ADVERTISEMENT

ಪತಂಜಲಿಯ ದೂರದೃಷ್ಟಿ ಹಾಗೂ ವಿಸ್ತರಣಾ ಯೋಜನೆಗಳು: ವೆಲ್‌ನೆಸ್‌ ಹಾಗೂ ಅಭಿವೃದ್ಧಿಯತ್ತ ನಮ್ಮ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 10:53 IST
Last Updated 24 ಏಪ್ರಿಲ್ 2025, 10:53 IST
   

ಭಾರತದಲ್ಲಿ ‘ಪತಂಜಲಿ ಆಯುರ್ವೇದ’ವು ಈಗ ಒಂದು ಬ್ರ್ಯಾಂಡ್ ಆಗಿ ಜನಪ್ರಿಯವಾಗಿದೆ. ದೇಶದ ಜನ ಇದನ್ನು ಪೃಕೃತಿದತ್ತ ಆರೋಗ್ಯಕ್ಕಾಗಿ ಎದುರು ನೋಡುತ್ತಾರೆ. ಇಂತಹ ಬ್ರ್ಯಾಂಡ್ ಬೆಳೆದಂತೆ ಅದರ ಭವಿಷ್ಯದ ನಿರೀಕ್ಷೆಗಳು ಮತ್ತು ವಿಸ್ತರಣಾ ಯೋಜನೆಗಳೂ ಬೆಳೆಯುತ್ತವೆ. ಭಾರತದ ಆರೋಗ್ಯ ಹಾಗೂ ವೆಲ್‌ನೆಸ್ ಉದ್ಯಮವನ್ನು ಬೆಳೆಸುವುದು, ಆಯುರ್ವೇದವನ್ನು ಜಾಗತಿಕ ಶಕ್ತಿಯಾಗಿ ಪರಿವರ್ತಿಸುವುದು ಪತಂಜಲಿಯ ಗುರಿಗಳಾಗಿವೆ. ಪತಂಜಲಿಯ ಮುಂದಿನ ಹಾದಿಯೇನು? ಅದರ ವಿಸ್ತರಣಾ ಯೋಜನೆಗಳೇನು? ಅದು ಮುಂದೆ ಭಾರತದ ಆರೋಗ್ಯ ಮತ್ತು ವೆಲ್‌ನೆಸ್ ಪ್ರಪಂಚದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂಬುದನ್ನು ಇಲ್ಲಿ ಆಳವಾಗಿ ತಿಳಿದುಕೊಳ್ಳೋಣ.

ಎಲ್ಲರಿಗೂ ಆರೋಗ್ಯ ಲಭ್ಯವಾಗುವಂತೆ ಮಾಡುವುದು ಜೊತೆಗೆ ಹೆಚ್ಚು ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಎಲ್ಲ ಜನರನ್ನು ಉತ್ತೇಜಿಸುವುದರ ಮೇಲೆ ಪತಂಜಲಿಯ ಭವಿಷ್ಯದ ದೃಷ್ಟಿಕೋನ ನೆಟ್ಟಿದೆ. ಕಂಪನಿಯು ಪ್ರಮುಖವಾಗಿ ನೈಸರ್ಗಿಕ ಮತ್ತು ಸಾವಯವ ಉತ್ಪನ್ನಗಳ ವ್ಯಾಪ್ತಿಯನ್ನು ವಿಸ್ತರಿಸಲು ಯೋಜಿಸಿದೆ. ಈ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಯೋಜಿಸಿದೆ. ಇದರಲ್ಲಿ ಜನರು ಆಯುರ್ವೇದ ಔಷಧಿಗಳಿಂದ ಆರೋಗ್ಯಕರ ಜೀವನವನ್ನು ನಡೆಸಲು ಅನುವು ಮಾಡಿಕೊಡಲಾಗುತ್ತದೆ. ಇಂದಿನ ಜಗತ್ತಿನಲ್ಲಿ ಮೆಂಟಲ್ ಹೆಲ್ತ್ ಬಗ್ಗೆ ಕಾಳಜಿಯೂ ಹೆಚ್ಚಾಗುತ್ತಿದೆ. ಹಾಗಾಗಿ ಮೆಂಟಲ್ ಹೆಲ್ತ್‌ಗೆ ಬೇಕಾಗುವ ಸೌಕರ್ಯಗಳನ್ನು ಒದಗಿಸಿ ಕೊಡುವ ಯೋಜನೆಗಳತ್ತಲೂ ಪತಂಜಲಿ ಗಮನ ಹರಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮೂಲಕ ಪತಂಜಲಿ ದೇಶದ ಕೋಟ್ಯಂತರ ಜನರ ಆರೋಗ್ಯ, ವೆಲ್‌ನೆಸ್ ಹೆಚ್ಚಿಸಲು ಪ್ರಯತ್ನಿಸುತ್ತದೆ.

ಪತಂಜಲಿಯ ಭವಿಷ್ಯದ ಅತ್ಯಂತ ರೋಮಾಂಚಕಾರಿ ಯೋಜನೆಯಂದರೆ ಪತಂಜಲಿ ಬ್ರ್ಯಾಂಡ್‌ನ ಜಾಗತಿಕ ವಿಸ್ತರಣೆ. ಹೌದು, ಪತಂಜಲಿ ಈಗಾಗಲೇ ಅಂತರರಾಷ್ಟ್ರೀಯ ಆರೋಗ್ಯ, ವೆಲ್‌ನೆಸ್ ಮಾರುಕಟ್ಟೆಗಳಲ್ಲಿ ಹೊಸ ಅಲೆಗಳನ್ನು ಸೃಷ್ಟಿಸುತ್ತಿದೆ. ಆಯುರ್ವೇದದ ಪ್ರಯೋಜನಗಳನ್ನು ಜಗತ್ತಿನಾದ್ಯಂತ ತಿಳಿಸಿಕೊಡುವ ಮೂಲಕ ಲಕ್ಷಾಂತರ ಜನರನ್ನು ತಮ್ಮ ಮೂಲಸಂಸ್ಕೃತಿಗೆ ಮರಳುವಂತೆ ಮಾಡುತ್ತಿದೆ. ಜಾಗತಿಕವಾಗಿ ಪತಂಜಲಿ ಉತ್ಪನ್ನಗಳು ಸಿಗುವಂತೆ ಮಾಡುವುದು, ನೈಸರ್ಗಿಕ ಆರೋಗ್ಯ ಮತ್ತು ಸ್ವಾಸ್ಥ್ಯದಲ್ಲಿ ವಿಶ್ವಾಸಾರ್ಹ ಹೆಸರಾಗುವುದು ಕಂಪನಿಯ ಗುರಿಯಾಗಿದೆ. ಸದ್ಯ ಆಯುರ್ವೇದವು ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿರುವುದರಿಂದ, ಈ ಕ್ಷೇತ್ರದಲ್ಲಿ ಪತಂಜಲಿಯ ಅನುಭವ, ಪರಿಣತಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ADVERTISEMENT

ಪತಂಜಲಿಯ ಭವಿಷ್ಯದ ಯೋಜನೆಗಳು ಸ್ವಾವಲಂಬನೆ ಮತ್ತು ಸಮಗ್ರ ಆರೋಗ್ಯದ ಪರಿಕಲ್ಪನೆಯಲ್ಲಿ ಆಳವಾಗಿ ಬೇರೂರಿವೆ. ಸ್ಥಳೀಯವಾಗಿ ಕಚ್ಚಾ ಸಂಪನ್ಮೂಲಗಳನ್ನು ಖರೀದಿಸುವ ಮೂಲಕ ಅದಕ್ಕಾಗಿ ಭಾರತೀಯ ರೈತರನ್ನು, ಗುಡಿ ಕೈಗಾರಿಕೊದ್ಯಮಿಗಳನ್ನು ಬೆಂಬಲಿಸುವ ಮೂಲಕ ಭಾರತವನ್ನು ಹೆಚ್ಚು ಸ್ವಾವಲಂಬಿಯನ್ನಾಗಿ ಮಾಡಲು ಕಂಪನಿಯು ಬದ್ಧವಾಗಿದೆ. ಸುಸ್ಥಿರ ಕೃಷಿ ಪದ್ಧತಿ, ಆಯುರ್ವೇದಕ್ಕೆ ಉತ್ತೇಜನ, ಸ್ಥಳೀಯ ಸಮುದಾಯಗಳ ಸಬಲೀಕರಣದ ಜೊತೆಗೆ ಆರೋಗ್ಯಕರ ರಾಷ್ಟ್ರ ನಿರ್ಮಾಣ ಗುರಿಯನ್ನು ಹೊಂದಿದೆ. ಜನರು ರಾಸಾಯನಿಕ ಉತ್ಪನ್ನಗಳನ್ನು ಆಯ್ಕೆ ಮಾಡುವ ಬದಲು, ನೈಸರ್ಗಿಕ ಉತ್ಪನ್ನಗಳನ್ನು ಕೊಂಡುಕೊಳ್ಳಲು ಪ್ರೋತ್ಸಾಹಿಸುವುದು ಯೋಜನೆಯ ಪ್ರಮುಖ ಭಾಗವಾಗಿದೆ.

ತನ್ನ ವ್ಯವಹಾರ ವಿಸ್ತರಣೆಯ ಭಾಗವಾಗಿ, ಪತಂಜಲಿ ಮುಂದಿನ ಕೆಲವು ವರ್ಷಗಳಲ್ಲಿ ಹಲವಾರು ಆವಿಷ್ಕಾರಗಳನ್ನು ಪರಿಚಯಿಸಲಿದೆ. ಇವು ಬದಲಾಗುತ್ತಿರುವ ಆರೋಗ್ಯ ಪ್ರವೃತ್ತಿಗಳನ್ನು ಪೂರೈಸುವ ಹೊಸ ಉತ್ಪನ್ನಗಳ ರೂಪದಲ್ಲಿರಬಹುದು ಜೊತೆಗೆ ಆಧುನಿಕ ವಿಜ್ಞಾನವು ಪ್ರಾಚೀನ ಚಿಕಿತ್ಸಾ ವಿಧಾನಗಳೊಂದಿಗೆ ಬೆರೆತಿರುವ ಸುಧಾರಿತ ಪರಿಹಾರಗಳಾಗಿರಬಹುದು. ತನ್ನ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಅದರ ವ್ಯಾಪ್ತಿಯನ್ನು ಹೆಚ್ಚಿಸಲು ಸಂಸ್ಥೆಯು ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಹೂಡಿಕೆ ಮಾಡುವ ನಿರೀಕ್ಷೆಯಿದೆ. ಆಯುರ್ವೇದದಲ್ಲಿನ ನಾವೀನ್ಯತೆಗೆ ಬೇಕಾಗಿರುವುದು ಮೊದಲು ಸುಸ್ಥಿರ ಪ್ಯಾಕೇಜಿಂಗ್‌. ಸುಸ್ಥಿರ ಪ್ಯಾಕೇಜಿಂಗ್‌ಗೆ ಒತ್ತು ನೀಡುವ ಮೂಲಕ ಕಂಪನಿಯು ಭವಿಷ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಕಾಣಲಿದೆ.

ಪತಂಜಲಿಯ ದೀರ್ಘಾವಧಿಯ ಯೋಜನೆಗಳು ಭಾರತದ ವಿಶಾಲ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಹೊಂದಿಕೆ ಆಗುತ್ತವೆ. ವಿಶೇಷವಾಗಿ ಪತಂಜಲಿಯ ಯೋಜನೆಗಳು ಭಾರತದ ಆರೋಗ್ಯ, ಕೃಷಿ, ಸಹಕಾರ ಕ್ಷೇತ್ರಕ್ಕೆ ಹೊಂದಿಕೆಯಾಗುತ್ತವೆ. ಸುಸ್ಥಿರ ಕೃಷಿಯನ್ನು ಉತ್ತೇಜಿಸುವ, ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಭಾರತದ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಪತಂಜಲಿ ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಲಿದೆ. ಪತಂಜಲಿ ಹೊಸತನದೊಂದಿಗೆ ಬೆಳೆಯುತ್ತಿರುವುದು ಭಾರತದ ಆರೋಗ್ಯ ಉದ್ಯಮದ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಒಟ್ಟಾರೆಯಾಗಿ ಪತಂಜಲಿಯ ಭವಿಷ್ಯದ ವಿಸ್ತರಣಾ ಯೋಜನೆಗಳು ಆರೋಗ್ಯಕರವಾಗಿರಲಿವೆ ಮತ್ತು ಹೆಚ್ಚು ಸ್ವಾವಲಂಬಿ ಭಾರತವನ್ನು ಸೃಷ್ಟಿಸುವುದರ ಮೇಲೆ ಕೇಂದ್ರೀಕೃತವಾಗಿವೆ. ಆ ಮೂಲಕ ಪತಂಜಲಿ ಸರಳವಾಗಿ ಜಾಗತಿಕ ವೇದಿಕೆ ತಲುಪುತ್ತದೆ. ಪತಂಜಲಿಯ ಹೊಸ ಆವಿಷ್ಕಾರಗಳು ಮತ್ತು ಬದ್ಧತೆಗಳು ಭವಿಷ್ಯದಲ್ಲಿ ಅದನ್ನು ಭಾರತದ ಸ್ವಾಸ್ಥ್ಯ ಉದ್ಯಮವನ್ನು ಮುನ್ನಡೆಸಲು ಸಜ್ಜಾಗಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.