ADVERTISEMENT

ತುಳಸಿ ಗಿಡವನ್ನು ಮನೆಯ ಈ ದಿಕ್ಕಿನಲ್ಲಿಟ್ಟು ಪೂಜಿಸಿದರೆ ಒಳಿತಾಗುತ್ತದೆ

ಎಲ್.ವಿವೇಕಾನಂದ ಆಚಾರ್ಯ
Published 13 ನವೆಂಬರ್ 2025, 6:59 IST
Last Updated 13 ನವೆಂಬರ್ 2025, 6:59 IST
<div class="paragraphs"><p>ಚಿತ್ರ:ಎಐ</p></div>
   

ಚಿತ್ರ:ಎಐ

ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವುದರಿಂದ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ ಇದೆ. ತುಳಸಿ ಗಿಡ ಮನೆಯಲ್ಲಿದ್ದರೆ ವಾಸ್ತುದೋಷ ಹಾಗೂ ದುಷ್ಟಶಕ್ತಿಗಳಿಂದ ಪರಿಹಾರ ದೊರೆಯುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ಮನೆಯ ಯಾವ ದಿಕ್ಕಿನಲ್ಲಿ ತುಳಸಿ ಗಿಡ ಇದ್ದರೆ ಶುಭ ಫಲ ಎಂಬುದನ್ನು ತಿಳಿಯೋಣ. 

  • ತುಳಸಿ ಗಿಡವನ್ನು ನೈಋತ್ಯ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ, ಮನೆಯಲ್ಲಿನ ಎಲ್ಲಾ ಕಾರ್ಯಗಳು ಅಡ್ಡಿಯಿಲ್ಲದೆ ಸರಾಗವಾಗಿ ನಡೆಯುತ್ತವೆ ಎಂದು ಹೇಳಲಾಗುತ್ತದೆ.  

    ADVERTISEMENT
  • ತುಳಸಿ ಗಿಡ ಈಶಾನ್ಯ ಭಾಗದಲ್ಲಿ ಇದ್ದರೆ ಮನೆಯಲ್ಲಿ ಹಲವು ಸಮಸ್ಯೆಗಳು ಹಾಗೂ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ನೈರುತ್ಯ ಅಥವಾ ದಕ್ಷಿಣ ದಿಕ್ಕಿನಲ್ಲಿ ತುಳಸಿ ಗಿಡವಿರುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.

  • ತುಳಸಿ ಗಿಡವನ್ನು ಒಣಗದಂತೆ ಆರೈಕೆ ಮಾಡಿ. ಇದು ನಿಮ್ಮ ಕುಟುಂಬವನ್ನು ದೃಷ್ಟ ಶಕ್ತಿಯಿಂದ ರಕ್ಷಿಸುತ್ತದೆ ಎಂಬ ನಂಬಿಕೆ ಇದೆ. 

  • ತುಳಸಿಗೆ ಪ್ರತಿದಿನ ಗೋಧೂಳಿ ಸಮಯದಲ್ಲಿ ಪೂಜೆ ಸಲ್ಲಿಸಿ ಈ ಮಂತ್ರವನ್ನು ಪಠಿಸಿ:

    ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ

    ಯದಗ್ರೇ ಸರ್ವವೇದಾಶ್ಚ ತುಳಸಿ ತ್ವಾಂ ನಮಾಮ್ಯಹಂ’

  • ಪೂಜೆಯಲ್ಲಿ ಈ ಮಂತ್ರವನ್ನು ಪಠಿಸುವುದರಿಂದ ಕಷ್ಟಗಳು ಪರಿಹಾರವಾಗಿ ಲಕ್ಷ್ಮೀನಾರಾಯಣನ ಆಶೀರ್ವಾದ ಲಭಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.