ಚಿತ್ರಕೃಪೆ: ಇನ್‌ಸ್ಟಾಗ್ರಾಂ
ಬೆಂಗಳೂರು: ಓಪನ್‌ಎಐನ ‘ಜಿಬ್ಲೀ’ ಅಪ್ಲಿಕೇಶನ್ ಬಳಸಿಕೊಂಡು ಯಾವುದೇ ಫೋಟೊವನ್ನು ಆ್ಯನಿಮೇಟೆಡ್ ಚಿತ್ರವಾಗಿ ಬದಲಾಯಿಸುವ ಟ್ರೆಂಡ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಸೆಲಬ್ರೆಟಿಗಳಿಂದ ಹಿಡಿದು ಸಾಮಾನ್ಯ ಜನರು ಈ ಟ್ರೆಂಡ್‌ಗೆ ಮಾರುಹೋಗಿದ್ದರು.
ಅದಾದ ಬಳಿಕ ಹಲವಾರು ಎಐ ಟೂಲ್‌ಗಳು ಇದೇ ರೀತಿಯ ಫೋಟೊಗಳನ್ನು ಉಚಿತವಾಗಿ ಸೃಜಿಸಿಕೊಡುತ್ತಿದ್ದವು. ಇದೇ ರೀತಿ ಕಳೆದ ತಿಂಗಳು ಗೂಗಲ್ ಪರಿಚಯಿಸಿದ್ದ ‘ನ್ಯಾನೊ ಬನಾನ ಎಐ ತ್ರಿಡಿ’ ಕೂಡ ಟ್ರೆಂಡ್ ಸೃಷ್ಟಿಸಿತ್ತು.
ಈಗ ಮತ್ತೊಂದು ಟ್ರೆಂಡ್ ಸಾಮಾಜಿಕ ಜಾಲತಾಣ ವೇದಿಕೆ ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದ್ದು, ವಿಶೇಷವಾಗಿ ಹೆಂಗೆಳೆಯರ ಮನಸ್ಸನ್ನು ಗೆದ್ದಿದೆ. ಜೆಮಿನಿ ಎಐನ ‘ನ್ಯಾನೊ ಬನಾನ ಎಐ ಸ್ಯಾರಿ’ ಟೂಲ್ ಮೂಲಕ ಸಾಮಾನ್ಯ ಫೋಟೊವನ್ನು ರೆಟ್ರೊ ಶೈಲಿಯ ಫೋಟೊವನ್ನಾಗಿ ಬದಲಾಯಿಸಬಹುದಾಗಿದೆ.
ನಟಿ ಮಣಿಯರು ಸೇರಿದಂತೆ ಹಲವರು ಈ ಟ್ರೆಂಡ್ ಮೆಚ್ಚಿಕೊಂಡಿದ್ದು, ಸೀರೆಯಲ್ಲಿ 90 ದಶಕದ ಬಾಲಿವುಡ್ ನಟಿಯರಂತೆ ಕಾಣಿಸುವ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಈ ಚಿತ್ರಗಳನ್ನು ಎಐ ಪ್ರಾಂಪ್ಟ್‌ಗಳ ಸಹಾಯದಿಂದ ರಚಿಸಲಾಗುತ್ತದೆ. ಇದರಲ್ಲಿ ಹಲವು ಆಯ್ಕೆಗಳಿದ್ದು, ವೈಟ್ ಸ್ಯಾರಿ, ಬ್ಲ್ಯಾಕ್ ಸಾರಿ, ಪಾರ್ಟಿ ವೇರ್ ಹೀಗೆ ಯಾವುದಾದರೊಂದು ಪ್ರಾಂಫ್ಟ್ ಅನ್ನು ಆಯ್ಕೆ ಮಾಡಬಹುದು.
ಏನಿದು ‘ನ್ಯಾನೊ ಬನಾನ ಎಐ ಸ್ಯಾರಿ’?
ಇದೊಂದು ಎಐ ಟೂಲ್ ಆಗಿದ್ದು, ಸಾಮಾನ್ಯ ಪೋಟೊವನ್ನು ರೆಟ್ರೊ ಶೈಲಿಯ ಫೋಟೊವಾಗಿ ಪರಿವರ್ತಿಸುವ ಸಾಧನವಾಗಿದೆ. ಚಾಟ್‌ಜಿಪಿಟಿಯ ಪ್ರಾಂಫ್ಟ್ ಸಹಾಯದಿಂದ ಜೆಮಿನಿಯ ‘ನ್ಯಾನೊ ಬನಾನ ಎಐ’ ಟೂಲ್ ಮೂಲಕ ರಚಿಸಲಾಗುತ್ತದೆ. ಹೆಸರೇ ಹೇಳುವಂತೆ ಸೀರೆಯಲ್ಲಿ ಹಳೆಯ ಕಾಲದ ಸಿನಿಮಾ ತಾರೆಯರಂತೆ ಫೋಟೊಗಳು ಕಾಣಿಸುತ್ತವೆ.
ಬಳಕೆ ಹೇಗೆ?
ರೆಟ್ರೊ ಲುಕ್ ರಚಿಸಬೇಕಾದರೆ ಮೊದಲು ಬಳಕೆದಾರರು ತಮ್ಮ ಗೂಗಲ್ ಖಾತೆಯ ಮೂಲಕ ಜೆಮಿನಿ ಲಾಗಿನ್ ಆಗಬೇಕು.
ಜೆಮಿನಿಯಲ್ಲಿ, ಎಐ ಎಡಿಟಿಂಗ್ ಮೋಡ್‌ಗೆ ಪ್ರವೇಶಿಸಬೇಕಾದರೆ, ‘ಇಮೇಜ್ ಎಡಿಟಿಂಗ್ ಪ್ರಯತ್ನಿಸಿ’ ಎಂದು ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ನಂತರ ಬಳಕೆದಾರರು ಒಬ್ಬರೆ ಇರುವ ಪೋಟೊವನ್ನು(ಸೊಲೊ ಇಮೇಜ್) ಅಪ್ಲೊಡ್ ಮಾಡಬೇಕು.
ಈಗಾಗಲೇ ಇರುವ ಪ್ರಾಂಪ್ಟ್ ಒಂದನ್ನು ಇಲ್ಲಿ ಹಾಕಬೇಕು.
ಇದಾದ ಒಂದೇ ಸೆಕೆಂಡಿನಲ್ಲಿ ನಿಮಗೆ ಬೇಕಾದ ಫೋಟೊ ಜನರೇಟ್ ಆಗುತ್ತದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.