ADVERTISEMENT

‘ಎಕ್ಸ್‌’ ಸಿಇಒ ಹುದ್ದೆಗೆ ಲಿಂಡಾ ಯಾಕಾರಿನೊ ರಾಜೀನಾಮೆ

ಏಜೆನ್ಸೀಸ್
Published 9 ಜುಲೈ 2025, 15:46 IST
Last Updated 9 ಜುಲೈ 2025, 15:46 IST
<div class="paragraphs"><p>ಲಿಂಡಾ ಯಾಕಾರಿನೊ</p></div>

ಲಿಂಡಾ ಯಾಕಾರಿನೊ

   

–ರಾಯಿಟರ್ಸ್ ಚಿತ್ರ

ನವದೆಹಲಿ: ಸಾಮಾಜಿಕ ಜಾಲತಾಣ ‘ಎಕ್ಸ್‌’ನ (ಟ್ವಿಟರ್‌) ಸಿಇಒ ಹುದ್ದೆಗೆ ಲಿಂಡಾ ಯಾಕಾರಿನೊ ರಾಜೀನಾಮೆ ಸಲ್ಲಿಸಿದ್ದಾರೆ.

ADVERTISEMENT

ಲಿಂಡಾ ಅವರು ಇಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಎಕ್ಸ್‌’ ಕಂಪನಿಯ ಸಿಇಒ ಆಗಿ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ.

ರಾಜೀನಾಮೆ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಇದೊಂದು ಜೀವಮಾನದ ಅವಕಾಶ. ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುವ, ಕಂಪನಿಯನ್ನು ಪುನರುಜ್ಜೀವನಗೊಳಿಸುವ ಮತ್ತು ‘ಎಕ್ಸ್‌’ ಅನ್ನು ‘ಎವೆರಿಥಿಂಗ್ ಅಪ್ಲಿಕೇಶನ್’ ಆಗಿ ಅಭಿವೃದ್ಧಿಪಡಿಸಲು ಅವಕಾಶ ನೀಡಿದಕ್ಕಾಗಿ ಇಲಾನ್ ಮಸ್ಕ್‌ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದಿದ್ದಾರೆ.

2023ರ ಜೂನ್‌ನಲ್ಲಿ ಟ್ವಿಟರ್‌ನ ಸಿಇಒ ಆಗಿ ಲಿಂಡಾ ಯಾಕಾರಿನೊ ನೇಮಕಗೊಂಡಿದ್ದರು. ಇದಕ್ಕೂ ಮುನ್ನ ಲಿಂಡಾ ಅವರು 2011ರಿಂದಲೂ ಎನ್‌ಬಿಸಿ ಯೂನಿವ‌ರ್ಸಲ್‌ನ ಜಾಹೀರಾತು ಮತ್ತು ಪಾಲುದಾರಿಕೆ ವಿಭಾಗದ ಕಾರ್ಯ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು. 2022ರಲ್ಲಿ ಟ್ವಿಟರ್‌ ಖರೀದಿಸಿದ್ದ ಮಸ್ಕ್‌, ಸಿಇಒ ಆಗಿದ್ದ ಭಾರತದ ಪರಾಗ್ ಅಗರ್‌ವಾಲ್ ಅವರನ್ನು ವಜಾಗೊಳಿಸಿ ತಾವೇ ಅಧಿಕಾರ ವಹಿಸಿಕೊಂಡಿದ್ದರು. ಇದಾದ ಆರು ವಾರಗಳ ಬಳಿಕ ಲಿಂಡಾ ಅಧಿಕಾರ ಸ್ವೀಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.