ಮುಂಬೈ: 2024–25ನೇ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ವಾಣಿಜ್ಯ ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣ ಹಾಗೂ ಠೇವಣಿ ಸಂಗ್ರಹದಲ್ಲಿ ಇಳಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸಾಲ ನೀಡಿಕೆಯು ಶೇ 12.6ರಷ್ಟು ಹಾಗೂ ಠೇವಣಿ ಸಂಗ್ರಹವು ಶೇ 11.7ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಡಿಸೆಂಬರ್ ತ್ರೈಮಾಸಿಕದಲ್ಲಿ ಕ್ರಮವಾಗಿ ಶೇ 11.8ರಷ್ಟು ಹಾಗೂ ಶೇ 11ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ.
ಬ್ಯಾಂಕ್‌ಗಳ ಒಟ್ಟು ಸಾಲದ ಪೈಕಿ ವೈಯಕ್ತಿಕ ಸಾಲದ ಪಾಲು ಹೆಚ್ಚಿದೆ (ಶೇ 31.5ರಷ್ಟು) ಎಂದು ವಾಣಿಜ್ಯ ಬ್ಯಾಂಕ್‌ಗಳ ಸಾಲದ ವಿವರ ಕುರಿತು ಪ್ರಕಟಿಸಿರುವ ಆರ್‌ಬಿಐ ವರದಿ ತಿಳಿಸಿದೆ.
ಒಟ್ಟು ಸಾಲದಲ್ಲಿ ಕೃಷಿ ಮತ್ತು ಕೈಗಾರಿಕೆಗಳಿಗೆ ನೀಡುವ ಸಾಲವು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ವ್ಯಾಪಾರ, ಫೈನಾನ್ಸ್, ವೃತ್ತಿಪರ ಹಾಗೂ ಇತರೆ ಸೇವೆಗಳಿಗೆ ನೀಡುವ ಸಾಲದ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಒಟ್ಟು ಠೇವಣಿಗಳ ಪೈಕಿ ಟರ್ಮ್ ಠೇವಣಿ ಸಂಗ್ರಹ ಶೇ 14.3 ಹಾಗೂ ಉಳಿತಾಯ ಠೇವಣಿ ಸಂಗ್ರಹವು ಶೇ 5.1ರಷ್ಟು ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.