ADVERTISEMENT

ಯೋಧರ ಕಾಲಿಗೆ ನಮಸ್ಕರಿಸಿದ ಪುಟ್ಟ ಬಾಲಕಿ: ಹೃದಯ ಸ್ಪರ್ಶಿ ವಿಡಿಯೊ ವೈರಲ್ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2022, 10:28 IST
Last Updated 16 ಜುಲೈ 2022, 10:28 IST
ಯೋಧರ ಕಾಲಿಗೆ ಬಾಲಕಿ ನಮಸ್ಕರಿಸಿದ ದೃಶ್ಯಗಳು (ಇನ್‌ಸ್ಟಾಗ್ರಾಮ್ ಚಿತ್ರ)
ಯೋಧರ ಕಾಲಿಗೆ ಬಾಲಕಿ ನಮಸ್ಕರಿಸಿದ ದೃಶ್ಯಗಳು (ಇನ್‌ಸ್ಟಾಗ್ರಾಮ್ ಚಿತ್ರ)   

‌ಬೆಂಗಳೂರು: ದೇಶ ಸೇವೆಯೇ ಉಸಿರೆಂದು ಬದುಕುತ್ತಿರುವ ಯೋಧರನ್ನು ಕಂಡಾಗ ನಮ್ಮಲ್ಲಿ ಗೌರವ ಭಾವನೆ ಮೂಡುತ್ತದೆ. ಕೆಲವರು ಅವರನ್ನು ನೋಡಿದ ಕೂಡಲೇ ನಮಸ್ಕರಿಸುವುದು, ಕೈ ಕುಲುಕುವುದನ್ನು ಮಾಡುತ್ತಾರೆ. ಆದರೆ, ಪುಟ್ಟ ಬಾಲಕಿಯೊಬ್ಬಳು ನಿಂತಿದ್ದ ಯೋಧರ ಬಳಿ ತೆರಳಿ ಅವರ ಕಾಲಿಗೆ ನಮಸ್ಕರಿಸಿದ್ದಾಳೆ.

ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್‌ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಪ್ಪು ಬಣ್ಣದ ಉಡುಪು ತೊಟ್ಟಿರುವ ಬಾಲಕಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡುತ್ತಾ ಸೈನಿಕರ ಬಳಿಗೆ ಹೋಗಿ ನಿಲ್ಲುತ್ತಾಳೆ. ಆಗ ಅಲ್ಲಿಯೇ ತಮ್ಮ ಇನ್ನೊಬ್ಬರ ಸೈನಿಕರ ಜೊತೆ ಮಾತನಾಡುತ್ತ ನಿಂತಿದ್ದ ಸೈನಿಕರೊಬ್ಬರು ಮಗುವನ್ನು ನೋಡಿದಾಕ್ಷಣ ಬಾಲಕಿಯನ್ನು ಮಾತನಾಡಿಸುತ್ತಾರೆ. ಸೈನಿಕರ ಮುಖವನ್ನೇ ನೋಡುತ್ತಿದ್ದ ಬಾಲಕಿ ಸೈನಿಕನ ಕಾಲಿಗೆ ನಮಸ್ಕರಿಸುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಇವನ್ನೂ ಓದಿ...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.