ADVERTISEMENT

ತಯಾರಿಕಾ ವಲಯ: ಎರಡನೆಯ ಸ್ಥಾನಕ್ಕೆ ಭಾರತ

ಪಿಟಿಐ
Published 24 ಆಗಸ್ಟ್ 2021, 20:58 IST
Last Updated 24 ಆಗಸ್ಟ್ 2021, 20:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ತಯಾರಿಕಾ ವಲಯದ ಉದ್ದಿಮೆಗಳು ಕೆಲಸ ಮಾಡಲು ಬಯಸುವ ರಾಷ್ಟ್ರಗಳ ಸಾಲಿನಲ್ಲಿ ಭಾರತವು ವಿಶ್ವಮಟ್ಟದಲ್ಲಿ ಎರಡನೆಯ ಸ್ಥಾನ ಪಡೆದುಕೊಂಡಿದೆ. ಇದುವರೆಗೆ ಅಮೆರಿಕವು ಈ ಸ್ಥಾನದಲ್ಲಿ ಇತ್ತು. ಚೀನಾ ದೇಶವು ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ.

ರಿಯಲ್ ಎಸ್ಟೇಟ್‌ ಕನ್ಸಲ್ಟೆಂಟ್ ಸಂಸ್ಥೆ ‘ಕುಶ್‌ಮನ್‌ ಆ್ಯಂಡ್‌ ವೇಕ್‌ಫೀಲ್ಡ್‌’ ಈ ಪಟ್ಟಿಯನ್ನು ಸಿದ್ಧಪಡಿಸಿದೆ. ಯುರೋಪ್‌, ಉತ್ತರ ಮತ್ತು ದಕ್ಷಿಣ ಅಮೆರಿಕ, ಏಷ್ಯಾ–ಪೆಸಿಫಿಕ್ ಪ್ರದೇಶದ 47 ದೇಶಗಳನ್ನು ಸಂಸ್ಥೆಯು ಪರಿಗಣಿಸಿದೆ.

ಅಮೆರಿಕವು ಈಗ ಮೂರನೆಯ ಸ್ಥಾನಕ್ಕೆ ಇಳಿಕೆ ಕಂಡಿದೆ. ಕೆನಡಾ, ಜೆಕ್ ಗಣರಾಜ್ಯ, ಇಂಡೊನೇಷ್ಯಾ, ಲಿಥುವೇನಿಯಾ, ಥೈಲ್ಯಾಂಡ್, ಮಲೇಷ್ಯಾ ಮತ್ತು ಪೋಲೆಂಡ್ ದೇಶಗಳು ಅಮೆರಿಕದ ನಂತರದ ಸ್ಥಾನಗಳಲ್ಲಿ ಇವೆ.

ADVERTISEMENT

ತಯಾರಿಕಾ ವಲಯದ ಉದ್ದಿಮೆಗಳು ಭಾರತದ ಬಗ್ಗೆ ಹೆಚ್ಚೆಚ್ಚು ಆಸಕ್ತಿ ತೋರಿಸುತ್ತಿರುವುದನ್ನು ಇದು ಸೂಚಿಸುತ್ತದೆ ಎಂದು ಸಂಸ್ಥೆಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.