ADVERTISEMENT

ಐದು ಅಡಿ ಉದ್ದದ ಕೊಳಕ ಮಂಡಲವನ್ನು ನುಂಗಿದ ದೈತ್ಯ ನಾಗರ ಹಾವು: ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2022, 7:13 IST
Last Updated 21 ಜೂನ್ 2022, 7:13 IST
ಎರಡು ಹಾವುಗಳ ನಡುವಿನ ಕಾದಾಟದ ದೃಶ್ಯ
ಎರಡು ಹಾವುಗಳ ನಡುವಿನ ಕಾದಾಟದ ದೃಶ್ಯ   

ಅಹಮದಾಬಾದ್: ನಾಗರ ಹಾವೊಂದು ಐದು ಅಡಿ ಉದ್ದದ ಕೊಳಕ ಮಂಡಲವನ್ನು (ರಸೆಲ್ಸ್‌ ವೈಪರ್‌) ನುಂಗುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಜರಾತಿನ ವಡೋದರದ ಕಲಾಲಿಯಲ್ಲಿ ನಾಗರ ಹಾವೊಂದು ಕೊಳಕ ಮಂಡಲವನ್ನು ನುಂಗುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಎರಡು ಹಾವುಗಳ ನಡುವಿನ ಕಾದಾಟವನ್ನು ಗಮನಿಸಿದ ವನ್ಯಜೀವಿ ಸಂರಕ್ಷಣಾ ತಂಡ ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಆದರೆ, ಕೊಳಕ ಮಂಡಲ ಕುರಿತಾದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ADVERTISEMENT

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ದಕ್ಷಿಣ ನೇಪಾಳದಲ್ಲಿ ನಾಗರಹಾವುಗಳು ಹೆಚ್ಚಾಗಿ ಕಾಣಬಹುದಾಗಿದೆ.

ಈ ಹಾವುಗಳ ಚರ್ಮದ ಬಣ್ಣ ಆವಾಸಸ್ಥಾನಕ್ಕೆ ಅನುಗುಣವಾಗಿ ಬದಲಾಗುತ್ತದೆ. ಬಿಳಿ ಗೆರೆಗಳಿಂದ ಕಪ್ಪು ಬಣ್ಣ, ಕ್ರಮೇಣ ಬೂದು ಬಣ್ಣಕ್ಕೆ ಬದಲಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.