ADVERTISEMENT

ಇ.ವಿ. ಬ್ಯಾಟರಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ: ಕೇಂದ್ರ ಸಾರಿಗೆ ಸಚಿವಾಲಯ

ಪಿಟಿಐ
Published 3 ಜನವರಿ 2026, 15:25 IST
Last Updated 3 ಜನವರಿ 2026, 15:25 IST
<div class="paragraphs"><p>ಇ.ವಿ. ಚಾರ್ಜಿಂಗ್</p></div>

ಇ.ವಿ. ಚಾರ್ಜಿಂಗ್

   

ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ (ಇ.ವಿ) ಬ್ಯಾಟರಿಗಳಿಗೆ ಆಧಾರ್‌ ಮಾದರಿಯಲ್ಲಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸಾರಿಗೆ ಸಚಿವಾಲಯ ಸಿದ್ಧಪಡಿಸಿದೆ.

ಈ ಬಗೆಯಲ್ಲಿ ವಿಶಿಷ್ಟ ಸಂಖ್ಯೆಯನ್ನು ನೀಡಿದಾಗ, ಆ ಬ್ಯಾಟರಿಗಳ ಪುನರ್ಬಳಕೆಯು ಹೆಚ್ಚು ದಕ್ಷವಾಗಲು ಸಾಧ್ಯ ಎಂದು ಸಚಿವಾಲಯ ಹೇಳಿದೆ.

ADVERTISEMENT

ಸಚಿವಾಲಯ ಹೊರಡಿಸಿರುವ ಕರಡು ನಿಯಮಗಳ ಪ್ರಕಾರ, ಬ್ಯಾಟರಿ ತಯಾರಕರು ಅಥವಾ ಆಮದು ಮಾಡಿಕೊಳ್ಳುವವರು ಪ್ರತಿ ಬ್ಯಾಟರಿಗಳಿಗೆ 21 ಅಂಕಿಗಳ ‘ಬ್ಯಾಟರಿ ಪ್ಯಾಕ್ ಆಧಾರ್ ಸಂಖ್ಯೆ’ (ಬಿಪಿಎಎನ್‌) ನೀಡುವುದು ಕಡ್ಡಾಯವಾಗಲಿದೆ.

ಬಿಪಿಎಎನ್‌ ಸಂಖ್ಯೆಯು ಬ್ಯಾಟರಿಯ ಮೇಲೆ ಸ್ಪಷ್ಟವಾಗಿ ಕಾಣಿಸುವಂತೆ ಇರಬೇಕು, ಸಂಖ್ಯೆಯನ್ನು ಅಳಿಸಿಹಾಕಲು ಆಗದಂತಹ ಜಾಗದಲ್ಲಿ ಅದನ್ನು ನಮೂದಿಸಬೇಕು ಎಂದು ಕರಡು ನಿಯಮದಲ್ಲಿ ಹೇಳಲಾಗಿದೆ.

ಬಿಪಿಎಎನ್‌ ಸಂಖ್ಯೆಯು ಬ್ಯಾಟರಿಯ ತಯಾರಿಕೆಯಿಂದ ಆರಂಭಿಸಿ, ಅದರ ಬಳಕೆ, ಪುನರ್ಬಳಕೆ, ಅದನ್ನು ಕೊನೆಯಲ್ಲಿ ವಿಲೇವಾರಿ ಮಾಡುವವರೆಗಿನ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.