ADVERTISEMENT

Explainer: ಹಲವು ಜಾಗತಿಕ ವೆಬ್‌ಸೈಟ್‌ಗಳು ಸ್ಥಗಿತಗೊಳ್ಳುತ್ತಿವೆ ಏಕೆ?

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 3:34 IST
Last Updated 12 ಜೂನ್ 2021, 3:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕ್ಲೌಡ್ ಸೇವಾ ಸಂಸ್ಥೆಯಾದ ‘ಫಾಸ್ಟ್ಲಿ’ಯಲ್ಲಿನ ಸಮಸ್ಯೆಯಿಂದಾಗಿ ಜಾಗತಿಕವಾಗಿ ಮಂಗಳವಾರ ಅಂತರ್ಜಾಲದ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಹೀಗಾಗಿ ಸಿಎನ್ಎನ್‌, ನ್ಯೂಯಾರ್ಕ್‌ ಟೈಮ್ಸ್‌ ಸೇರಿದಂತೆ ಹಲವು ಅಂತರರಾಷ್ಟ್ರೀಯವೆಬ್‌ಸೈಟ್‌ಗಳಲ್ಲಿ ದೋಷ ಕಾಣಿಸಿಕೊಂಡಿತು. ಓದುಗರು ಕೆಲವು ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ ‘ಫಾಸ್ಟ್ಲಿ ಎರರ್‌’ ಎಂಬ ಸಂದೇಶ ಕಾಣಿಸುತ್ತಿತ್ತು.

ಸುದ್ದಿ ಸಂಸ್ಥೆ ಸಿಎನ್‌ಎನ್‌ನ(CNN.com) ವೆಬ್‌ಸೈಟ್‌ಗೆಭೇಟಿ ನೀಡಿದಾಗ ಪರದೆಯ ಮೇಲೆFastly error: unknown domain:cnn.com ಎಂಬ ಸಂದೇಶ ಬಿತ್ತರವಾಗುತ್ತಿತ್ತು.ಇದೇ ರೀತಿಯಲ್ಲೇ ಹಲವು ವೆಬ್‌ಸೈಟ್‌ಗಳಲ್ಲೂ ಇದೇ ಸಂದೇಶ ಬರುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ.

‘ಫಾಸ್ಟ್ಲಿ’ಯಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಯು ಅಂತರ್ಜಾಲ ಸೇವೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ‘ಡಾನ್‌ ಡಿಟೆಕ್ಟರ್‌‘ ಹೇಳಿದೆ. ವಿವಿಧ ವೆಬ್‌ಸೈಟ್‌ಗಳು ಮತ್ತು ಅಂತರ್ಜಾಲ ಸೇವೆಗಳ ಸ್ಥಿತಿಯ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ‘ಡಾನ್‌ ಡಿಟೆಕ್ಟರ್‌‘ ಮಾಡುತ್ತದೆ.

ADVERTISEMENT

ಏನಿದು ಫಾಸ್ಟ್ಲಿ?
ಫಾಸ್ಟ್ಲಿ ಎಂಬುದು ಕ್ಲೌಡ್‌ ಸೇವಾ ಸಂಸ್ಥೆ.ಬಳಕೆದಾರರಿಗೆ ವೆಬ್‌ಸೈಟ್‌ಗಳು ಬಹಳ ಸುಲಭವಾಗಿ ಸಿಗುವಂತೆ ಮಾಡಲು ಫಾಸ್ಟ್ಲಿ ಸಹಕರಿಸುತ್ತದೆ. ಅತಿಹೆಚ್ಚು ಜನ ಭೇಟಿ ನೀಡುವ ಹತ್ತಾರು ವೆಬ್‌ಸೈಟ್‌ಗೆ ಫಾಸ್ಟ್ಲಿ ಸೇವೆಒದಗಿಸುತ್ತದೆ. ಫಾಸ್ಟ್ಲಿಯಿಂದ ಸೇವೆ ಪಡೆಯುತ್ತಿರುವದಿ ನ್ಯೂಯಾರ್ಕ್‌ ಟೈಮ್ಸ್‌, ಸಿಎನ್ಎನ್, ಟ್ವಿಚ್‌ ಮತ್ತು ಯುಕೆ ಸರ್ಕಾರದ ವೆಬ್‌ಸೈಟ್‌ಗಳಲ್ಲಿ ದೋಷ ಕಂಡು ಬಂದಿದೆ.

ದೋಷ ಸಂಭವಿಸಿದ್ದು ಹೇಗೆ?
ಸಿಡಿಎನ್‌ ಸೇವೆಯಲ್ಲಿ ಸಂಭವಿಸಿರಬಹುದಾದ ಪರಿಣಾಮದ ಕುರಿತು ತನಿಖೆ ನಡೆಸಿದ್ದೇವೆ. ದೋಷವನ್ನು ಗುರುತಿಸಿದ್ದೇವೆ ಮತ್ತು ಅದನ್ನು ಸರಿಪಡಿಸಿದ್ದೇವೆ ಎಂದು ಫಾಸ್ಟ್ಲಿ ತಿಳಿಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಫಾಸ್ಟ್ಲಿ, ಜಾಗತಿಕವಾಗಿ ನಮ್ಮ ಪಿಒಪಿಯ ಸೇವೆಯಾದ್ಯಂತ ದೋಷ ಕಂಡು ಬಂದಿರುವುದನ್ನು ಗುರುತಿಸಿದ್ದೇವೆ. ನಮ್ಮ ವಿಶ್ವಮಟ್ಟದ ನೆಟ್‌ವರ್ಕ್‌ ಪುನಃ ಕಾರ್ಯಾಚರಿಸುತ್ತದೆ. ನಮ್ಮ ಸೇವೆ ಲಭ್ಯವಿರುವಂತೆ ನೋಡಿಕೊಳ್ಳುತ್ತೇವೆ ಎಂದಿದೆ.

ಹೆಚ್ಚಿನ ವೆಬ್‌ಸೈಟ್‌ಗಳ ಮೇಲೆ ಪರಿಣಾಮ ಬೀರಿದ್ದೇಕೆ?
ಫಾಸ್ಟ್ಲಿ ಸೇವೆಯನ್ನು ಒದಗಿಸುವ ಪ್ರವೈಡರ್‌ ವೆಬ್‌ಸೈಟ್‌ ಸೇವೆ ಮತ್ತು ಬಳಕೆದಾರರ ನಡುವೆ ಬ್ಯಾಕ್‌ಎಂಡ್‌ನಲ್ಲಿ ಕಾರ್ಯಾಚರಿಸುತ್ತದೆ. ಹಾಗಾಗಿ ಫಾಸ್ಟ್ಲಿಯಲ್ಲಿ ದೋಷ ಕಂಡುಬಂದರೆ ಪೂರ್ತಿ ವೆಬ್‌ಸೈನ್‌ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಬಳಕೆದಾರರಿಗೆ ಅಂತಹ ವೆಬ್‌ಸೈಟ್‌ಗಳಿಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.