ADVERTISEMENT

ಜಾಗತಿಕ ಮಟ್ಟದಲ್ಲಿ ಇಲಾನ್ ಮಸ್ಕ್ ಒಡೆತನದ ‘ಎಕ್ಸ್’ ಸ್ಥಗಿತ: ನೆಟ್ಟಿಗರ ಪರದಾಟ

ಏಜೆನ್ಸೀಸ್
Published 16 ಫೆಬ್ರುವರಿ 2026, 15:40 IST
Last Updated 16 ಫೆಬ್ರುವರಿ 2026, 15:40 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>
   

ರಾಯಿಟರ್ಸ್ ಚಿತ್ರ

ಬೆಂಗಳೂರು: ಉದ್ಯಮಿ ಇಲಾನ್ ಮಸ್ಕ್ ಒಡೆತದನ ಸಾಮಾಜಿಕ ಮಾಧ್ಯಮ ಎಕ್ಸ್‌ (ಟ್ವಿಟರ್‌) ಸೋಮವಾರ ಕೆಲಕಾಲ ಸ್ಥಗಿತಗೊಂಡಿದೆ.

ಡೌನ್‌ಡಿಟೆಕ್ಟರ್‌ ವರದಿ ಪ್ರಕಾರ ಸೋಮವಾರ ಸಂಜೆ 7ಕ್ಕೆ ಎಕ್ಸ್ ತನ್ನ ಕಾರ್ಯ ಸ್ಥಗಿತಗೊಳಿಸಿದೆ.

ADVERTISEMENT

ಭಾರತ, ಅಮೆರಿಕ, ಬ್ರಿಟನ್, ಪ್ರಾನ್ಸ್‌, ಥಾಯ್ಲೆಂಡ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಎಕ್ಸ್‌ ಕೆಲಕಾಲ ಸ್ಥಗಿತಗೊಂಡಿತ್ತು. ಇದರಿಂದಾಗಿ ಹಲವರು ಪರದಾಡಿದರು. ನಂತರ ಎಂದಿನಂತೆಯೇ ಕಾರ್ಯ ಆರಂಭಿಸಿತ್ತು.

ಭಾರತದಲ್ಲಿ 3,357 ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಇವರಲ್ಲಿ ಶೇಕಡ 46ರಷ್ಟು ಜನರು ವೆಬ್‌ಸೈಟ್ ಸಮಸ್ಯೆಗಳನ್ನು ಅನುಭವಿಸಿದ್ದರೆ, ಶೇಕಡ 45ರಷ್ಟು ಜನರು ಅಪ್ಲಿಕೇಶನ್ ಸಮಸ್ಯೆಗಳನ್ನು ಅನುಭವಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.