ADVERTISEMENT

ಲಿಂಕ್ಡ್‌ಇನ್‌ನಲ್ಲಿ 48 ವರ್ಷ ಹಳೆಯ ರೆಸ್ಯೂಮ್ ಹಂಚಿಕೊಂಡ ಬಿಲ್‌ ಗೇಟ್ಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜುಲೈ 2022, 2:27 IST
Last Updated 3 ಜುಲೈ 2022, 2:27 IST
ಮೈಕ್ರೋಸಾಫ್ಟ್ ಸಹ ಸ್ಥಾಪಕ ಬಿಲ್ ಗೇಟ್ಸ್
ಮೈಕ್ರೋಸಾಫ್ಟ್ ಸಹ ಸ್ಥಾಪಕ ಬಿಲ್ ಗೇಟ್ಸ್   

ಬೆಂಗಳೂರು: ಮೈಕ್ರೋಸಾಫ್ಟ್ ಸಹ ಸ್ಥಾಪಕ ಬಿಲ್ ಗೇಟ್ಸ್ ಅವರು ತಮ್ಮ ಲಿಂಕ್ಡ್‌ಇನ್ ಪೇಜ್‌ನಲ್ಲಿ 48 ವರ್ಷ ಹಳೆಯ ಸ್ವವಿವರ ಪತ್ರ (ರೆಸ್ಯೂಮ್) ಒಂದನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮೊದಲ ವರ್ಷದ ಅಭ್ಯಾಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಬಿಲ್ ಗೇಟ್ಸ್ ಅವರು ರೆಸ್ಯೂಮ್ ಅನ್ನು ಸಿದ್ಧಪಡಿಸಿದ್ದರು.

ಬಿಲ್ ಗೇಟ್ಸ್ ಅವರು, ಆಪರೇಟಿಂಗ್ ಸಿಸ್ಟಮ್ಸ್ ಸ್ಟ್ರಕ್ಚರ್, ಡಾಟಾಬೇಸ್ ಮ್ಯಾನೇಜ್‌ಮೆಂಟ್ ಮತ್ತು ಕಂಪ್ಯೂಟರ್ ಗ್ರಾಫಿಕ್ಸ್‌ನಲ್ಲಿ ಪರಿಣತಿ ಹೊಂದಿದ್ದರು ಎಂದು ರೆಸ್ಯೂಮ್‌ನಲ್ಲಿದೆ.

ADVERTISEMENT

ಬಿಲ್ ಗೇಟ್ಸ್ ಅವರ ರೆಸ್ಯೂಮ್ ಪೋಸ್ಟ್ ಸಾಮಾಜಿಕ ತಾಣಗಳಲ್ಲೂ ವೈರಲ್ ಆಗಿದೆ.

ಕೆಲವರು ತಮಾಷೆಯಾಗಿ, ಬಿಲ್ ಗೇಟ್ಸ್ ಲಿಂಕ್ಡ್‌ಇನ್‌ ರೆಸ್ಯೂಮ್ ನೋಡಿ, ನಿಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಉದ್ಯೋಗದ ಆಫರ್ ಕೂಡ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.