ADVERTISEMENT

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಾಲ್‌ವೇರ್‌ ಇರುವ ಕ್ಯಾಮೆರಾ ಆ್ಯಪ್ಸ್!

ಕ್ಯಾಮೆರಾ ಆ್ಯಪ್ಸ್‌ಗಳಲ್ಲಿ ಮಾಲ್‌ವೇರ್‌ ಇರುವ ಕುರಿತು ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2022, 11:15 IST
Last Updated 15 ಜುಲೈ 2022, 11:15 IST
   

ಬೆಂಗಳೂರು: ಗೂಗಲ್‌ನ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವ ಕ್ಯಾಮೆರಾ ಆ್ಯಪ್‌ಗಳಲ್ಲಿ ಮಾಲ್‌ವೇರ್‌ ಇರುವುದಾಗಿ ಮ್ಯಾಕ್ಸಿಮೆ ಇನ್‌ಗ್ರಾವೊ ಎಚ್ಚರಿಕೆ ನೀಡಿದ್ದಾರೆ.

ಫ್ರಾನ್ಸ್‌ನ ಎವಿನಾ ಟೆಕ್‌ನಲ್ಲಿ ಭದ್ರತಾ ಸಂಶೋಧಕರಾಗಿರುವ ಮ್ಯಾಕ್ಸಿಮೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಾಲ್‌ವೇರ್‌ ತೊಂದರೆಗೊಳಗಾಗಿರುವ ಆ್ಯಪ್‌ಗಳ ವಿವರ ಬಿಡುಗಡೆ ಮಾಡಿದ್ದಾರೆ.

ಫನ್ನಿ ಕ್ಯಾಮೆರಾ ಮತ್ತು ರೇಝರ್ ಕೀಬೋರ್ಡ್ ಆ್ಯಂಡ್ ಥೀಮ್ ಎಂಬ ಎರಡು ಆ್ಯಪ್‌ಗಳಲ್ಲಿನ ಭದ್ರತಾ ಲೋಪವನ್ನು ಬಳಸಿಕೊಂಡು ಮಾಲ್‌ವೇರ್‌ ಹರಿಯಬಿಡಲಾಗಿದೆ ಎಂದು ಮ್ಯಾಕ್ಸಿಮೆ ಹೇಳಿದ್ದಾರೆ.

ADVERTISEMENT

ಈ ಕುರಿತು ಅವರು ಗೂಗಲ್‌ ಪ್ಲೇ ಸ್ಟೋರ್‌ಗೆ ವಿವರ ನೀಡಿದ ಕೂಡಲೇ, ಗೂಗಲ್ ಈ ಎರಡು ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ.

ಆದರೆ, ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿರುವವರು ಈ ಎರಡು ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದು ಉತ್ತಮ. ಜತೆಗೆ ಉತ್ತಮ ಆ್ಯಂಟಿವೈರಸ್ ಬಳಸುವುದರಿಂದ ಇಂತಹ ಮಾಲ್‌ವೇರ್‌, ವೈರಸ್‌ಗಳಿಂದ ದೂರವಿರಬಹುದು ಎಂದು ಭದ್ರತಾ ಸಂಶೋಧಕರು ತಿಳಿಸಿದ್ದಾರೆ.

ಮಾಲ್‌ವೇರ್‌ ದಾಳಿಗೆ ಸಿಲುಕಿರುವ ಆ್ಯಪ್‌ಗಳ ವಿವರ ಇಲ್ಲಿದೆ. ಇವುಗಳನ್ನು ನೀವು ನಿಮ್ಮ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಬಳಸುತ್ತಿದ್ದರೆ, ಕೂಡಲೇ ಅನ್‌–ಇನ್‌ಸ್ಟಾಲ್ ಮಾಡುವುದು ಒಳಿತು.

Vlog Star Video Editor,

Creative 3D Launcher,

Wow Beauty Camera,

Gif Emoji Keyboard,

Freeglow Camera,

Coco Camera v1.1,

Funny Camera by KellyTech,

Razer Keyboard & Theme by rxcheldiolola.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.