ADVERTISEMENT

ಟ್ವಿಟರ್ ಮಂಡಳಿ ಸೇರುವುದಿಲ್ಲ: ಟೆಸ್ಲಾ ಸಿಇಒ ಎಲೊನ್ ಮಸ್ಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಏಪ್ರಿಲ್ 2022, 7:02 IST
Last Updated 11 ಏಪ್ರಿಲ್ 2022, 7:02 IST
   

ಬೆಂಗಳೂರು: ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ಶೇ 9.2ರಷ್ಟು ಷೇರು ಖರೀದಿಸಿ ಸುದ್ದಿಯಾಗಿದ್ದ ಟೆಸ್ಲಾ ಸಿಇಒ ಎಲೊನ್ ಮಸ್ಕ್, ಟ್ವಿಟರ್ ಮಂಡಳಿ ಸೇರಲು ನಿರಾಕರಿಸಿದ್ದಾರೆ.

ಅಧಿಕ ಷೇರು ಪಾಲು ಹೊಂದಿರುವುದರಿಂದ, ಅವರನ್ನು ಮಂಡಳಿಗೆ ಸೇರಿಕೊಳ್ಳಲು ಸಂಸ್ಥೆ ಆಹ್ವಾನ ನೀಡಿತ್ತು. ಆದರೆ ಅದನ್ನವರು ನಿರಾಕರಿಸಿದ್ದಾರೆ ಎಂದು ಟ್ವಿಟರ್ ಸಿಇಒ ಪರಾಗ್ ಅಗರ್‌ವಾಲ್ ಹೇಳಿದ್ದಾರೆ.

ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಪರಾಗ್, ಎಲೊನ್ ಅವರು ಟ್ವಿಟರ್ ಮಂಡಳಿ ಸೇರದೇ ಇರಲು ನಿರ್ಧರಿಸಿದ್ದಾರೆ ಎಂದಿದ್ದಾರೆ. ಆದರೆ ಅವರಿಗಾಗಿ ಎದುರು ನೋಡುತ್ತೇವೆ, ಮುಂದೆ ಬಂದರೆ ಅವರನ್ನು ಮಂಡಳಿಯಲ್ಲಿ ಸೇರಿಸಿಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಇತ್ತೀಚೆಗಷ್ಟೆ, ಹೂಡಿಕೆ ವಿವರ ನೀಡುವ ಸಂದರ್ಭದಲ್ಲಿ, ಎಲೊನ್ ಮಸ್ಕ್ ಅವರು ತಾವು ಟ್ವಿಟರ್‌ನಲ್ಲಿ ಶೇ 9.2ರಷ್ಟು ಷೇರು ಪಾಲು ಹೊಂದಿದ್ದೇನೆ ಎಂದು ಬಹಿರಂಗಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.