
ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ: ಎಐ
ಚಿನ್ನದ ಬೆಲೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಚಿನ್ನ ಖರೀದಿ ಮಾಡಬೇಕು ಎನ್ನುವವರಿಗೆ ಇದರಿಂದ ಸಾಕಷ್ಟು ನಿರಾಸೆಯೂ ಆಗಿದೆ. ಆದರೆ ಪಾರಿವಾಳವೊಂದು ಹಗಲಿನಲ್ಲಿಯೇ ಚಿನ್ನದ ಅಂಗಡಿಗೆ ನುಗ್ಗಿ ₹1ಲಕ್ಷ ಮೌಲ್ಯದ ಚಿನ್ನದ ಸರವನ್ನು ದರೋಡೆ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಜಸ್ಥಾನದ ನಾಗೌರ್‌ನ ದೇಗಾನಾ ನಗರದ ಚಿನ್ನದ ಅಂಗಡಿಯಲ್ಲಿ ಕೆಲವು ಅಕ್ಕಸಾಲಿಗರು ಕುಳಿತು ಆಭರಣಗಳನ್ನು ತಯಾರಿಸುತ್ತಿದ್ದರು. ಈ ವೇಳೆ ಸಾಮಾನ್ಯವೆಂಬಂತೆ ಹಾರಿ ಬಂದ ಪಾರಿವಾಳ ನೇರವಾಗಿ ಚಿನ್ನದ ಸರವನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿಹೋಗಿದೆ. ಇದರಿಂದ ಅಂಗಡಿಯ ಮಾಲೀಕ ದಿಗ್ಬ್ರಮೆಗೊಂಡಿದ್ದಾನೆ.
ತಕ್ಷಣ ಅಂಗಡಿಯವರು ಪಾರಿವಾಳವನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಸರ ಕದ್ದು ಪರಾರಿಯಾದ ಪಾರಿವಾಳ ನೇರವಾಗಿ ಅಂಗಡಿಯ ಛಾವಣಿ ಮೇಲೆ ಕುಳಿತುಕೊಂಡಿತ್ತು. ಜನರ ಗಲಾಟೆಗೆ ಬೆದರಿದ ಪಾರಿವಾಳ ಸರವನ್ನು ಛಾವಣಿಯ ಮೇಲೆಯೇ ಬಿಟ್ಟು ಹಾರಿಹೋಗಿದೆ. ಆಗ ನಿಟ್ಟುಸಿರು ಬಿಟ್ಟ ಅಂಗಡಿ ಮಾಲೀಕ ಸರವನ್ನು ವಶಪಡಿಸಿಕೊಂಡಿದ್ದಾನೆ. ಈ ಘಟನೆಯ ಮಾರುಕಟ್ಟೆಯಲ್ಲಿದ್ದ ಜನರಲ್ಲಿ ಕೂತೂಹಲ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.