ADVERTISEMENT

ಸಕ್ಕರೆ ದಾಸ್ತಾನು ವಿವರ ಸಲ್ಲಿಕೆಗೆ ನಾಳೆ ಕೊನೆ ದಿನ

ಪಿಟಿಐ
Published 15 ಅಕ್ಟೋಬರ್ 2023, 15:29 IST
Last Updated 15 ಅಕ್ಟೋಬರ್ 2023, 15:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಸಕ್ಕರೆ ವ್ಯಾಪಾರದಲ್ಲಿ ತೊಡಗಿರುವ ಎಲ್ಲರೂ ತಮ್ಮಲ್ಲಿರುವ ಸಕ್ಕರೆ ದಾಸ್ತಾನು ವಿವರವನ್ನು ಅಕ್ಟೋಬರ್‌ 17ರೊಳಗೆ ಆಹಾರ ಸಚಿವಾಲಯದ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು. ಈ ಆದೇಶ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ವ್ಯಾಪಾರಿಗಳಿಗೆ ಸರ್ಕಾರ ಎಚ್ಚರಿಕೆ ನೀಡಿದೆ. 

ಆಹಾರ ಸಚಿವಾಲಯವು ಸೆಪ್ಟಂಬರ್‌ 23ರಂದು ಆದೇಶ ಜಾರಿ ಮಾಡಿ, ಸಕ್ಕರೆ ದಾಸ್ತಾನು ವ್ಯಾಪಾರದಲ್ಲಿ ತೊಡಗಿರುವ ಎಲ್ಲ ಮಾರಾಟಗಾರರು ಪ್ರತಿ ವಾರ ತಮ್ಮಲ್ಲಿರುವ ಸಕ್ಕರೆ ದಾಸ್ತಾನು ವಿವರವನ್ನು ವೆಬ್‌ಸೈಟ್‌ನಲ್ಲಿ ದಾಖಲೆ ಮಾಡುವಂತೆ ತಿಳಿಸಿತ್ತು. ಆದರೆ ಹೆಚ್ಚಿನ ವ್ಯಾಪಾರಿಗಳು ಇದುವರೆಗೂ ಸಕ್ಕರೆ ದಾಸ್ತಾನು ಮಾಹಿತಿ ಸಲ್ಲಿಸಿಲ್ಲ. ಮಾರಾಟಗಾರರು ದಾಸ್ತಾನು ಮಾಹಿತಿ ನೀಡದೆ ಇರುವುದು ಸಕ್ಕರೆ ಮಾರುಕಟ್ಟೆಯ ಸಮತೋಲನಕ್ಕೆ ಅಡ್ಡಿಯಾಗುತ್ತಿದೆ. ವ್ಯಾಪಾರಿಗಳು ಅಕ್ಟೋಬರ್ 17ರೊಳಗೆ ಸಕ್ಕರೆ ದಾಸ್ತಾನು ಮಾಹಿತಿ ನೀಡಬೇಕು. ಇದು ಅವರಿಗೆ ಕೊನೆಯ ಅವಕಾಶ. ನಿಯಮ ಉಲ್ಲಂಘಿಸಿದರೆ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆಹಾರ ಸಚಿವಾಲಯ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.