ADVERTISEMENT

ಲಕ್ಷಕ್ಕೂ ಅಧಿಕ ಕ್ಲಬ್‌ಹೌಸ್ ಬಳಕೆದಾರರ ಫೋನ್ ನಂಬರ್ ಡಾರ್ಕ್‌ವೆಬ್‌ನಲ್ಲಿ ಸೋರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2021, 11:20 IST
Last Updated 25 ಜುಲೈ 2021, 11:20 IST
ಕ್ಲಬ್‌ಹೌಸ್ ಬಳಕೆದಾರರ ಫೋನ್ ನಂಬರ್ ಸೋರಿಕೆ
ಕ್ಲಬ್‌ಹೌಸ್ ಬಳಕೆದಾರರ ಫೋನ್ ನಂಬರ್ ಸೋರಿಕೆ    

ಬೆಂಗಳೂರು: ಲಕ್ಷಕ್ಕೂ ಅಧಿಕ ಕ್ಲಬ್‌ಹೌಸ್ ಬಳಕೆದಾರರ ಫೋನ್‌ ನಂಬರ್‌ ಸೋರಿಕೆಯಾಗಿದ್ದು, ಡಾರ್ಕ್ ವೆಬ್ ಮೂಲಕ ಮಾರಾಟಕ್ಕೆ ಲಭ್ಯವಾಗಿದೆ.

ಡಾರ್ಕ್‌ವೆಬ್‌ನಲ್ಲಿ ಕ್ಲಬ್‌ಹೌಸ್ ಆ್ಯಪ್ ಬಳಕೆದಾರರ ನಂಬರ್ ಸೋರಿಕೆಯಾಗಿದೆ. ಉಳಿದಂತೆ ಯಾವುದೇ ವಿವರ ಕಂಡುಬಂದಿಲ್ಲ ಎಂದು ಸೈಬರ್‌ ಸೆಕ್ಯುರಿಟಿ ತಜ್ಞ ಜಿತೇನ್ ಜೈನ್ ಟ್ವೀಟ್ ಮಾಡಿದ್ದಾರೆ.

ಅಲ್ಲದೆ, ಕ್ಲಬ್‌ಹೌಸ್ ಬಳಕೆದಾರರ ಫೋನ್‌ ನಂಬರ್ ಜತೆಗೆ ಅವರ ಫೋನ್‌ಬುಕ್ ಕೂಡ ಸೋರಿಕೆಯಾಗಿರುವ ಸಾಧ್ಯತೆಯಿದ್ದು, ಅದರಲ್ಲಿನ ಇತರ ಸಂಪರ್ಕ ಸಂಖ್ಯೆಗಳು ಸೋರಿಕೆಯಾಗಿರಬಹುದು, ಕ್ಲಬ್‌ಹೌಸ್ ಖಾತೆ ಇಲ್ಲದಿದ್ದರೂ, ನಂಬರ್ ಸೋರಿಕೆಯಾಗಿರುವ ಸಾಧ್ಯತೆಯಿದೆ ಎಂದು ಜಿತೇನ್ ಹೇಳಿದ್ದಾರೆ.

ADVERTISEMENT

ಕ್ಲಬ್‌ಹೌಸ್ ಬಳಸಲು ಫೋನ್ ನಂಬರ್ ನೀಡುವುದು ಮುಖ್ಯವಾಗಿದೆ. ಅಲ್ಲದೆ, ಫೋನ್‌ಬುಕ್ ಅಕ್ಸೆಸ್ ಕೂಡ ನೀಡಬೇಕಿದೆ.

ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಕ್ಲಬ್‌ಹೌಸ್, ಯಾವುದೇ ಬಳಕೆದಾರರ ಫೋನ್ ನಂಬರ್ ಸೋರಿಕೆಯಾಗಿಲ್ಲ. ನಮ್ಮ ಬಳಕೆದಾರರ ಭದ್ರತೆ ಮತ್ತು ಖಾಸಗಿತನಕ್ಕೆ ಧಕ್ಕೆಯಾಗಿಲ್ಲ ಎಂದು ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.