ADVERTISEMENT

48ನೇ ವಸಂತಕ್ಕೆ ಕಾಲಿಟ್ಟ ಮೈಕ್ರೋಸಾಫ್ಟ್ ಕಂಪನಿ: ವಿಡಿಯೊ ಹಂಚಿಕೊಂಡ ಬಿಲ್ ಗೇಟ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2022, 11:03 IST
Last Updated 5 ಏಪ್ರಿಲ್ 2022, 11:03 IST
ಬಿಲ್ ಗೇಟ್ಸ್
ಬಿಲ್ ಗೇಟ್ಸ್   

ನವದೆಹಲಿ: ಮೈಕ್ರೋಸಾಫ್ಟ್ ಕಂಪನಿ ಜನ್ಮತಾಳಿ ಇಂದಿಗೆ (ಮಂಗಳವಾರ) 47 ವರ್ಷಗಳು ಕಳೆದಿವೆ.

1975ರ ಏಪ್ರಿಲ್ 5ರಂದು ಬಿಲ್ ಗೇಟ್ಸ್ ಮತ್ತು ಅವರ ಬಾಲ್ಯದ ಗೆಳೆಯ ಪಾಲ್ ಅಲ್ಲೆನ್ ಅವರು ಮೈಕ್ರೋಸಾಫ್ಟ್ ಕಂಪನಿ ಸ್ಥಾಪಿಸಿದ್ದರು.

ಈ ಸಂದರ್ಭದಲ್ಲಿ ನೆನಪುಗಳನ್ನು ಮೆಲುಕು ಹಾಕಿರುವ ಬಿಲ್‌ ಗೇಟ್ಸ್‌, ಹಳೆಯ ವಿಡಿಯೊವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಕೆಲವು ವರ್ಷಗಳ ಹಿಂದೆ ಮೈಕ್ರೋಸಾಫ್ಟ್ ಕಚೇರಿಯಲ್ಲಿ ಬಿಲ್‌ ಗೇಟ್ಸ್‌ ಕುರ್ಚಿಯ ಮೇಲೆ ಜಿಗಿಯುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

‘ಭೂಮಿ ಮೇಲಿನ ಪ್ರತಿಯೊಬ್ಬ ವ್ಯಕ್ತಿ ಅಥವಾ ಸಂಸ್ಥೆ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಕಂಪನಿಯು ಕೆಲಸ ಮಾಡುತ್ತಿದೆ ಎಂದು ನನಗೆ ಹೆಮ್ಮೆ ಇದೆ’ ಎಂದು ಬಿಲ್ ಗೇಟ್ಸ್‌ ಬರೆದುಕೊಂಡಿದ್ದಾರೆ.

2000ರಲ್ಲಿ ಮೈಕ್ರೋಸಾಫ್ಟ್ ಸಿಇಒ ಹುದ್ದೆಯಿಂದ ಕೆಳಗಿಳಿದ ಬಿಲ್‌ ಗೇಟ್ಸ್‌, ‘ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌’ ಅನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.