ADVERTISEMENT

ಟ್ವಿಟರ್‌ ಪ್ರಧಾನ ಕಚೇರಿಯಲ್ಲಿ ನಿರಾಶ್ರಿತರಿಗೆ ಮನೆ: ಎಲೊನ್ ಮಸ್ಕ್ ಸಮೀಕ್ಷೆ

ರಾಯಿಟರ್ಸ್
Published 11 ಏಪ್ರಿಲ್ 2022, 5:25 IST
Last Updated 11 ಏಪ್ರಿಲ್ 2022, 5:25 IST
ಟೆಸ್ಲಾ ಸಿಇಒ ಎಲೊನ್ ಮಸ್ಕ್
ಟೆಸ್ಲಾ ಸಿಇಒ ಎಲೊನ್ ಮಸ್ಕ್   

ಟ್ವಿಟರ್‌ನ ಪ್ರಧಾನ ಕಚೇರಿಯಲ್ಲಿ ಖಾಲಿ ಇರುವ ಸ್ಥಳದಲ್ಲಿ ನಿರಾಶ್ರಿತರಿಗೆ ಮನೆ ಒದಗಿಸುವ ಬಗ್ಗೆ ಎಲೊನ್ ಮಸ್ಕ್ ಚಿಂತನೆ ನಡೆಸಿದ್ದಾರೆ.

ಟ್ವಿಟರ್‌ನಲ್ಲಿ ಗರಿಷ್ಠ ಸಂಖ್ಯೆಯ ಷೇರು ಪಾಲು ಹೊಂದಿರುವ ಟೆಸ್ಲಾ ಸಿಇಒ ಎಲೊನ್ ಮಸ್ಕ್, ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಬಳಸದೇ ಇರುವ ಖಾಲಿ ಜಾಗದ ಬಳಕೆ ಕುರಿತು ಟ್ವಿಟರ್ ಬಳಕೆದಾರರ ಅಭಿಪ್ರಾಯ ಕೇಳಿದ್ದಾರೆ.

ಟ್ವಿಟರ್ ಉದ್ಯೋಗಿಗಳಲ್ಲಿ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕಚೇರಿಯಲ್ಲಿ ಅಧಿಕ ಸ್ಥಳಾವಕಾಶ ಬಳಕೆಯಾಗದೇ ಉಳಿದಿದೆ. ಈ ಜಾಗದಲ್ಲಿ ನಿರಾಶ್ರಿತರಿಗೆ ಆಶ್ರಯ ಒದಗಿಸುವ ಚಿಂತನೆ ಇದಾಗಿದೆ.

ADVERTISEMENT

ಎಲೊನ್ ಮಸ್ಕ್ ಅವರ ಚಿಂತನೆಯನ್ನು ಅಮೆಜಾನ್ ಸಿಇಒ ಜೆಫ್ ಬೆಜೊಸ್ ಇಷ್ಟಪಟ್ಟಿದ್ದು, ಇದೊಂದು ಉತ್ತಮ ಆಲೋಚನೆ ಎಂದಿದ್ದಾರೆ.

ಎಲೊನ್ ಮಸ್ಕ್ ಅವರ ಚಿಂತನೆಗೆ ಟ್ವಿಟರ್ ಬಳಕೆದಾರರು ಸಹಮತ ವ್ಯಕ್ತಪಡಿಸಿದ್ದು, ಶೇ 90 ರಷ್ಟು ಮಂದಿ ಈ ಯೋಚನೆ ಉತ್ತಮವಾಗಿದೆ, ಕಾರ್ಯಗತಗೊಳಿಸಬಹುದು ಎಂದಿದ್ದಾರೆ.

ಅಮೆಜಾನ್‌ ಸೀಶೆಲ್ ಮುಖ್ಯ ಕಚೇರಿಗೆ ಹೊಂದಿಕೊಂಡಂತೆ ಎಂಟು ಮಹಡಿಗಳ ನಿರಾಶ್ರಿತರ ಆಶ್ರಯ ತಾಣ ಇದೆ. ಈ ಬಗ್ಗೆ ಜೆಫ್ ಬೆಜೊಸ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.