ADVERTISEMENT

ಇನ್‌ಸ್ಟಾಗ್ರಾಂ ಗೆಳೆಯನನ್ನು ವರಿಸಲು ಅಮೆರಿಕದಿಂದ ಆಂಧ್ರಪ್ರದೇಶಕ್ಕೆ ಬಂದ ಯುವತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಏಪ್ರಿಲ್ 2025, 10:26 IST
Last Updated 9 ಏಪ್ರಿಲ್ 2025, 10:26 IST
<div class="paragraphs"><p>ಇನ್‌ಸ್ಟಾಗ್ರಾಂ ಗೆಳೆಯನನ್ನು ವರಿಸಲು ಅಮೆರಿಕದಿಂದ ಆಂಧ್ರಪ್ರದೇಶಕ್ಕೆ ಬಂದ ಯುವತಿ</p></div>

ಇನ್‌ಸ್ಟಾಗ್ರಾಂ ಗೆಳೆಯನನ್ನು ವರಿಸಲು ಅಮೆರಿಕದಿಂದ ಆಂಧ್ರಪ್ರದೇಶಕ್ಕೆ ಬಂದ ಯುವತಿ

   

ಚಿತ್ರಕೃಪೆ: ಇನ್‌ಸ್ಟಾಗ್ರಾಂ

ಅಮರಾವತಿ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಗೆಳೆಯನನ್ನು ಮದುವೆಯಾಗಲು ಅಮೆರಿಕದ ಯುವತಿಯೊಬ್ಬರು ಆಂಧ್ರಪ್ರದೇಶದ ಹಳ್ಳಿಗೆ ಬಂದಿದ್ದಾರೆ.

ADVERTISEMENT

ಜಾಕ್ಲಿನ್ ಫೆರೆರೊ ಎನ್ನುವ ಯುವತಿ ಚಂದನ್‌ ಎನ್ನುವ ಯುವಕನನ್ನು ವರಿಸಲು ಬಂದಿದ್ದಾರೆ.

ಈ ಕುರಿತು ಜಾಕ್ಲಿನ್‌ ಮತ್ತು ಚಂದನ್‌ ತಮ್ಮ ಪ್ರೇಮ ಪಯಣದ ಬಗ್ಗೆ ಇನ್‌ಸ್ಟಾಗ್ರಾಂನಲ್ಲೇ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ಆಧರಿಸಿ ಎನ್‌ಡಿಟಿವಿ ವರದಿ ಮಾಡಿದೆ.

‘14 ತಿಂಗಳುಗಳ ಕಾಲ ಒಟ್ಟಿಗಿದ್ದೆವು ಈಗ ಹೊಸ ಅಧ್ಯಾಯ ಆರಂಭಿಸಲು ಸಿದ್ಧರಾಗಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. 

ವೃತ್ತಿಯಲ್ಲಿ ಛಾಯಾಗ್ರಾಹಕಿಯಾಗಿರುವ ಜಾಕ್ಲಿನ್, 45 ಸೆಕೆಂಡುಗಳ ವಿಡಿಯೊ ಹಂಚಿಕೊಂಡು, ‘ಒಂದು ಸಂದೇಶ ಸ್ನೇಹವನ್ನು ಬೆಸೆದು, ಹೇಗೆ ಪ್ರೀತಿಯಾಗುವಂತೆ ಮಾಡಿತು’ ಎಂದು ಹೇಳಿದ್ದಾರೆ.

‘ವಿರೋಧಗಳು ಎದುರಾದರೂ, ದೇವರು (ಜೀಸಸ್‌) ನಮ್ಮನ್ನು ಸೇರುವಂತೆ ಮಾಡಿದ್ದಾರೆ’ ಎಂದು ಜಾಕ್ಲಿನ್ ಹೇಳಿದ್ದಾರೆ.

‘ಕ್ರಿಶ್ಚಿಯನ್‌ ಧರ್ಮದ ಬಗ್ಗೆ ಚಂದನ್‌ ಅವರಿಗೆ ಇರುವ ಆಸಕ್ತಿಯನ್ನು ನೋಡಿ, ಆಕರ್ಷಿತಳಾಗಿದ್ದೆ. ಸಂಗೀತ, ಕಲೆ, ಛಾಯಾಗ್ರಹಣ ಎಲ್ಲಾ ಕ್ಷೇತ್ರದಲ್ಲೂ ನನಗೆ ಸರಿ ಹೊಂದುವಂತಿದ್ದರು. 8 ತಿಂಗಳು ಆನ್‌ಲೈನ್‌ನಲ್ಲಿ ಡೇಟಿಂಗ್‌ ಮಾಡಿದ ನಂತರ ತಾಯಿಯ ಒಪ್ಪಿಗೆ ಪಡೆದು ಭಾರತಕ್ಕೆ ಪ್ರಯಾಣಿಸಿದೆ. ಹೊಸ ಜೀವನದ ಪಯಣವನ್ನು ಆರಂಭಿಸಲು ಸಜ್ಜಾಗಿದ್ದೇನೆ’ ಎಂದು ಜಾಕ್ಲಿನ್ ಹೇಳಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಜಾಕ್ಲಿನ್– ಚಂದನ್‌ ಲವ್‌ ಸ್ಟೋರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜತೆಗೆ ಹಲವರು ಆನ್‌ಲೈನ್‌ನಲ್ಲಿ ತಮ್ಮ ಜೀವನ ಸಂಗಾತಿಯನ್ನು ಕಂಡುಕೊಂಡ ಬಗ್ಗೆ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.