ನವದೆಹಲಿ: ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಔಡಿ, ತನ್ನ ಎಲ್ಲಾ ಮಾದರಿಯ ಕಾರಿನ ದರವನ್ನು ಶೇ 2ರಷ್ಟು ಹೆಚ್ಚಿಸಿದೆ. ಈ ಪರಿಷ್ಕೃತ ದರವು ಮೇ 15ರಿಂದ ಜಾರಿಗೆ ಬರಲಿದೆ.
ವಿನಿಮಯ ದರ ಏರಿಕೆ ಮತ್ತು ತಯಾರಿಕಾ ವೆಚ್ಚದಲ್ಲಿ ಹೆಚ್ಚಳಗೊಂಡಿದೆ. ಇದನ್ನು ಸರಿದೂಗಿಸಲು ದರ ಏರಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಔಡಿ ಇಂಡಿಯಾ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಶುಕ್ರವಾರ ತಿಳಿಸಿದ್ದಾರೆ.
ಎ4, ಕ್ಯೂ5, ಕ್ಯೂ7 ಮತ್ತು ಆರ್‌ಎಸ್ ಇ–ಟ್ರೋನ್ ಜಿಟಿ ಸೇರಿ ವಿವಿಧ ಶ್ರೇಣಿಯ ಕಾರುಗಳನ್ನು ಕಂಪನಿಯು, ಭಾರತದಲ್ಲಿ ಮಾರಾಟ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.