ADVERTISEMENT

ರಸ್ತೆಯಿಂದ ಕಲ್ಲು ಗುಡಿಸಿ ಸ್ವಚ್ಛಗೊಳಿಸಿದ ಸಂಚಾರ ಪೊಲೀಸ್: ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜೂನ್ 2022, 16:18 IST
Last Updated 17 ಜೂನ್ 2022, 16:18 IST
ಚಿತ್ರ ಕೃಪೆ – ಟ್ವಿಟರ್‌ನಲ್ಲಿ ವೈರಲ್ ಆಗಿರುವ ವಿಡಿಯೊದಿಂದ ತೆಗೆದ ಸ್ಕ್ರೀನ್‌ಗ್ರ್ಯಾಬ್
ಚಿತ್ರ ಕೃಪೆ – ಟ್ವಿಟರ್‌ನಲ್ಲಿ ವೈರಲ್ ಆಗಿರುವ ವಿಡಿಯೊದಿಂದ ತೆಗೆದ ಸ್ಕ್ರೀನ್‌ಗ್ರ್ಯಾಬ್   

ನವದೆಹಲಿ: ಸಂಚಾರ ಪೊಲೀಸರು ಸಾಮಾನ್ಯವಾಗಿ ಸಂಚಾರ ನಿಯಮಗಳ ಜಾರಿಗೆ ಕ್ರಮ ಕೈಗೊಳ್ಳುವುದು, ದಟ್ಟಣೆ ಹೆಚ್ಚಿರುವ ಸಂದರ್ಭಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದನ್ನು ನೋಡುತ್ತಿರುತ್ತೇವೆ. ಆದರೆ, ಇಲ್ಲೊಬ್ಬರು ಟ್ರಾಫಿಕ್ ಪೊಲೀಸ್ ರಸ್ತೆಯಲ್ಲಿರುವ ಸಣ್ಣ ಜಲ್ಲಿ ಕಲ್ಲುಗಳನ್ನು ಗುಡಿಸಿ ಸ್ವಚ್ಛ ಮಾಡುವ ಮೂಲಕ ವಾಹನ ಸವಾರರಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ.

ನಿಲುಗಡೆ ಸಿಗ್ನಲ್ ಬೆಳಗಿದ ಕೂಡಲೇ ಟ್ರಾಫಿಕ್ ಪೊಲೀಸ್ ರಸ್ತೆ ಗುಡಿಸುತ್ತಿರುವ ವಿಡಿಯೊವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ನಿಮ್ಮನ್ನು ಗೌರವಿಸುತ್ತೇವೆ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊ ಪೋಸ್ಟ್ ಮಾಡಲಾಗಿದೆ. ಪೊಲೀಸ್ ಜತೆ ನಿಂತುಕೊಂಡಿರುವ ಇನ್ನೊಬ್ಬ ವ್ಯಕ್ತಿ, ವಾಹನಗಳು ಸಂಚರಿಸಲು ಆರಂಭಿಸಿದಾಗ ಗುಡಿಸುವ ಕೆಲಸಕ್ಕೆ ತೊಂದರೆಯಾಗದಂತೆ ಅವುಗಳನ್ನು ನಿರ್ವಹಿಸುತ್ತಿರುವುದೂ ವಿಡಿಯೊದಲ್ಲಿ ಕಂಡುಬಂದಿದೆ.

ADVERTISEMENT

ಈ ವಿಡಿಯೊ ಸುಮಾರು 15 ಲಕ್ಷ ವೀಕ್ಷಣೆ ದಾಖಲಿಸಿದ್ದು, ಸುಮಾರು 80,000 ಮಂದಿ ಲೈಕ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.