ತಾಯಿ ಪ್ರೀತಿ ಸಿಗದೆ ಒಬ್ಬಂಟಿಯಾಗಿದ್ದ ಮರಿ ಕೋತಿ ಪಂಚ್‌ಗೆ ಕೊನೆಗೂ ತನ್ನ ಬಳಗದಿಂದ ಪ್ರೀತಿಯ ಅಪ್ಪುಗೆ ಸಿಕ್ಕಿದೆ. ನಿರ್ಜೀವ ಗೊಂಬೆಯೊಂದಿಗೆ ಕಾಲ ಕಳೆಯುತ್ತಿದ್ದ ಪಂಚ್‌ಗೆ ಹೊಸ ಗೆಳೆಯರ ಆಗಮನ ಹುರುಪು ತಂದಿದೆ.
ಜಪಾನ್‌ನ ಇಚಿಕಾವಾ ನಗರದ ಮೃಗಾಲಯದಲ್ಲಿ ವಾಸಿಸುತ್ತಿರುವ ಏಳು ತಿಂಗಳ ಮರಿ ಕೋತಿ ಪಂಚ್, ಹುಟ್ಟಿದ ಸ್ವಲ್ಪ ಸಮಯಕ್ಕೆ ತಾಯಿಯಿಂದ ತಿರಸ್ಕರಿಸಲ್ಪಟ್ಟಿತ್ತು. ಇತರ ಕೋತಿಗಳು ಪಂಚ್‌ನನ್ನು ದೂರ ತಳ್ಳುತ್ತಿದ್ದವು. ಇದರಿಂದ ಒಬ್ಬಂಟಿಯಾಗಿದ್ದ ಪಂಚ್‌ಗೆ ಮೃಗಾಲಯದ ಸಿಬ್ಬಂದಿ ಕೋತಿಯನ್ನೇ ಹೋಲುವ ಗೊಂಬೆಯೊಂದನ್ನು ನೀಡಿದ್ದರು.
ತನ್ನ ಬಳಗದಿಂದಲೇ ತಿರಸ್ಕೃತವಾದ ಪಂಚ್, ಗೊಂಬೆಯನ್ನೇ ತಾಯಿಯಾಗಿ ನೋಡುತ್ತಿದ್ದು. ತಾನು ಹೋಗುವ ಕಡೆಯಲೆಲ್ಲಾ ಗೊಂಬೆಯನ್ನು ಎಳೆದುಕೊಂಡು ಹೋಗುತ್ತಿತ್ತು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಪಂಚ್ ಪರಿಸ್ಥಿತಿಯನ್ನು ಕಂಡು ಹಲವರು ಮರುಗಿದ್ದರು.
ಇದೀಗ ಹೊಸ ವಿಡಿಯೊವೊಂದು ಬಿಡುಗಡೆಯಾಗಿದ್ದು, ಇತರ ಕೋತಿಗಳೊಂದಿಗೆ ಪಂಚ್ ಆಟವಾಡುತ್ತಿರುವುದು ನೋಡಬಹುದಾಗಿದೆ. ಓನ್ಸಿಂಗ್ ಎಂಬ ಕೋತಿಯು ಪಂಚ್‌ನನ್ನು ಬಿಗಿದಬ್ಬಿಕೊಂಡಿರುವ ದೃಶ್ಯ ಎಲ್ಲರಲ್ಲಿಯೂ ಸಮಾಧಾನದ ಭಾವವನ್ನು ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.