ADVERTISEMENT

ಚಿಪ್ ಸಹಿತ ಇ ಪಾರ್ಸ್‌ಪೋರ್ಟ್: ಪ್ರಸಕ್ತ ಹಣಕಾಸು ವರ್ಷದಲ್ಲಿ ಜಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2022, 8:33 IST
Last Updated 1 ಫೆಬ್ರುವರಿ 2022, 8:33 IST
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್   

ಬೆಂಗಳೂರು: ಜನಸಾಮಾನ್ಯರ ಅನುಕೂಲಕ್ಕಾಗಿ ಚಿಪ್ ಸಹಿತ ಇ ಪಾಸ್‌ಪೋರ್ಟ್‌ಗಳನ್ನು 2022–23ನೇ ಹಣಕಾಸು ವರ್ಷದಿಂದಲೇ ಜಾರಿಗೆ ತರಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಬಜೆಟ್ ಮಂಡಿಸಿದ ಅವರು, ಇ ಪಾಸ್‌ಪೋರ್ಟ್‌ಗಳ ಜತೆಗೆ, ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಜನರಿಗೆ ತ್ವರಿತ ಸೇವೆ ನೀಡಲು ವಿದೇಶಾಂಗ ಸಚಿವಾಲಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿ. ಜತೆಗಿನ ಒಪ್ಪಂದದ ಮೂಲಕ ಪಾಸ್‌ಪೋರ್ಟ್ ಸೇವಾ ಪ್ರೋಗ್ರಾಮ್ ವ್ಯವಸ್ಥೆಯಡಿ ಚಿಪ್ ಸಹಿತ ಇ ಪಾಸ್‌ಪೋರ್ಟ್ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಭದ್ರತಾ ವೈಶಿಷ್ಟ್ಯ ಮತ್ತು ಸುಲಲಿತ ಗ್ರಾಹಕ ಅನುಭವ ಇದರಿಂದ ಲಭ್ಯವಾಗಲಿದೆ.

ADVERTISEMENT

ಬಯೋಮೆಟ್ರಿಕ್ಸ್ ಸುಧಾರಣೆ, ಕೃತಕ ಬುದ್ಧಿಮತ್ತೆ, ಅತ್ಯಾಧುನಿಕ ಡೇಟಾ ಅನಾಲಿಟಿಕ್ಸ್ ಮತ್ತು ಅಟೋ ರೆಸ್ಪಾನ್ಸ್‌ನಂತಹ ವೈಶಿಷ್ಟ್ಯಗಳನ್ನು ವಿದೇಶಾಂಗ ಸಚಿವಾಲಯ ಜಾರಿಗೆ ತರಲಿದ್ದು, ಜನರಿಗೆ ತ್ವರಿತ ಮತ್ತು ಗರಿಷ್ಠ ಸೇವೆಗಳನ್ನು ಒದಗಿಸಲು ಅನುಕೂಲವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.