ADVERTISEMENT

60 ಡಾಲರ್ ಹೂಡಿಕೆ ಮಾಡಿ, 3,200 ಡಾಲರ್ ಸಂಪಾದಿಸಿದ ಬಾಲಕ!

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 11:37 IST
Last Updated 31 ಜನವರಿ 2021, 11:37 IST
ಗೇಮ್‌ಸ್ಟಾಪ್
ಗೇಮ್‌ಸ್ಟಾಪ್   

ನ್ಯೂಯಾರ್ಕ್: ಸ್ಯಾನ್ ಆಂಟೋನಿಯೊದ 10ರ ಬಾಲಕ ಜೇಡಿನ್ ಕಾರ್ ಎಂಬಾತನಿಗೆ ಗೇಮಿಂಗ್ ಮೇಲೆ ವಿಪರೀತ ಆಸಕ್ತಿ. ಆತನ ಆಸಕ್ತಿಯನ್ನು ಗಮನಿಸಿದ ತಾಯಿ ನಿನಾ ಕಾರ್, 2019ರಲ್ಲಿ ಮಗನ ಹೆಸರಿನಲ್ಲಿ ಗೇಮ್‌ಸ್ಟಾಪ್‌ನ 10 ಷೇರುಗಳನ್ನು ತಲಾ 6.19 ಡಾಲರ್ ಕೊಟ್ಟು ಖರೀದಿಸಿದ್ದರು. ಅಲ್ಲದೆ, ಅವುಗಳನ್ನು ಮಗನಿಗೆ ಉಡುಗೊರೆ ನೀಡಿದ್ದರು.

ಆಗ ಜೇಡಿನ್‌ಗೆ 8 ವರ್ಷವಾಗಿತ್ತು. ಪ್ರಸ್ತುತ ಆ ಗೇಮ್‌ಸ್ಟಾಪ್ ಷೇರುಗಳ ಮೌಲ್ಯ ಏಕಾಏಕಿ ಏರಿಕೆಯಾಗಿದ್ದು, ಒಟ್ಟಾರೆ ಶೇ 1700 ಪಟ್ಟು ಹೆಚ್ಚಳವಾಗಿದೆ. ಇದರಿಂದಾಗಿ ಬಾಲಕನ ಷೇರುಗಳಿಗೆ ದುಬಾರಿ ಮೌಲ್ಯ ದೊರೆತಿದ್ದು, ಹೂಡಿಕೆಗಿಂತ ಶೇ 5000 ಮೌಲ್ಯ ವಾಪಸ್ ದೊರೆತಿದೆ.

ಮಗನಿಗೆ ವಿಡಿಯೊ ಗೇಮ್ ಕುರಿತು ಆಸಕ್ತಿ ಹೆಚ್ಚಳವಾಗುತ್ತಿರುವುದನ್ನು ಗಮನಿಸಿದ ತಾಯಿ, ಆತನಿಗೆ ಹೂಡಿಕೆಯ ಪಾಠ ಹೇಳಿಕೊಡಬೇಕು ಎಂದು ಮಗನ ಹೆಸರಿನಲ್ಲಿಯೇ ಸರ್ಟಿಫಿಕೇಟ್ ರಚಿಸಿ, ಬಳಿಕ ಆನ್‌ಲೈನ್ ಟೆಂಪ್ಲೇಟ್ ಒಂದನ್ನು ತಯಾರಿಸಿಕೊಟ್ಟಿದ್ದರು. ಬಳಿಕ ಗೇಮ್‌ಸ್ಟಾಪ್‌ನಲ್ಲಿ ಪುಟ್ಟದೊಂದು ಮಾಲಿಕತ್ವವನ್ನೂ ಕೊಡಿಸಿದ್ದರು. ಇದು ಆತನಿಗೆ ನೀಡಿದ ಉಡುಗೊರೆಯಾಗಿತ್ತು.

ADVERTISEMENT

ಹೂಡಿಕೆಯಾಗಿದ್ದ ಷೇರುಗಳ ಮೌಲ್ಯ ಏರುಪೇರುಗಳನ್ನು ಪ್ರತಿನಿತ್ಯ ಗಮನಿಸುತ್ತಿದ್ದರು. ಒಂದು ದಿನ ಇದ್ದಕ್ಕಿದ್ದಂತೆ, ಗೇಮ್‌ಸ್ಟಾಪ್ ಷೇರುಗಳ ಮೌಲ್ಯ ಒಮ್ಮೆಲೆ ಏರಿಕೆಯಾಗಿದೆ. ಕೇವಲ 60 ಡಾಲರ್ ಹೂಡಿಕೆ ಮಾಡಿದ್ದ ಷೇರುಗಳು ಬಾಲಕನಿಗೆ 3,200 ಡಾಲರ್ ತಂದುಕೊಟ್ಟಿವೆ. ಅವುಗಳನ್ನು ಬಾಲಕ ಮಾರಾಟ ಮಾಡಿದ್ದಾನೆ. ನಂತರ ಆ ಪೈಕಿ, 2,200 ಡಾಲರ್ ಅನ್ನು ಉಳಿತಾಯ ಮಾಡಿ, ಮತ್ತೆ 1,000 ಡಾಲರ್ ಅನ್ನು ರೊಬೊಲಾಕ್ಸ್ ಗೇಮಿಂಗ್‌ನಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾನೆ.

ಅಲ್ಲದೆ, ಮುಂದೆ ಕೂಡ ಮತ್ತಷ್ಟು ಹೂಡಿಕೆ ಮಾಡಲು ಬಾಲಕ ಮುಂದಾಗಿದ್ದು, ತಾಯಿಯ ಕೊಡುಗೆ ಫಲ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.