ADVERTISEMENT

ಸಾಮಾನ್ಯ ಜನರಿಗೆ ಬಜೆಟ್‌ನಲ್ಲಿ ಏನೂ ಇಲ್ಲ: ಮಮತಾ ಬ್ಯಾನರ್ಜಿ ಕಿಡಿ

ಪಿಟಿಐ
Published 1 ಫೆಬ್ರುವರಿ 2026, 10:13 IST
Last Updated 1 ಫೆಬ್ರುವರಿ 2026, 10:13 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

– ಪಿಟಿಐ ಚಿತ್ರ

ಕೋಲ್ಕತ್ತ: ಕೇಂದ್ರ ಬಜೆಟ್‌ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಜೆಟ್‌ನಲ್ಲಿ ಸಾಮಾನ್ಯರಿಗೆ ಏನೂ ಇಲ್ಲ ಎಂದು ಕಿಡಿಕಾರಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ದೂರದೃಷ್ಟಿಯಿಲ್ಲದ ಹಾಗೂ ಜನವಿರೋಧಿ ಬಜೆಟ್‌ ಎಂದು ವಾಗ್ದಾಳಿ ನಡೆಸಿದ್ದಾರೆ.

ಯಾವುದೇ ದೂರಾಗಾಮಿ ಯೋಚೆನೆಯಿಲ್ಲದ, ಕ್ರಿಯಾಶೀಲವಲ್ಲದ ಮತ್ತು ಜನವಿರೋಧಿ ಬಜೆಟ್‌ ಇದು. ಇದು ಮಹಿಳೆಯರು, ರೈತರು ಮತ್ತು ಪರಿಶಿಷ್ಟರು ಹಾಗೂ ಒಬಿಸಿ ಸಮುದಾಯದ ವಿರೋಧಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಜೆಟ್‌ನಲ್ಲಿ ಬಂಗಾಳಕ್ಕೆ ಯಾವುದೇ ಕೊಡುಗೆ ಇಲ್ಲ ಎಂದೂ ಮಮತಾ ಆರೋಪಿಸಿದ್ದಾರೆ.

ಇಂದು ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಸತತ 9ನೇ ಬಾರಿಗೆ ಬಜೆಟ್‌ ಮಂಡಿಸಿದ್ದಾರೆ.

SEO Title

SEO Description

What are the reactions to Union Budget 2026 Political leaders industry bodies and the public respond to Nirmala Sitharaman budget announcements with praise criticism and key concerns

Keywords

, , industry reaction budget, ,, budget,budget, union

Slug

/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.