
ಬೆಂಗಳೂರು ನಗರ
ಪ್ರಜಾವಾಣಿ ಚಿತ್ರ
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಜೀವನ ತುಂಬಾ ದುಬಾರಿಯಾಗಿದೆ. ಮಧ್ಯಮ ವರ್ಗದ ಜನರು ಜೀವಿಸುವುದು ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ಅದಕ್ಕೆ ತಕ್ಕಂತೆ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ತಮ್ಮ ಒಂದು ವಾರದ ಖರ್ಚು ಎಷ್ಟು? ಎಂಬುದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ಪ್ರಾಹ ಎಂಬುವವರು ಇಲ್ಲಿನ ಒಂದು ವಾರದ ಖರ್ಚು ಎಷ್ಟಾಗಿದೆ ಎಂಬುದನ್ನು ವಿವರಿಸಿದ್ದಾರೆ.
ಎಕ್ಸ್ ಮೂಲಕ ಪೋಸ್ಟ್ ಹಂಚಿಕೊಂಡಿರುವ ಪ್ರಾಹ ’ನಾನು ಬೆಂಗಳೂರಿನಲ್ಲಿ ಒಂದು ವಾರ ಪೂರೈಸಿದ್ದೇನೆ. ಮೊದಲ ವಾರದಲ್ಲಿ ಬಾಡಿಗೆಗೆ ₹18,000ಕ್ಕೂ ಹೆಚ್ಚು ನೀಡಿದ್ದೇನೆ. ಊಟಕ್ಕಾಗಿ ₹12,000ಕ್ಕೂ ಹೆಚ್ಚು ಖರ್ಚು ಮಾಡಿದ್ದೇನೆ. ಈ ನಗರದಲ್ಲಿ ವಾಸಿಸುವುದು ನಿಜಕ್ಕೂ ದುಬಾರಿಯಾಗಿದೆ ನಾನು ಇಷ್ಟೊಂದು ಹಣ ಖರ್ಚು ಮಾಡುವ ವ್ಯಕ್ತಿಯೇ ಅಲ್ಲ’. ಎಂದು ಬರೆದಿದ್ದಾರೆ.
ಬೆಂಗಳೂರಿನ ಎಚ್‌ಎಸ್‌ಆರ್‌ನಲ್ಲಿರುವ ಫ್ಲಾಟ್‌ವೊಂದರಲ್ಲಿ ಪ್ರಾಹ ಉಳಿದುಕೊಂಡಿದ್ದಾರೆ. ಈ ಮೊದಲು ಅವರು ಇಂದಿರಾ ನಗರ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮನೆ ಹುಡುಕಿದ್ದರು.
‘ಬೆಂಗಳೂರು ಕೆಲಸ ಮಾಡಲು ಒಳ್ಳೆಯ ನಗರವಾಗಿದೆ. ಇಲ್ಲಿ ಅನೇಕ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇಷ್ಟೊಂದು ಕಾರ್ಯನಿರತ ಮತ್ತು ಸಕ್ರಿಯವಾಗಿರುವ ಇನ್ನೊಂದು ನಗರವನ್ನು ನಾನು ಎಂದಿಗೂ ನೋಡಿರಲಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ
ಈ ಪೋಸ್ಟ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಓರ್ವ ಬಳಕೆದಾರ ‘ಎಚ್‌ಎಸ್‌ಆರ್‌ನ ರಿಯಲ್ ಎಸ್ಟೇಟ್ ತುಂಬಾ ದುಬಾರಿಯಾಗಿದೆ. ನೀವು ಬೊಮ್ಮನಹಳ್ಳಿ ಕಡೆ ವಾಸಿಸಬಹುದು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
‘ಬೆಂಗಳೂರಿನ ಬಾಡಿಗೆ ಮತ್ತು ಖರ್ಚು ಹೊಸತೆನಲ್ಲ. ಇಲ್ಲಿನ ವೆಚ್ಚಗಳು ಪ್ರತೀ ತಿಂಗಳು ಗಗನಕ್ಕೇರುತ್ತಿವೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.