಯೊ ಕೆಲವೇ ಗಂಟೆಗಳಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು, ಅಭಿಮಾನಿಗಳ ಜೊತೆ ನಟಿಪ್ರಿಯಾಂಕಾ ಚೋಪ್ರಾ ಕೂಡವಿಡಿಯೊಗೆಕಾಮೆಂಟ್ ಮಾಡಿದ್ದಾರೆ.

ಅನ್ಶುಲಾ ದಪ್ಪ ಇರುವುದರಿಂದಫಿಟ್ ಆಗಲು ನಿರಂತರವಾಗಿ ದೇಹವನ್ನು ದಂಡಿಸಿಕೊಂಡು ಬರುತ್ತಿದ್ದಾರೆ. ಅವರು ನಿತ್ಯ ಜಿಮ್‌ ಮಾಡುತ್ತಿದ್ದು ಅಲ್ಲಿನ ಫೋಟೊ, ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.