ADVERTISEMENT

ಜರ್ಮನಿ ಅಧ್ಯಕ್ಷ ಫ್ರಾಂಕ್-ವಾಲ್ಟರ್ ‘ಎಕ್ಸ್’ ಖಾತೆ ಹ್ಯಾಕ್: ಹಲವು ಅವಾಂತರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 9:52 IST
Last Updated 16 ಫೆಬ್ರುವರಿ 2025, 9:52 IST
<div class="paragraphs"><p>ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್</p></div>

ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್

   

-ರಾಯಿಟರ್ಸ್ ಚಿತ್ರ

ಫ್ರಾಂಕ್‌ಫರ್ಟ್: ಜರ್ಮನಿ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್ ಅವರ ‘ಎಕ್ಸ್‌’ (ಟ್ವಿಟರ್) ಖಾತೆಯನ್ನು ಅಪರಿಚಿತರು ಹ್ಯಾಕ್ ಮಾಡಿದ್ದಾರೆ. ಜತೆಗೆ, ಹಿಂದಿನ ನಾಜಿ ಪಕ್ಷದ ಮುಖ್ಯಸ್ಥ, ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ ಅವರ ಅಧಿಕೃತ ಖಾತೆ ಎಂಬಂತೆ ಬದಲಾಯಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಕೆಲವೇ ಗಂಟೆಗಳಲ್ಲಿ ಸಮಸ್ಯೆಯನ್ನು ಬಗೆಹರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರಾದರೂ ಸ್ವಲ್ಪ ಸಮಯದ ನಂತರ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್ ‘ಎಕ್ಸ್‌’ ಖಾತೆಯ ವಿವರಗಳನ್ನು ಬಿಹಾರ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಖಾತೆ ಎಂಬಂತೆ ಮತ್ತೆ ಬದಲಾಯಿಸಲಾಗಿದೆ.

‘ಎಕ್ಸ್‌’ ಬಳಕೆದಾರರು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಗೊಂದಲಕ್ಕೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್ ಅವರ ‘ಎಕ್ಸ್‌’ ಖಾತೆ ಹ್ಯಾಕ್ ಆಗಿರುವ ಬಗ್ಗೆ ಜರ್ಮನಿ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.