ADVERTISEMENT

VIDEO | ಅಂಗವೈಕಲ್ಯವನ್ನೇ 'ಆತ್ಮವಿಶ್ವಾಸ' ಮಾಡಿಕೊಂಡ ಜಯಶ್ರೀ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 10:36 IST
Last Updated 12 ಏಪ್ರಿಲ್ 2025, 10:36 IST

ಹೆರಿಗೆಯ ಸಂದರ್ಭದಲ್ಲಿ ಬೆನ್ನುಹುರಿ (Spinal cord) ಸ್ವಾಧೀನ ಕಳೆದುಕೊಂಡ ಕೊಪ್ಪಳ (Koppal) ಜಿಲ್ಲೆ ಇಟಗಿಯ (Itagi) ಜಯಶ್ರೀ ಗುಳಗಣ್ಣನವರ (Jayashree Gulagannanavar) ಹಠಾತ್‌ ಅಂಗವೈಕಲ್ಯಕ್ಕೆ ತುತ್ತಾದರು. ಇಂತಹ ಕಷ್ಟ ಕಾಲದಲ್ಲಿ ಪತಿಯೂ ದೂರವಾದಾಗ ಎದೆಗುಂದದ ಅವರು, ಅಂಗವೈಕಲ್ಯವನ್ನೇ ತಮ್ಮ ಸಾಮರ್ಥ್ಯವಾಗಿಸಿಕೊಂಡರು. ವೀಲ್‌ಚೇರ್‌ ಓಟವನ್ನು ರೂಢಿಸಿಕೊಂಡರು. ಬಿಲ್ಲುಗಾರಿಕೆ (Archery) ಅಭ್ಯಾಸ ಮಾಡಿ, ಜೀವನದ ‘ಗುರಿ’ಯನ್ನು ನಿಗದಿ ಮಾಡಿಕೊಂಡರು. ರೊಟ್ಟಿ (Rotti) ಉದ್ಯಮದ ಮೂಲಕ ಬದುಕು ಕಟ್ಟಿಕೊಂಡ ಜಯಶ್ರೀ, ಈಗ ಇತರರಿಗೂ ಉದ್ಯೋಗಾವಕಾಶ ಮಾಡಿಕೊಟ್ಟಿದ್ದಾರೆ. ಆತ್ಮವಿಶ್ವಾಸವಿದ್ದರೆ ಬದುಕಿನಲ್ಲಿ ಏನಾದರೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನವಾಗಿರುವ ಜಯಶ್ರೀಯವರ ಸ್ಫೂರ್ತಿದಾಯಕ ಕಥನ (Inspiring Story) ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.