ADVERTISEMENT

ಮರಳಿನಲ್ಲಿ ಮೂಡಿಬಂದ 2026–27ನೇ ಸಾಲಿನ ಬಜೆಟ್‌ ಕಲಾಕೃತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2026, 6:04 IST
Last Updated 1 ಫೆಬ್ರುವರಿ 2026, 6:04 IST
   

ನವದೆಹಲಿ: 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು(ಭಾನುವಾರ) ಮಂಡಿಸುತ್ತಿದ್ದಾರೆ. ಈ  ಹಿನ್ನಲೆ ಮರಳು ಕಲಾವಿದ, ಪದ್ಮಶ್ರೀ ವಿಜೇತ ಸುದರ್ಶನ್ ಪಟ್ನಾಯಕ್ ಅವರು ಮರಳಿನಲ್ಲಿ ಈ ಬಾರಿಯ ಬಜೆಟ್ ಕಲಾಕೃತಿಯನ್ನು ನಿರ್ಮಿಸಿದ್ದಾರೆ.

ಸುದರ್ಶನ್ ಪಟ್ನಾಯಕ್ ಅವರು ನಿರ್ಮಿಸಿರುವ ಮರಳು ಕಲಾಕೃತಿಯಲ್ಲಿ, ‘ಕಡಲ ತೀರದಲ್ಲಿ ಮರಳಿನ ರಾಶಿಯ ಗೋಪುರವಿದ್ದು, ಅದರಲ್ಲಿ ಕೆಂಪು ಬಣ್ಣದ ಟ್ಯಾಬ್ಲೆಟ್ ಕಾಲಾಕೃತಿಯ ಮೇಲೆ 2026-27ನೇ ಸಾಲಿನ ಕೇಂದ್ರ ಬಜೆಟ್‌ಗೆ ಸ್ವಾಗತ.  ವಿಕಸಿತ ಭಾರತ,  ಬುಲೆಟ್ ಟ್ರೇನ್, ಕೇಸರಿ, ಬಳಿ, ಹಸಿರು ತ್ರಿವರ್ಣವನ್ನು ಕಾಣಬಹುದು. ಈ ಕಾಲಾಕೃತಿಗೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ವಿಕಸಿತ ಭಾರತ' ಎನ್ನುವ ಪರಿಕಲ್ಪನೆಯು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಯೋಜನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT