ADVERTISEMENT

ಒಂದು ದಿನ ‘ವರ್ಕ್ ಫ್ರಂ ಹೋಮ್’ ಕೇಳಿದ ಉದ್ಯೋಗಿ, ನಿರಾಕರಿಸಿದ ಬಾಸ್;ಮುಂದೇನಾಯ್ತು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2026, 12:43 IST
Last Updated 24 ಫೆಬ್ರುವರಿ 2026, 12:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರ ಕೃಪೆ: ಎಐ

ದುಬೈ ಮೂಲದ ಉದ್ಯಮಿಯೊಬ್ಬರು ತಾವು ತೆಗೆದುಕೊಂಡ ಸಣ್ಣ ತಪ್ಪು ನಿರ್ಧಾರದಿಂದ, ತಮ್ಮ ಕಂಪನಿಯ ಉತ್ತಮ ಉದ್ಯೋಗಿಯೊಬ್ಬರು ಸಂಸ್ಥೆಯನ್ನೇ ತ್ಯಜಿಸಿದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇದೀಗ ಈ ಪೋಸ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

ADVERTISEMENT

ದುಬೈನ ವರ್ಚುವಲ್‌ ಪಾಟ್ನರ್ರ್ ಕಂಪನಿಯ ಸಹ-ಸಂಸ್ಥಾಪಕ ಮಲಿಕ್‌ ಎ. ಎಂಬುವವರು ತಮ್ಮ ಲೀಂಕ್ಡ್ ಇನ್ ಖಾತೆಯಲ್ಲಿ, ‘ನಮ್ಮ ಸಂಸ್ಥೆಯ ಅತ್ಯುತ್ತಮ ಉದ್ಯೋಗಿಯೊಬ್ಬರು ಎರಡು ತಿಂಗಳ ಹಿಂದೆ ಶುಕ್ರವಾರದ ದಿನ ಮನೆಯಿಂದಲೇ ಕೆಲಸ (Work From Home) ಮಾಡುವುದಾಗಿ ವಿನಂತಿಸಿಕೊಂಡರು.

ಇಂದು ಒಬ್ಬರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕೊಟ್ಟರೇ, ನಾಳೆಯಿಂದ ಇತರೆ ಉದ್ಯೋಗಿಗಳೂ ಅದನ್ನೇ ಕೇಳುತ್ತಾರೆ ಎಂದು ಭಾವಿಸಿ ಕಚೇರಿಗೆ ಬರಲು ಹೇಳಿದೆ. ಉದ್ಯೋಗಿ ಏನನ್ನು ಮಾತನಾಡದೇ ‘ಸರಿ’ ಎಂದು ಹೇಳಿ ಕೆಲಸಕ್ಕೆ ಬಂದಿದ್ದರು ಎಂದು  ಬರೆದುಕೊಂಡಿದ್ದಾರೆ.

‘ಈ ಘಟನೆ ನಡೆದ ಎರಡು ತಿಂಗಳ ನಂತರ ಆ ಉದ್ಯೋಗಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಕಂಪನಿಯಿಂದ ಹೊರ ಹೋಗುವಾಗ ವಿದಾಯದ ಭಾಷಣದಲ್ಲಿ, ಅವರು ಶುಕ್ರವಾರದ ಘಟನೆಯನ್ನು ಉಲ್ಲೇಖಿಸಿದರು. ಕಂಪನಿ ತ್ಯಜಿಸಲು ಆ ಘಟನೆ ಒಂದೇ ಕಾರಣ ಆಗಿರಲಿಲ್ಲ. ಆದರೆ, ಅವರು ಪ್ರತಿ ಶುಕ್ರವಾರ ಕಂಪನಿಗೆ ಬರುವಾಗ ಹೆಚ್ಚು ವಾಹನ ದಟ್ಟಣೆಯಿಂದಾಗಿ, ಪ್ರತೀ ಶುಕ್ರವಾರ 2 ಗಂಟೆಗೂ ಹೆಚ್ಚು ಪ್ರಯಾಣಿಸಿ ಕಂಪನಿಗೆ ಬರುತ್ತಿದ್ದರು’ ಎಂದು ತಿಳಿದು ಬಂದಿತು.

ಅಂದು ನಾನು, ಸುಖಾಸುಮ್ಮನೆ ಅವರಿಗೆ ವರ್ಕ್ ಫ್ರಂ ಹೋಮ್ ಅನ್ನು ನಿರಾಕರಿಸಿಬಿಟ್ಟೆ. ಆದ್ದರಿಂದ ಒಬ್ಬ ಒಳ್ಳೆಯ ಉದ್ಯೋಗಿ ಕಂಪನಿಯನ್ನೇ ಬಿಡುವಂತಾಯಿತು. ಈಗ ನಾನು ಹಾಗೆ ಮಾಡುತ್ತಿಲ್ಲ, ಯಾರೇ ಬಂದು ರಜೆ ಹಾಗೂ ಇತರ ಅಗತ್ಯತೆಗಳನ್ನು ಕೇಳಿದರೆ, ಅವರಿಗೆ ಒದಗಿಸುತ್ತೇನೆ. ಇದರಿಂದ ಕಚೇರಿಯಲ್ಲಿ ಯಾವುದೇ ವ್ಯತ್ಯಾಸ ಉಂಟಾಗುತ್ತಿಲ್ಲ. ಉದ್ಯೋಗಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿಲ್ಲ. ಬದಲಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ,’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.