ADVERTISEMENT

Budget 2025 | ನವೋದ್ಯಮಗಳಿಗೆ ನವೋತ್ಸಾಹ: ₹10ಸಾವಿರ ಕೋಟಿ ನಿಧಿಗಳ ಸಂಚಯ ಬಿಡುಗಡೆ

ಪಿಟಿಐ
Published 1 ಫೆಬ್ರುವರಿ 2025, 7:20 IST
Last Updated 1 ಫೆಬ್ರುವರಿ 2025, 7:20 IST
<div class="paragraphs"><p>ನಿರ್ಮಲಾ ಸೀತಾರಾಮನ್, ನವೋದ್ಯಮ</p></div>

ನಿರ್ಮಲಾ ಸೀತಾರಾಮನ್, ನವೋದ್ಯಮ

   

(ಪಿಟಿಐ, ಐಸ್ಟೋಕ್ ಚಿತ್ರ)

ನವದೆಹಲಿ: ದೇಶದಲ್ಲಿ ನವೋದ್ಯಮಗಳ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತೊಂದು ಕಂತಿನ ₹10 ಸಾವಿರ ಕೋಟಿ ನಿಧಿಗಳ ಸಂಚಯ (Fund of Funds) ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ADVERTISEMENT

ಸಂಸತ್ತಿನಲ್ಲಿ ಇಂದು (ಫೆ.1) ದಾಖಲೆಯ ಸತತ 8ನೇ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್, ಈ ಕುರಿತು ಮಾಹಿತಿ ನೀಡಿದರು.

ನವೋದ್ಯಮಗಳ ಮೂಲಕ ನಾವೀನ್ಯತೆಯನ್ನು ಉತ್ತೇಜಿಸಲು ಆದ್ಯತೆ ನೀಡಲಾಗಿದೆ.

ಈವರೆಗೆ ದೇಶದಲ್ಲಿ 1.5 ಲಕ್ಷ ಸ್ಟಾರ್ಟ್‌ಅಪ್‌ಗಳಿಗೆ ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಮಾನ್ಯತೆ ನೀಡಿವೆ.

ಸ್ಟಾರ್ಟ್‌ಅಪ್ ಇಂಡಿಯಾದ ಕ್ರಿಯಾ ಯೋಜನೆಯನ್ನು 2016ರ ಜನವರಿ 16ರಂದು ಆರಂಭಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.