ADVERTISEMENT

ಕೋವಿಡ್ ಲಸಿಕೆ ಕುರಿತ ತಪ್ಪು ಮಾಹಿತಿ ತೆಗೆದುಹಾಕಲಿದೆ ಟ್ವಿಟರ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 12:18 IST
Last Updated 3 ಮಾರ್ಚ್ 2021, 12:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್ 19 ಲಸಿಕೆ ಕುರಿತು ಜನರು ಮಾಡುವ ತಪ್ಪು ಮಾಹಿತಿಯಿಂದ ಕೂಡಿದ ಟ್ವೀಟ್‌ಗಳನ್ನು ಟ್ವಿಟರ್ ತೆಗೆದುಹಾಕಲಿದೆ. ಜತೆಗೆ ಕೋವಿಡ್ 19 ಲಸಿಕೆ ಕುರಿತು ಅನಗತ್ಯ, ಸುಳ್ಳು ಸಂದೇಶಗಳು ಹಾಗೂ ಅಧಿಕೃತವಲ್ಲದ ಟ್ವೀಟ್ ಇದ್ದರೆ ಅವುಗಳನ್ನು ಲೇಬಲ್ ಮಾಡಲು ಮೈಕ್ರೋಬ್ಲಾಗಿಂಗ್ ತಾಣ ಮುಂದಾಗಿದೆ.

ಟ್ವಿಟರ್ ಹೊಸ ಪಾಲಿಸಿ ಅಪ್‌ಡೇಟ್ ಬಿಡುಗಡೆ ಮಾಡಿದ್ದು, ಲಸಿಕೆ ಅಪಪ್ರಚಾರ ತಡೆಗೆ ಟ್ವಿಟರ್ ಕೈಗೊಂಡಿರುವ ಕ್ರಮಗಳ ಬಗ್ಗೆ ಬ್ಲಾಗ್ ಪೋಸ್ಟ್ ಮಾಡಿ ವಿವರ ನೀಡಿದೆ.

ಸ್ವಯಂಚಾಲಿತ ವ್ಯವಸ್ಥೆ ಮತ್ತು ಟ್ವಿಟರ್ ಉದ್ಯೋಗಿಗಳು ತಪ್ಪು ಮಾಹಿತಿಯ ಫಿಲ್ಟರ್, ಲೇಬಲಿಂಗ್ ಕಾರ್ಯವನ್ನು ಮಾಡಲಿದ್ದಾರೆ. ಕೋವಿಡ್ 19 ಲಸಿಕೆ ಕಾರ್ಯಕ್ರಮ ಪ್ರಸ್ತುತ ಅಗತ್ಯವಾಗಿದ್ದು, ಜನರಿಗೆ ಸೂಕ್ತ ಮಾಹಿತಿಯ ಅಗತ್ಯವಿದೆ. ಆದರೆ ಟ್ವಿಟರ್ ಮೂಲಕ ತಪ್ಪು ಮಾಹಿತಿ ಹರಿಯಬಿಡುವ ಕಾರ್ಯವನ್ನು ನಿಲ್ಲಿಸಲು ಪರಿಣಾಮಕಾರಿ ಕ್ರಮಗಳನ್ನು ಜಾರಿಮಾಡಲಾಗುತ್ತಿದೆ ಎಂದು ಟ್ವಿಟರ್ ಹೇಳಿದೆ.

ADVERTISEMENT

ಲೇಬಲ್ ಮಾಡಲಾದ ಟ್ವೀಟ್, ನೀವು ಆಯ್ಕೆ ಮಾಡಿರುವ ಭಾಷೆಯಲ್ಲೇ ಇದು ತಪ್ಪಾದ ಮಾಹಿತಿ ಹೊಂದಿದ ಟ್ವೀಟ್ ಎಂದು ಸೂಚಿಸುತ್ತದೆ. ಅಲ್ಲದೆ, ಅಧಿಕೃತ ಮತ್ತು ಸರ್ಕಾರಿ, ಆರೋಗ್ಯ ಸಚಿವಾಲಯದ ಮಾಹಿತಿ ಇರುವ ಲಿಂಕ್‌ಗೆ ಪ್ರವೇಶ ಕಲ್ಪಿಸುತ್ತದೆ.

ಜತೆಗೆ ಸತತ ತಪ್ಪು ಮಾಹಿತಿ ಇರುವ ಟ್ವೀಟ್ ಪೋಸ್ಟ್ ಮಾಡುವ ಟ್ವಿಟರ್ ಖಾತೆ ಕುರಿತು ನಿಗಾ ಇರಿಸಲಿದ್ದು, ಹಂತ ಹಂತದ ಬ್ಲಾಕಿಂಗ್ ಕ್ರಮವನ್ನು ಕೂಡ ಟ್ವಿಟರ್ ಅನುಸರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.